ರಮೇಶ್ ಅರವಿಂದ್ ಮಗಳ ಮದುವೆಗೆ ಡಿ ಬಾಸ್ ಕಡೆಯಿಂದ ಬಂತು ಅಚ್ಚರಿಯ ಉಡುಗೊರೆ ! ಏನು ಗೊತ್ತಾ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಎವರ್ಗ್ರೀನ್ ಹೀರೋ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿರಪರಿಚಿತರಾಗಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ವೀಕೆಂಡ್ ವಿತ್ ರಮೇಶ್ ಖ್ಯಾತಿಯ ರಮೇಶ್ ಅರವಿಂದ್ ರವರ ಮಗಳು ನಿಹಾರಿಕಾ ರವರು ಕಳೆದ ಕೆಲವು ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಮೇಶ್ ಅರವಿಂದ್ ರವರ ಮಗಳು ನಿಹಾರಿಕಾ ರವರು ಅಕ್ಷಯ್ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಜೀವನದ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ದೇಶದ ಎಲ್ಲೆಡೆಯಿಂದ ಕರೋನ ಕಾರಣದಿಂದ ಸಮಾರಂಭಗಳನ್ನು ನಿಯಮಿತ ಆಪ್ತರೊಂದಿಗೆ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ರಮೇಶ್ ಅರವಿಂದ್ ರವರ ಕುಟುಂಬದವರು ಕೂಡ ಕೇವಲ ಕೆಲವೇ ಕೆಲವು ಆಪ್ತ ಸ್ನೇಹಿತರಿಗೆ ಆಹ್ವಾನ ನೀಡಿ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಮದುವೆ ಮಾಡಿ ಮುಗಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಿಂದ ಅಷ್ಟೇ ಅಲ್ಲದೆ ವಿವಿಧ ಚಿತ್ರರಂಗದ ನಾಯಕ ನಟರು ಕೂಡ ರಮೇಶ್ ಅರವಿಂದ್ ರವರ ಮಗಳಿಗೆ ಶುಭ ಹಾರೈಸಿದ್ದಾರೆ. ಇನ್ನು ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಡಿ ಬಾಸ್ ದರ್ಶನ್ ರವರು ಮದುವೆಗೆ ಹೋಗದೆ ಇದ್ದರೂ ವಿಶೇಷ ಉಡುಗೊರೆಯನ್ನು ರಮೇಶ್ ಅರವಿಂದ್ ರವರ ಮಗಳಿಗೆ ಕಳುಹಿಸಿಕೊಟ್ಟಿದ್ದು ವಿಶೇಷ ಶುಭಾಶಯಗಳ ಜೊತೆ ವಿಶೇಷ ಉಡುಗೊರೆಯನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ.

ಹೌದು ಸ್ನೇಹಿತರೇ ಡಿ ಬಾಸ್ ಖ್ಯಾತಿಯ ದರ್ಶನ್ ರವರು ರಮೇಶ್ ಅರವಿಂದ್ ಅವರ ಮಗಳ ಮದುವೆಗೆ ಲ್ಯಾಬ್ ಡಾರ್ ಜಾತಿಯ ಮುದ್ದಾದ ನಾಯಿಮರಿಗಳನ್ನು ಅದರ ಜೊತೆಗೆ ತಮ್ಮದೇ ಆದ ತೋಟದಿಂದ ಕೆಲವೊಂದು ಸಸಿಗಳನ್ನು ವಿಶೇಷವಾಗಿ ನಿಹಾರಿಕಾ ಮತ್ತು ಅಕ್ಷಯ್ ದಂಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ದರ್ಶನ ರವರು ಮೈಸೂರಿನಲ್ಲಿ ತಮ್ಮದೇ ಆದ ತೋಟ ನಿರ್ಮಾಣ ಮಾಡಿ, ಬಿಡುವಿನ ಸಮಯದಲ್ಲಿ ತೋಟದಲ್ಲಿ ಸಾಕಷ್ಟು ಕಾಲವನ್ನು ಇತ್ತೀಚೆಗೆ ಕಳೆಯುತ್ತಿದ್ದಾರೆ. ಇದೀಗ ಅದೇ ತೋಟದಿಂದ ಸಸಿಗಳನ್ನು ಹೊಸ ಜೀವನಕ್ಕೆ ಕಾಲಿಡುತ್ತಿರುವ ರಮೇಶ್ ಅರವಿಂದ್ ರವರ ಪುತ್ರಿ ನಿಹಾರಿಕಾ ರವರಿಗೆ ಕಳುಹಿಸಿ ಶುಭಕೋರಿದ್ದಾರೆ.

Get real time updates directly on you device, subscribe now.