ಹಳೆ ಕಾಲದ ಪುರುಷರ ರೀತಿ ಶಕ್ತಿವಂತರಾಗಿ ಹೆಂಡತಿಯ ಜೊತೆ ಸುಖ ಜೀವನ ಅನುಭವಿಸಬೇಕು ಎಂದರೆ, ಪುರುಷರು ಏನು ಸೇವಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪುರುಷರ ಜೀವನಶೈಲಿಯನ್ನು ವುದು ಸಾಮಾನ್ಯವಾಗಿ ಸಾಕಷ್ಟು ಆಯಾಸದಿಂದ ಕೂಡಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದಿನವಿಡೀ ಕೆಲಸ ಹಾಗೂ ದಾಂಪತ್ಯ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳಲು ಕೂಡ ಅವರು ಪ್ರಯತ್ನವನ್ನು ಪಡಲೇಬೇಕಾಗುತ್ತದೆ. ಹೀಗಾಗಿ ಪುರುಷರ ಸ್ಟಾಮಿನಾ ಎನ್ನುವುದು ಸಾಕಷ್ಟು ಸ್ಟ್ರಾಂಗ್ ಆಗಿರಬೇಕು. ಇದು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇಬೇಕಾಗಿರುವಂತಹ ವಿಚಾರ.

ಇತ್ತೀಚಿನ ದಿನಗಳಲ್ಲಿ ಒಟ್ಟಾರೆಯಾಗಿ ಆಹಾರವನ್ನು ಯಾವುದೇ ಸಾಧಕ-ಬಾದಕಗಳನ್ನು ಯೋಚಿಸದೆ ತಿನ್ನುವುದರಿಂದ ಆಗಿ ಅವರಲ್ಲಿ ಸ್ಟಾಮಿನಾ ಕಡಿಮೆ ಹಾಗೂ ಆರೋಗ್ಯ ಸಮಸ್ಯೆಗಳು ಕಂಡು ಬರುವುದು ಹೆಚ್ಚಾಗುತ್ತಿದೆ. ಹೀಗಾಗಿ ಪುರುಷರ ಸ್ಟ್ಯಾಮಿನವನ್ನು ಹೆಚ್ಚು ಮಾಡುವಂತಹ ಆರೋಗ್ಯಕರ ಆಹಾರ ಪದಾರ್ಥಗಳು ಯಾವುವು ಎಂಬುದರ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ.

ಈರುಳ್ಳಿ ಬೆಳ್ಳುಳ್ಳಿ; ಪ್ರತಿನಿತ್ಯ ಆಹಾರ ಪದಾರ್ಥಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವಿಸುವುದು ಪುರುಷರ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಎಂಬುದಾಗಿ ಸಾಬೀತಾಗಿದೆ. ಅದರಲ್ಲೂ ವಿಶೇಷವಾಗಿ ಪ್ರತಿದಿನ ಎರಡರಿಂದ ಮೂರು ಎರಡು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದು ಹಾಗೂ ವಿಶೇಷವಾಗಿ ಈರುಳ್ಳಿಯಲ್ಲಿ ಬಿಳಿ ಈರುಳ್ಳಿಯನ್ನು ತಿನ್ನುವುದು ಶಕ್ತಿಯನ್ನು ವರ್ಧಿಸಲು ಇನ್ನಷ್ಟು ಸಹಾಯಕಾರಿಯಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ನೆಲ್ಲಿಕಾಯಿ; ಪ್ರಕೃತಿಯ ಮಡಿಲಿನ ಮತ್ತೊಂದು ಆರೋಗ್ಯಕರ ಆಹಾರ ವಸ್ತುವಾಗಿರುವ ನೆಲ್ಲಿಕಾಯಿ ಕೂಡ ಪುರುಷರ ಸ್ಟಾಮಿನ ವರ್ಧನೆಗೆ ಸಹಕಾರಿಯಾಗುತ್ತದೆ. ನೆಲ್ಲಿಕಾಯಿಯ ನಿರಂತರ ಸೇವನೆಯನ್ನು ವುದು ಕಣ್ಣು ಹಾಗೂ ಕೂದಲಿಗೆ ಸಾಕಷ್ಟು ಸಹಾಯಕಾರಿಯಾಗಲಿದೆ. ನೆಲ್ಲಿಕಾಯಿಯನ್ನು ಒಂದು ಚಮಚ ಆಮ್ಲ ಪುಡಿ ಹಾಗು ಜೇನನ್ನು ಸೇರಿಸಿ ದಿನಕ್ಕೆರಡು ಬಾರಿಯಂತೆ ದೈನಂದಿನ ವಾಗಿ ಸೇವಿಸಿದರೆ ಖಂಡಿತವಾಗಿ ಒಂದು ವೇಳೆ ನಿಮ್ಮ ದಾಂಪತ್ಯ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ಖಂಡಿತವಾಗಿ ನಿವಾರಣೆಯಾಗುತ್ತದೆ.

