KGF-2 ಸಿನಿಮಾ ಕುರಿತು ಯಶ್ ತಾಯಿ ಪ್ರತಿಕ್ರಿಯೆ ಕಂಡು ನೆಟ್ಟಿಗರು ಗರಂ ! ಕಮೆಂಟ್ ಬಾಕ್ಸ್ನಲ್ಲಿ ಆ’ಕ್ರೋಶ ವ್ಯಕ್ತಪಡಿಸಿದ ಜನರು.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಕಡೆಗೆ ಎಲ್ಲರನ್ನು ತಿರುಗಿ ನೋಡಿರುವಂತೆ ಮಾಡಿರುವ KGF-2 ಸಿನಿಮಾ ಟೀಸರ್ ಮೂಲಕ ಮತ್ತಷ್ಟು ಸದ್ದು ಮಾಡಿದೆ. ಟೀಸರ್ ಬಿಡುಗಡೆ ಮುನ್ನವೇ ಲೀಕ್ ಆದರೂ ಕೂಡ ಎಲ್ಲಾ ರೆಕಾರ್ಡ್ ಗಳನ್ನು ಉಡಿಸ್ ಮಾಡುತ್ತಾ ಹಾಲಿವುಡ್ ನಿಂದ ಹಿಡಿದು ಬಾಲಿವುಡ್ ನವರಿಗೆ ಯಾವುದೇ ಚಿತ್ರ ಮಾಡದ ದಾಖಲೆಗಳನ್ನು ಕೆಜಿಎಫ್-2 ತನ್ನ ಹೆಸರಿಗೆ ಬರೆಸಿಕೊಂಡಿದೆ. ಇದನ್ನು ನೋಡಿದರೇ ಸಿನಿಮಾ ಯಾವ ರೇಂಜಿಗೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ. ಹೀಗೆ ವಿಶ್ವದ ಚಿತ್ರರಂಗವನ್ನು ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿರುವ ಕೆಜಿಎಫ್ ಟು ಸಿನಿಮಾದ ಹೀರೋ ಯಶ್ ರವರು ಟೀಸರ್ ಮೂಲಕ ಕೆಲವೇ ಕೆಲವು ಸೆಕೆಂಡ್ಗಳಲ್ಲಿ ಕಮಲ್ ಮಾಡಿದ್ದಾರೆ.

ಇಂತಹ ಸಂತೋಷದ ಸಂದರ್ಭದಲ್ಲಿ ಯಶ್ ರವರ ತಾಯಿ ಮಾತನಾಡಿರುವ ಒಂದು ಚಿಕ್ಕ ಮಾತು ನೆಟ್ಟಿಗರನ್ನು ಗರಮ್ ಆಗುವಂತೆ ಮಾಡಿದೆ. ಹೌದು ಸ್ನೇಹಿತರೇ ಟೀಸರ್ ಕುರಿತು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ರಾಕಿ ಬಾಯ್ ಅವರ ತಾಯಿ ಮಾತನಾಡುವಾಗ ನಿರ್ಮಾಪಕರ ಕುರಿತು ಸಂತಸ ವ್ಯಕ್ತಪಡಿಸಿ ಎಲ್ಲಾ ಸಿನಿಮಾಗಳಿಗೂ ಈ ರೀತಿಯ ನಿರ್ಮಾಪಕರು ಸಿಗುವಂತಾಗಲಿ ಸಾಕಷ್ಟು ಹಣವನ್ನು ಇಷ್ಟೊಂದು ಧೈರ್ಯವಾಗಿ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಾ ಟೀಸರ್ ಯಶಸ್ಸಿನ ಕುರಿತು ಮಾತನಾಡುವಾಗ ಕೆಜಿಎಫ್ ಟು ಸಿನಿಮಾ ತಂಡ ಹಾಗೂ ಯಶ್ ರವರು ಕೇವಲ ಕನ್ನಡಿಗರ ಆಸ್ತಿ ಮಾತ್ರವಲ್ಲ ಅವರಿಬ್ಬರು ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದು ಸಂತಸದಲ್ಲಿ ಬಂದ ಮಾತುಗಳಾದರೂ ಕೂಡ ಇದನ್ನು ಕೇಳಿದ ಕೂಡಲೇ ನೆಟ್ಟಿಗರು ಗರಮ್ ಆಗಿದ್ದು ಯಶ್ ಅವರ ಮೇಲೆ ನಮಗೆ ಅಪಾರವಾದ ಗೌರವವಿದೆ. ಆದರೆ ದೇಶದ ಆಸ್ತಿ ಎಂದು ಕೆಲವೇ ಕೆಲವು ಮಹಾನ್ ನಾಯಕರನ್ನು ಕರೆಯಲಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕರು ಮಾತ್ರ ದೇಶದ ಆಸ್ತಿಯಾಗುತ್ತಾರೆ ದಯವಿಟ್ಟು ನಿಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಆ’ಕ್ರೋಶ ವ್ಯಕ್ತಪಡಿಸಿದ್ದಾರೆ

Get real time updates directly on you device, subscribe now.