ಅಗ್ನಿಪಥ್ ವೀರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಕೋಟ ಶ್ರೀನಿವಾಸ ಪೂಜಾರಿ, ಮಹತ್ವದ ಘೋಷಣೆ ಏನು ಗೊತ್ತೇ?

32

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ದೇಶದಲ್ಲಿ ಈಗ ಪ್ರತಿಯೊಂದು ರಾಜ್ಯದಲ್ಲಿ ಕೂಡ ಅಗ್ನಿಪಥ್ ಎನ್ನುವ ಹೊಸ ಯೋಜನೆಯ ಕುರಿತಂತೆ ಪರ-ವಿರೋಧ ಚರ್ಚೆಗಳು ಸಾಕಷ್ಟು ತಾರಕಕ್ಕೇರಿದೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಅಗ್ನಿ ವೀರರಾಗಿ ಸೇವೆ ಸಲ್ಲಿಸುವ ಅವಕಾಶ ಈ ಯೋಜನೆಯಲ್ಲಿದೆ. ಮೊದಲ ಆರು ತಿಂಗಳು ತರಬೇತಿ ಇರಲಿದ್ದು ಉಳಿದ ಸಮಯದಲ್ಲಿ ಅಗ್ನಿ ವೀರರಾಗಿ ಸೇನೆಯ ವಿವಿಧ ವಿಭಾಗಗಳಲ್ಲಿ ಯೋಧರಾಗಿ ಕಾರ್ಯವನ್ನು ಸಲ್ಲಿಸಲಿದ್ದಾರೆ. ನಾಲ್ಕು ವರ್ಷಗಳ ನಂತರ ಬರೋಬ್ಬರಿ ಹನ್ನೊಂದು ಲಕ್ಷ ರೂಪಾಯಿ ಹಣವನ್ನು ಕೂಡ ಪಡೆಯಲಿದ್ದಾರೆ ಸೇವೆಯ ಸಂದರ್ಭದಲ್ಲಿ ಕೂಡ 2.5 ಲಕ್ಷಕ್ಕೂ ಮೀರಿದ ವಾರ್ಷಿಕ ವೇತನವನ್ನು ಪಡೆದುಕೊಳ್ಳಲಿದ್ದಾರೆ.

ನಿಜಕ್ಕೂ ಕೂಡ ಯುವಕರಿಗೆ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವೂ ದೊರೆಯಲಿದೆ ಹಾಗೂ ನಿರುದ್ಯೋಗಿಗಳಿಗೆ ಕೆಲಸವೂ ಕೂಡ ದೊರೆಯಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ವಿರೋಧಿ ಬಣಗಳು ಜನರಿಗೆ ಬೇರೆಯದೇ ಅರ್ಥ ಕಲ್ಪಿಸುವಂತೆ ಮಾಡಿ ಜನರನ್ನು ಉದ್ವಿಗ್ನಗೊಳಿಸುವಂತೆ ಮಾಡಿದ್ದಾರೆ. ಈಗಾಗಲೇ ಈ ಕಾರಣದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗಿದ್ದು ನಿಜಕ್ಕೂ ಕೂಡ ಜನರು ಇದರ ಅರ್ಥವನ್ನು ತಿಳಿದುಕೊಳ್ಳುವ ರೀತಿಯ ಬೇರೆ ಆಗಿದೆ ಎನ್ನುವುದು ಬೇಸರದ ವಿಚಾರವಾಗಿ. ಅಗ್ನಿಪಥ್ ಯೋಜನೆಯಲ್ಲಿ ಅಗ್ನಿ ವೀರರಾಗಿ ಸೇವೆ ಸಲ್ಲಿಸಿದ ನಂತರ ಸರ್ಕಾರದಿಂದ ಅವರಿಗೆ ಅಗ್ನಿ ವೀರ ಎನ್ನುವ ಬ್ಯಾಡ್ಜ್ ಕೂಡ ದೊರೆಯಲಿದೆ. ನಂತರ ಪೊಲೀಸ್ ಇಲಾಖೆ ಸೇರಿದಂತೆ ಹಲವಾರು ಸರಕಾರಿ ಇಲಾಖೆಗಳಲ್ಲಿ ಅವರಿಗೆ ಕೆಲಸ ಸಿಗುವಂತಹ ಅವಕಾಶವನ್ನು ಕೂಡ ಮೀಸಲಾಗಿರುವ ಲಾಗಿದೆ.

ಇನ್ನು ಇದಕ್ಕೆ ರಾಜ್ಯ ಸರ್ಕಾರದ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ರವರು ನಾಲ್ಕು ವರ್ಷಗಳ ನಂತರ ಅಗ್ನಿ ವೀರರನ್ನು ಶಾಲಾ ಸಂಸ್ಥೆಗಳ ದೈಹಿಕ ಶಿಕ್ಷಕರಾಗಿ ಆಯ್ಕೆ ಮಾಡುವಂತಹ ನಿಟ್ಟಿನಲ್ಲಿ ಶೇಕಡ 75% ಮೀಸಲಾತಿಯನ್ನು ನೀಡಲಾಗುವುದು ಎನ್ನುವುದಾಗಿ ಯೋಜನೆಯನ್ನು ರೂಪಿಸಿದ್ದೇವೆ ಎಂಬುದಾಗಿ ಘೋಷಿಸಿದ್ದಾರೆ. ಒಟ್ಟಾರೆಯಾಗಿ ನಾಲ್ಕು ವರ್ಷಗಳ ನಂತರ ಅಗ್ನಿ ವೀರರು ಏನು ಮಾಡುವುದು ಎನ್ನುವ ಗೊಂದಲಕ್ಕೆ ಕರ್ನಾಟಕ ರಾಜ್ಯ ಸೇರಿದಂತೆ ಹಲವಾರು ರಾಜ್ಯದ ಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.