ಒಣ ಖರ್ಜೂರ; ಒಂದು ವೇಳೆ ನಿಮ್ಮ ರೋಮ್ಯಾನ್ಸ್ ಜೀವನ ನೀರಸವಾಗಿದ್ದರೆ ಒಣ ಖರ್ಜೂರವನ್ನು ಪ್ರತಿ ರಾತ್ರಿ ಬಿಸಿ ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ ನೀವು ಇದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ದಿನಕ್ಕೆ 100 ಗ್ರಾಂ ಒಣ ಖರ್ಜೂರವನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಕೇವಲ ಒಣ ಖರ್ಜೂರ ಮಾತ್ರವಲ್ಲದೆ ಸಾಮಾನ್ಯ ಖರ್ಜೂರವನ್ನು ಕೊಡ ನೀವು ಸೇವಿಸಬಹುದಾಗಿದೆ.

ಅಶ್ವಗಂಧ; ಇದೊಂದು ಪ್ರಾಚೀನ ಆಯುರ್ವೇದ ಔಷಧೀಯ ಭಾಗವಾಗಿದ್ದು ನಿಮ್ಮಲ್ಲಿ ಶುಕ್ರ ಧಾತುವನ್ನು ಹೆಚ್ಚಿಸಲು ಸಹಕಾರಿ ಆಗಿರುತ್ತದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಅರ್ಧ ಚಮಚ ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಸೇವಿಸಿ ಕುಡಿದರೆ ನಿಮ್ಮ ದೇಹದಲ್ಲಿ ಟೆಸ್ಟೋಸ್ಟೆರಾನ್ ಹೆಚ್ಚಳವಾಗುವುದರಿಂದ ಯಾವುದೇ ಅನುಮಾನವಿಲ್ಲ.

ಇದು ವೈಜ್ಞಾನಿಕವಾಗಿ ಹಾಗೂ ವೈದ್ಯರು ಸಲಹೆ ನೀಡಿರುವ ಆರೋಗ್ಯ ದಾಯಕ ವಾಗಿರುವ ಆಹಾರಕ್ರಮ ವಾಗಿದ್ದು ಪುರುಷರಲ್ಲಿ ನಿಜಕ್ಕೂ ಕೂಡ ಇದು ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹುವಿಧದಲ್ಲಿ ಸಹಕಾರಿಯಾಗಲಿದೆ. ವೈದ್ಯರು ಹಾಗೂ ತಜ್ಞರು ಹೇಳುವ ಪ್ರಕಾರ ಈ ಆಹಾರ ಕ್ರಮದಿಂದಾಗಿ ವಿವಾಹನಂತರದ ಹಲವಾರು ಸಮಸ್ಯೆಗಳನ್ನು ಅತ್ಯಂತ ಸಲೀಸಾಗಿ ತೊಡೆದು ಹಾಕಬಹುದಾಗಿದೆ. ಇಂದಿನ ಬ್ಯುಸಿ ದುನಿಯಾದಲ್ಲಿ ಪುರುಷರಾಗಲಿ ಮಹಿಳೆಯರಾಗಲಿ ತಮ್ಮ ಆರೋಗ್ಯದ ಕುರಿತಂತೆ ಹಾಗೂ ಸ್ವಾಸ್ಥ್ಯ ಭರಿತ ಆಹಾರ ಕ್ರಮದ ಕುರಿತಂತೆ ಯಾರೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ.

ಆದರೆ ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಹಲವಾರು ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುವುದು ಖಚಿತವಾಗಿದೆ. ಮಳೆ ಬಂದ ನಂತರ ಕೊಡೆ ಹಿಡಿಯುವ ಮುನ್ನ ಮೊದಲೇ ಕೊಡೆ ತೆಗೆದುಕೊಂಡು ಹೋದರೆ ಉತ್ತಮ ಅಲ್ಲವೇ. ಅದೇ ರೀತಿ ಸಮಸ್ಯೆ ಬರುವ ಮುನ್ನವೇ ಅದಕ್ಕೆ ಎಚ್ಚರಿಕೆ ಕ್ರಮವನ್ನು ಅನುಸರಿಸಿಕೊಂಡು ಹೋದರೆ ನಿಜಕ್ಕೂ ಕೂಡ ಜೀವನ ಎನ್ನುವುದು ಸಾಕಷ್ಟು ಸುಖಮಯವಾಗಿರುತ್ತದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳುವುದನ್ನು ಮರೆಯಬೇಡಿ.