ತೆಂಗಿನಕಾಯಿಯ ಮಾಡುವ ಈ ಚಿಕ್ಕ ಕೆಲಸ ನಿಮಗೆ ಲಕ್ಷಿ ದೇವಿಯ ಕೃಪೆ ತರುತ್ತದೆ. ಏನು ಮಾಡಬೇಕು ಗೊತ್ತಾ??

3

Get real time updates directly on you device, subscribe now.

ತೆಂಗಿನಕಾಯಿ ಎಂದರೆ ಶ್ರೀಫಲ ಎನ್ನಲಾಗುತ್ತದೆ. ಅದೇ ಕಾರಣಕ್ಕಾಗಿ ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶ್ರೀಫಲ ವನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ಪೂಜೆಯು ತೆಂಗಿನಕಾಯಿ ಇಲ್ಲದೇ ಅಪೂರ್ಣ ಎಂದು ನಂಬಲಾಗಿದೆ. ಅದೇ ಕಾರಣಕ್ಕಾಗಿ ತೆಂಗಿನಕಾಯಿ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಆದರೆ ಇಷ್ಟು ಸರಳವಾಗಿ ಕಾಣುವ ಈ ತೆಂಗಿನಕಾಯಿ ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಹೆಚ್ಚು ಉಪಯುಕ್ತವಾಗಿದೆ ಮತ್ತು ನಿಮ್ಮ ಜೀವನದಿಂದ ಬಡತನವನ್ನು ತೆಗೆದುಹಾಕಬಹುದು ಎನ್ನಲಾಗುತ್ತದೆ.

ಅಷ್ಟೇ ಅಲ್ಲಾ ಇದನ್ನು ಈ ರೀತಿ ಬಳಸಿದರೆ ಸಂಪತ್ತಿನ ಮಳೆಯಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇಂದು ನಾವು ತೆಂಗಿನಕಾಯಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ನೀಡಿದ್ದೇವೆ, ಅದರ ಸಹಾಯದಿಂದ ಲಕ್ಷ್ಮಿ ತಾಯಿಯ ಆಶೀರ್ವಾದವನ್ನು ಪಡೆಯ ಬಹುದು ಮತ್ತು ಹಣದ ಕೊರತೆಯನ್ನು ತೆಗೆದುಹಾಕಬಹುದು. ಆದ್ದರಿಂದ ಈ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ವ್ಯವಹಾರದಲ್ಲಿನ ನಷ್ಟಕ್ಕಾಗಿ: ನೀವು ಮಾಡುತ್ತಿರುವ ವ್ಯವಹಾರದಲ್ಲಿ ನಿರಂತರ ನಷ್ಟವಾಗಿದ್ದರೆ, ಗುರುವಾರ, ತೆಂಗಿನಕಾಯಿ ತೆಗೆದುಕೊಂಡು ಅದನ್ನು ಒಂದೂವರೆ ಮೀಟರ್ ಹಳದಿ ಬಟ್ಟೆಯಲ್ಲಿ ಸುತ್ತಿ, ವಿಷ್ಣು ದೇವಸ್ಥಾನದಲ್ಲಿ ಒಂದು ಜೋಡಿ ಜನಿವಾರ ಮತ್ತು ಒಂದೂವರೆ KG ಹಳದಿ ಸಿಹಿ ತಿಂಡಿಯನ್ನು ನೀಡಿ, ಮತ್ತು ನಿಮ್ಮ ಕಷ್ಟಗಳನ್ನು ಬಗೆಹರಿಸುವಂತೆ ದೃಢ ನಿಶ್ಚಯದಿಂದ ಪ್ರಾರ್ಥನೆ ಮಾಡಿ. ಹೀಗೆ ಮಾಡುವುದರಿಂದ ವ್ಯವಹಾರದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಲಕ್ಷ್ಮಿ ತಾಯಿಯಯ ಕೃಪೆಗೆ ಪಾತ್ರರಾಗಲು: ಶುಕ್ರವಾರ ಮುಂಜಾನೆ ಎದ್ದು ಸ್ನಾನ ಮಾಡಿ ಭಗವಾನ್ ಶ್ರೀ ಗಣೇಶನ ಮತ್ತು ತಾಯಿ ಮಹಾಲಕ್ಷ್ಮಿ ಅವರನ್ನು ಪೂಜಿಸಿ. ಪೂಜೆಯಲ್ಲಿ ತೆಂಗಿನಕಾಯಿ ಇರಿಸಿ. ಪೂಜಿಸಿದ ನಂತರ, ಈ ತೆಂಗಿನಕಾಯಿಯನ್ನು ನಿಮ್ಮ ಬೀರು ಅಥವಾ ಲಾಕರ್ ನಲ್ಲಿ ಇರಿಸಿ. ಸಂಜೆ ಈ ತೆಂಗಿನಕಾಯಿ ತೆಗೆದು ಗಣೇಶ ದೇವಸ್ಥಾನದಲ್ಲಿ ಅರ್ಪಿಸಿ. ಸತತ ಐದು ಶುಕ್ರವಾರ ಇದನ್ನು ಮಾಡಿ. ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರವಾಗುತ್ತವೆ.

ಸಾಲ ವಿಮೋಚನೆಗಾಗಿ: ತೆಂಗಿನಕಾಯಿಯ ಮೇಲೆ ಮಲ್ಲಿಗೆ ಎಣ್ಣೆಯೊಂದಿಗೆ ಬೆರೆಸಿದ ಸಿಂಧೂರದೊಂದಿಗೆ ಸ್ವಸ್ತಿಕ ಚಿಹ್ನೆಯನ್ನು ರಚಿಸಿ. ಲಡ್ಡು ಅಥವಾ ಬೆಲ್ಲ ದೊಂದಿಗೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅದನ್ನು ಅವರ ಪಾದಕ್ಕೆ ಅರ್ಪಿಸಿ ಮತ್ತು ಋಣ ವಿಮೋಚನಾ ಮಂಗಳ ಸ್ತೋತ್ರವನ್ನು ಪಠಿಸಿ. ನೀವು ತಕ್ಷಣದ ಪ್ರಯೋಜನಗಳನ್ನು ಪಡೆಯುತ್ತೀರಿ.

Get real time updates directly on you device, subscribe now.