ಪ್ರೀತಿ ಮಾಡುತ್ತಿರುವ ಹುಡುಗ ತನಗಿಂತ 12 ವರ್ಷ ಚಿಕ್ಕವನು, ಇದಕ್ಕೂ ಮುನ್ನ ಮಲೈಕಾ ವಿಚ್ಛೇದನಕ್ಕೆ ಕಾರಣವಾದ ಅದೊಂದು ಅಫೇರ್. ಏನಾಗಿತ್ತು ಗೊತ್ತೇ?

0

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಅರ್ಜುನ್ ಕಪೂರ್ ಹಾಗೂ ನಟಿ ಆಗಿರುವ ಮಲೈಕ ಅರೋರ ರವರ ಬಗ್ಗೆ ಗೊತ್ತೇ ಇದೆ. ಇವರಿಬ್ಬರ ನಡುವೆ ಹನ್ನೆರಡು ವರ್ಷಗಳ ಅಂತರವಿದ್ದರೂ ಕೂಡ ಇವರಿಬ್ಬರ ನಡುವೆ ಪ್ರೀತಿಗೆ ಯಾವುದೇ ವಯಸ್ಸಿನ ಅಡ್ಡಿ ಇಲ್ಲ. ಹೌದು ಗೆಳೆಯರೇ ಇವರಿಬ್ಬರ ಕಹಾನಿಯಾ ನಿಜವಾದ ಸ್ಟೋರಿಯ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅರ್ಜುನ್ ಕಪೂರ್ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ಬೋನಿಕಪೂರ್ ಅವರ ಸುಪುತ್ರ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಅಷ್ಟೊಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಅವರು ಹೆಚ್ಚು ಸುದ್ದಿಯಾಗುತ್ತಿರುವುದು ಮಲೈಕ ಅರೋರ ರವರ ಪ್ರೀತಿಯ ವಿಚಾರದ ಕುರಿತಂತೆ.

ಹೌದು ಗೆಳೆಯರೆ ಅರ್ಜುನ್ ಕಪೂರ್ ರವರು ಪ್ರಾರಂಭದಲ್ಲಿ ಸಲ್ಮಾನ್ ಖಾನ್ ರವರ ತಂಗಿ ಆಗಿರುವ ಅರ್ಪಿತಾ ರವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ಆಗಿನ್ನೂ ಅರ್ಜುನ್ ಕಪೂರ್ ರವರು ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಅಷ್ಟೇ. ನಂತರ ಅವರು ಅರ್ಪಿತಾ ರವರ ಜೊತೆಗೆ ಓಡಾಡುವುದನ್ನು ಬಿಟ್ಟು ಬಿಡುತ್ತಾರೆ. ನಂತರ ಅವರು ಕಣ್ಣು ಬೀಳುವುದೇ ಸಲ್ಮಾನ್ ಖಾನ್ ರವರ ಸಹೋದರ ಆಗಿರುವ ಅರ್ಬಾಜ್ ಖಾನ್ ರವರ ಪತ್ನಿಯಾಗಿರುವ ಮಲೈಕ ಅರೋರ ರವರ ಮೇಲೆ. ಕೆಲವೇ ವರ್ಷಗಳಲ್ಲಿ ಅರ್ಬಾಜ್ ಖಾನ್ ಹಾಗೂ ಮಲೈಕ ಅರೋರ ನಡುವೆ ವಿವಾಹ ವಿಚ್ಛೇದನ ನಡೆಯುತ್ತದೆ. ಇದಕ್ಕೂ ಮುನ್ನವೇ ಆಗಾಗ ಹಲವಾರು ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು ಅದಕ್ಕೆ ಇವರಿಬ್ಬರೂ ಕೂಡ ನಾವಿಬ್ಬರೂ ಕೇವಲ ಸ್ನೇಹಿತರು ಮಾತ್ರ ಎಂಬುದಾಗಿ ಸ್ಪಷ್ಟನೆ ನೀಡಿದ್ದರು.

ನಂತರ ವಿವಾಹ ವಿಚ್ಛೇದನದ ನಡೆದಮೇಲೆ ಇವರಿಬ್ಬರ ಜೊತೆಯಾಗಿಯೇ ಬಾಳಲು ಪ್ರಾರಂಭಿಸುತ್ತಾರೆ. ಈ ವಿಚಾರ ಹೊರಬಂದಮೇಲೆ ಇವರಿಬ್ಬರು ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅರ್ಜುನ್ ಕಪೂರ್ ಅವರಿಗಿಂತ ಮಲೈಕ ಅರೋರ 12 ವರ್ಷ ದೊಡ್ಡವರಾಗಿದ್ದರು ಕೂಡ ಇವರಿಬ್ಬರ ನಡುವೆ ಪ್ರೀತಿ ಅನ್ನುವುದು ಗಟ್ಟಿಯಾಗಿದ್ದು ಅತಿಶೀಘ್ರದಲ್ಲಿ ಇವರಿಬ್ಬರು ಮದುವೆಯಾಗುತ್ತಾರೆ ಎನ್ನಲಾಗುತ್ತಿದೆ.