ನೀವು ನಿಮ್ಮ ಹುಡುಗಿಯ ಬಳಿ ಕೇಳಲೇ ಬೇಕಾದ ಪ್ರಶ್ನೆಗಳು ಯಾವ್ಯಾವು ಗೊತ್ತೇ?? ಈ 4 ಪ್ರಶ್ನೆಗಳಿಗೆ ಉತ್ತರ ಕೇಳಿ, ನಂತರ ಸಂಬಂಧ ಮುಂದುವರೆಸಿ

48

Get real time updates directly on you device, subscribe now.

ಮದುವೆ ಎನ್ನುವುದು ಬಹಳ ಮುಖ್ಯವಾದ ಘಟ್ಟವಾಗಿದೆ. ಪ್ರತಿಯೊಬ್ಬರು ತಮ್ಮ ಮದುವೆ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆಗಿಂತ ಮೊದಲು ತಮ್ಮ ಸಂಗಾತಿಯ ಬಗ್ಗೆ ಕೆಲವು ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಹಲವು ಹುಡುಗರಿಗೆ ತಮ್ಮ ಹುಡುಗಿಯ ಬಳಿ ಏನು ಕೇಳಬೇಕು ಎಂದು ಗೊತ್ತಾಗುವುದಿಲ್ಲ. ಮನೆಯಲ್ಲಿ ಅರೇಂಜ್ಡ್ ಮ್ಯಾರೇಜ್ ಮಾಡಲು ಹುಡುಗಿಯನ್ನು ನೋಡಲು ಹೋದಾಗ, ನಿಮ್ಮ ಮನೆಯವರು ಜೊತೆಯಲ್ಲಿ ಇರುತ್ತಾರೆ, ಮದುವೆ ಆಗುವ ಹುಡುಗ ಹುಡುಗಿಯನ್ನು ಮಾತನಾಡಲು ಕಳಿಸಿದಾಗ, ಹುಡುಗಿಯ ಬಳಿ ತಪ್ಪದೇ ಈ ನಾಲ್ಕು ಪ್ರಶ್ನೆಗಳನ್ನು ಕೇಳಿ.

1.ಯಾವ ರೀತಿಯ ಜೀವನ ಸಂಗಾತಿ ಬೇಕೆಂದು ಬಯಸುತ್ತೀರಿ? :- ಪ್ರತಿಯೊಬ್ಬ ಹುಡುಗಿಗೂ ತಮ್ಮ ಬಾಳ ಸಂಗಾತಿ ಹೀಗೆ ಇರಬೇಕು ಎನ್ನುವ ಆಸೆ ಇರುತ್ತದೆ. ಸಾಮಾನ್ಯವಾಗಿ ಹುಡುಗಿಯರಿಗೆ ವಿದ್ಯಾವಂತ, ಆರ್ಥಿಕವಾಗಿ ಸಬಲವಾಗಿರುವ, ಕಾಳಜಿ ತೋರುವ ಹುಡುಗನನ್ನು ಮದುವೆ ಆಗಬೇಕು ಎಂದು ಬಯಸುತ್ತಾರೆ, ಕೆಲವು ಹುಡುಗಿಯರ ಆಯ್ಕೆ ಸರಳ ಹುಡುಗ ಇದ್ದರೆ ಸಾಕು ಎಂದು ಇರುತ್ತದೆ.. ಅವರ ಇಷ್ಟ ಕಷ್ಟ ಹಾಗೂ ಅವರು ಯಾವ ರೀತಿಯ ಸಂಗಾತಿ ಬೇಕು ಎಂದು ನೀವು ಅರ್ಥಮಾಡಿಕೊಂಡರೆ, ಅವರಿಗೆ ಒಳ್ಳೆಯ ಸಂಗಾತಿ ಆಗಿರಬಹುದು.
2.ನಿಮ್ಮ ಹವ್ಯಾಸಗಳು ಏನು ಎಂದು ಕೇಳಿ :- ಸಂಬಂಧಗಳನ್ನು ಗಟ್ಟಿಪಡಿಸಿಕೊಳ್ಳಬೇಕಾದರೆ ಒಬ್ಬರ ಇಷ್ಟ ಹವ್ಯಾಸಗಳನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಹುಡುಗಿಯರ ಹವ್ಯಾಸ ಏನು ಎಂದು ಅರ್ಥ ಮಾಡುಕೊಳ್ಳಿ, ಅವರ ಹವ್ಯಾಸ ಏನು ಎಂದು ಕೇಳಿ, ಸಿನಿಮಾ ನೋಡುವುದು, ಶಾಪಿಂಗ್ ಮಾಡುವುದು, ಮೇಕಪ್ ಮಾಡಿಕೊಳ್ಳುವುದು, ಅಡುಗೆ ಮಾಡುವುದು ಹವೆಗೆ ಅವರ ಹವ್ಯಾಸ ಏನು ಎಂದು ಅರ್ಥಮಾಡಿಕೊಳ್ಳಿ. ಇದರಿಂದ ಮದುವೆಗೆ ಸಂಬಂಧಿಸಿದ ಹಾಗೆ ನಿರ್ಧಾರ ತೆಗೆದುಕೊಳ್ಳಲು ಸುಲಭ ಆಗುತ್ತದೆ.

