ಮದುವೆಯಾದ ಎರಡೂವರೆ ತಿಂಗಳಲ್ಲಿಯೇ ತಾಯಿಯಾದ ಆಲಿಯಾ ಭಟ್, ಆದರೆ ಟ್ರೊಲ್ ಮಾಡಿದ್ದು ದೀಪಿಕಾ ರವರನ್ನು. ಯಾಕೆ ಗೊತ್ತೇ?

0

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಣಬೀರ್ ಕಪೂರ್ ಅವರು ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಆಲಿಯಾ ಭಟ್ ರವರ ಜೊತೆಗೆ ಸ್ನೇಹವನ್ನು ಸಂಪಾದಿಸಿ ನಂತರ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆ ಕೂಡ ಆಗಿದ್ದಾರೆ. ಹೌದು ಗೆಳೆಯ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಮದುವೆಯಾಗಿ ಈಗಾಗಲೇ ಎರಡೂವರೆ ತಿಂಗಳು ಕಳೆದಿದೆ. ಅದಾಗಲೇ ಈ ನವದಂಪತಿಗಳು ಎಲ್ಲರಿಗೂ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.

ಹೌದು ಗೆಳೆಯರೇ ಮೊನ್ನೆಮೊನ್ನೆಯಷ್ಟೇ ಆಲಿಯಾ ಭಟ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರೆಗ್ನೆನ್ಸಿ ಸ್ಕ್ಯಾನ್ ಮಾಡುತ್ತಿರುವ ಫೋಟೋನ ತುಣುಕನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನಮ್ಮ ಜೀವನದಲ್ಲಿ ಮತ್ತೊಬ್ಬ ಅತಿಥಿಯ ಸ್ವಾಗತವನ್ನು ಕೋರಲು ನಾವು ಸಜ್ಜಾಗಿದ್ದೇವೆ ಎಂಬುದಾಗಿ ಹಂಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡ ನವದಂಪತಿಗಳಿಗೆ ಮಗುವಿನ ಕುರಿತಂತೆ ಶುಭಾಶಯಗಳನ್ನು ಕೋರಿದರು. ಆದರೆ ನೆಟ್ಟಿಗರು ಈ ವಿಚಾರದಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರಿಗೆ ಶುಭಾಶಯ ಕೋರುವುದನ್ನು ಬಿಟ್ಟು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹೌದು ಗೆಳೆಯ ಇದಕ್ಕೆ ಕಾರಣ ಕೂಡ ಇದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಕೂಡ ಮದುವೆಯಾಗಿ ಕೇವಲ ಎರಡೂವರೆ ತಿಂಗಳು ಕಳೆದಿವೆ ಅದಾಗಲೇ ಮಕ್ಕಳಾಗುವ ಸಂತೋಷದ ಸುದ್ದಿ ಕೇಳಿಬರುತ್ತಿದೆ. ಆದರೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮದುವೆಯಾಗಿ ಮೂರು ವರ್ಷಗಳೇ ಕಳೆದಿದ್ದರೂ ಕೂಡ ಇದುವರೆಗೂ ಇಂತಹ ಸುದ್ದಿಗಳು ಕೇಳಿ ಬಂದಿಲ್ಲ. ಕೇವಲ ಇದೇ ಮೊದಲ ಬಾರಿಯಲ್ಲ ಸ್ನೇಹಿತರೆ ಪ್ರಿಯಾಂಕ ಚೋಪ್ರಾ ಅನುಷ್ಕಶರ್ಮ ಸೋನಂ ಕಪೂರ್ ಗರ್ಭಿಣಿಯಾದ ವಿಷಯ ಹೊರ ಬಂದ ಸಂದರ್ಭದಲ್ಲಿ ಕೂಡ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಈ ವಿಚಾರವಾಗಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯಸ್ಪದವಾಗಿ ಟೀಕೆ ಮಾಡಿದ್ದರು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.