ಒಮ್ಮೆಲೆ ಖುಲಾಯಿಸಿದ ಟಿಕ್ ಟಾಕ್ ಸೋನು ಶ್ರೀನಿವಾಸಗೌಡ ಅದೃಷ್ಟ ! ಏನು ಗೊತ್ತಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಹುಶಹ ನೀವು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಟಿಕ್ ಟಾಕ್ ಮಾಡಿ ಸದ್ದು ಮಾಡುತ್ತಿರುವ ಸೋನು ಶ್ರೀನಿವಾಸ್ ಗೌಡ ರವರ ಕುರಿತು ಕೇಳಿರಬಹುದು. ಇವರೆಂದರೆ ಎಲ್ಲಾ ಟ್ರೋಲ್ ಪೇಜ್ ಗಳಿಗೂ ನಿಜಕ್ಕೂ ಹಬ್ಬ. ಸರ್ಕಾರಿ ಶಾಲೆಯ ಬಗ್ಗೆ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ರವರು ತದನಂತರ ಟ್ರೋಲ್ ಪೇಜ್ ಗಳಿಗೆ ಹಲವಾರು ಬಾರಿ ಆಹಾರವಾಗಿದ್ದಾರೆ.

ಇವರನ್ನು ಸಾಕಷ್ಟು ಜನ ಮನಬಂದಂತೆ ಟ್ರೋಲ್ ಮಾಡಿದರೂ ಕೂಡ ಅದು ಇವರಿಗೆ ಸಾಕಷ್ಟು ಪಾಪುಲಾರಿಟಿಯನ್ನು ತಂದುಕೊಟ್ಟಿದೆ. ಟಿಕ್ ಟಾಕ್ ನಲ್ಲಿ ಲಕ್ಷಾಂತರ ಫಾಲೋವರ್ ಗಳನ್ನು ಹೊಂದಿದ್ದ ಸೋನು ಶ್ರೀನಿವಾಸಗೌಡ ರವರು ಟಿಕ್ ಟಾಕ್ ಭಾರತದಿಂದ ಹೊರ ಹೋದ ಬಳಿಕ ಇನ್ಸ್ಟಾಗ್ರಾಮ್ ನಲ್ಲಿ ಹಲವಾರು ಫಾಲೋವರ್ ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಹಲವಾರು ಬಾರಿ ಟ್ರೋಲ್ ಆಗುತ್ತಿದ್ದರೂ ಕೂಡ ಇದೀಗ ಬಹುಶಹ ಈ ಟ್ರೋಲ್ ಗಳಿಂದಲೇ ಇರಬೇಕು ಅವರ ಅದೃಷ್ಟ ಖುಲಾಯಿಸಿದೆ.

ಹೌದು, ಈಗಾಗಲೇ ವೆಬ್ಸಿರೆಸ್ ಗಳಲ್ಲಿ ನಟನೆ ಮಾಡಿರುವ ಸೋನು ಶ್ರೀನಿವಾಸ್ ಗೌಡ ರವರಿಗೆ ಇದೀಗ ಕ್ಯಾಡ್ಬರೀಸ್ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿದೆ. ಧರ್ಮಕೀರ್ತಿ ಸಿನಿಮಾದಲ್ಲಿ ನಾಯಕನಾಗಿ ಬಣ್ಣ ತುಂಬುತ್ತಿದ್ದು, ಅದ್ವಿತಿ ಶೆಟ್ಟಿ ರವರು ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಕ್ಯಾಡ್ಬರೀಸ್ ಸಿನಿಮಾದಲ್ಲಿ ಗ್ಲಾಮರಸ್ ಪಾತ್ರ ಮಾಡಲು ಸೋನು ಶ್ರೀನಿವಾಸ್ ಗೌಡ ರವರು ಆಯ್ಕೆಯಾಗಿರುವುದು ಇದೀಗ ಖಚಿತಗೊಂಡಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Get real time updates directly on you device, subscribe now.