3.ಸಸ್ಯಾಹಾರಿ ಅಥವಾ ಮಾಂಸಾಹಾರ ,:- ಮದುವೆ ಆಗುವುದಕ್ಕಿಂತ ಮೊದಲು ಹುಡುಗ ಅಥವಾ ಹುಡುಗಿ ವೆಜ್ ಅಥವಾ ನಾನ್ ವೆಜ್ ಯಾವುದನ್ನು ಇಷ್ಟ ಪಡುತ್ತಾರೆ ಎಂದು ತಿಳಿದುಕೊಳ್ಳಿ, ಯಾಕೆಂದರೆ ಸಸ್ಯಾಹಾರ ತಿನ್ನುವವರು ತಮ್ಮ ಎದುರು ಮತ್ತೊಬ್ಬರು ನಾನ್ ವೆಜ್ ತಿನ್ನುವುದನ್ನು ಇಷ್ಟಪಡುವುದಿಲ್ಲ. ಅದೇ ರೀತಿ ನಾನ್ ವೆಜ್ ಇಷ್ಟಪಡುವವರು, ತಮ್ಮ ಸಂಗಾತಿಗೆ ನಾನ್ ವೆಜ್ ತಿನ್ನಲು ಬಲವಂತ ಮಾಡುತ್ತಾರೆ. ಹಾಗಾಗಿ ವೆಜ್ ಅಥವಾ ನಾನ್ ವೆಜ್ ವಿಚಾರವನ್ನು ಮೊದಲೇ ತೀರ್ಮಾನ ಮಾಡಿಕೊಳ್ಳುವುದು ಒಳ್ಳೆಯದು.
4.ಭವಿಷ್ಯದ ಬಗ್ಗೆ ಕೇಳಿ :- ಭವಿಷ್ಯದಲ್ಲಿ ಹೇಗಿರಬೇಕು ಎನ್ನುವುದು ಪ್ರತಿಯೊಬ್ಬರ ವಿವಿಧ ಆಯ್ಕೆ ಆಗಿರುತ್ತದೆ. ಕೆಲವು ಹುಡುಗಿಯರು ಮದುವೆಯ ನಂತರ ಗೃಹಿಣಿಯಾಗಿ ಇರಲು ಇಷ್ಟಪಡುತ್ತಾರೆ. ಇನ್ನು ಕೆಲವರು ಮದುವೆಯ ನಂತರ ಕೆಲಸ ಮಾಡಿ ಆರ್ಥಿಕವಾಗಿ ಸ್ವತಂತ್ರ್ಯವಾಗಿರಬೇಕು ಎಂದು ಬಯಸುತ್ತಾರೆ. ಅದೇ ರೀತಿ ಹುಡುಗರಿಗೂ ಸಹ ಹೆಂಡತಿ ಹೇಗಿರಬೇಕು ಎಂದು ಕನಸು ಇರುತ್ತದೆ. ಹಾಗಾಗಿ ನಿಮಗೆ ಇಷ್ಟ ಆಗುವ ಹುಡುಗಿ ಆಗಿದ್ದರೆ ಮಾತ್ರ ಮದುವೆಗೆ ಒಪ್ಪಿಗೆ ನೀಡಿ.

Get real time updates directly on you device, subscribe now.