ಪ್ರೇಮ ಪಕ್ಷಿಗಳಂತೆ ಸದಾ ಸುದ್ದಿಯಲ್ಲಿ ಇರುತ್ತಿದ್ದ ಸಾರ ಹಾಗೂ ಶುಭಮ್ ಗಿಲ್ ನಡುವೆ ಏನಾಗಿದೆ ಅಂತೇ ಗೊತ್ತೇ?? ಶುಭಮ್ ಗೆ ಶಾಕ್ ಕೊಟ್ಟರೆ ಸಚಿನ್ ಪುತ್ರಿ??

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಾಗೂ ಐಪಿಎಲ್ ನಲ್ಲಿ ಪಂಜಾಬ್ ಮೂಲದ ಶುಭಮನ್ ಗಿಲ್ ರವರು ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ನಿಜಕ್ಕೂ ಕೂಡ ಶುಭಮನ್ ಗಿಲ್ ರವರು ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸೂಪರ್ಸ್ಟಾರ್ ಆಗಿ ಮಿಂಚು ವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಸಾಮಾನ್ಯವಾಗಿ ಕ್ರಿಕೆಟಿಗರ ಹೆಸರು ಬಾಲಿವುಡ್ ನಟಿಯರ ಜೊತೆಗೆ ತಳುಕು ಹಾಕಿಕೊಳ್ಳುವುದು ನಿಮಗೆಲ್ಲ ಗೊತ್ತಿರುತ್ತದೆ. ಈ ಹಿಂದೆಯೂ ಕೂಡ ಹಲವಾರು ಭಾರತೀಯ ಕ್ರಿಕೆಟಿಗರು ಬಾಲಿವುಡ್ ನಟಿಯರ ಜೊತೆಗೆ ಲವ್ವಲ್ಲಿ ಬಿದ್ದು ಮದುವೆ ಆಗಿರುವುದು ಕೂಡ ಇದೆ.

ಆದರೆ ಯುವ ಕ್ರಿಕೆಟಿಗ ಶುಭಮನ್ ಗಿಲ್ ರವರ ಕುರಿತಂತೆ ಹೇಳುವುದಾದರೆ ಇವರು ಕೂಡ ಲವ್ ನಲ್ಲಿ ಬಿದ್ದಿದ್ದಾರೆ ನಿಜ ಆದರೆ ಬಾಲಿವುಡ್ ನಟಿಯರ ಜೊತೆಗೆ ಅಲ್ಲ ಬದಲಾಗಿ ಕ್ರಿಕೆಟ್ ನ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ರವರ ಮಗಳಾಗಿರುವ ಸಾರ ತೆಂಡೂಲ್ಕರ್ ಅವರ ಜೊತೆಗೆ. ಇದನ್ನು ಇವರಿಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೊಳ್ಳದಿದ್ದರೂ ಕೂಡ ಇವರಿಬ್ಬರು ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಾರೆ ಹಾಗೂ ಆಗಾಗ ಫೋಟೋಗಳಲ್ಲಿ ಕಾಮೆಂಟ್ ಕೂಡ ಮಾಡುತ್ತಾರೆ. ಎಲ್ಲಕ್ಕಿಂತ ಹೆಚ್ಚಿಗೆ ಹಲವಾರು ಬಾರಿ ಭಾರತೀಯ ಕ್ರಿಕೆಟಿಗರು ಈ ಕುರಿತಂತೆ ಪರೋಕ್ಷವಾಗಿ ಶುಭಮನ್ ಗಿಲ್ ರವರನ್ನು ರೇಗಿಸುತ್ತಿದ್ದ ವಿಡಿಯೋಗಳು ಕೂಡ ಹಲವಾರು ಬಾರಿ ವೈರಲ್ ಆಗಿದೆ. ಆದರೆ ಇವರಿಬ್ಬರ ನಡುವೆ ಈಗ ಎಲ್ಲವೂ ಸರಿ ಇದ್ದಂತೆ ಇಲ್ಲ ಎಂಬುದಾಗಿ ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.

ಇತ್ತೀಚಿಗಷ್ಟೇ ಶುಭಮನ್ ಗಿಲ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದೇವತೆಗಳನ್ನು ಯಾವುದು ಪ್ರೀತಿಸಬೇಡಿ ಎಂಬುದಾಗಿ ಫೋಟೋ ಹಾಕಿದ್ದಾರೆ. ಎಲ್ಲರೂ ಕ್ರಿಕೆಟ್ನ ದೇವರು ಸಚಿನ್ ಎನ್ನುತ್ತಾರೆ ಅವರ ಮಗಳಾಗಿರುವ ಸಾರ ದೇವತೆ ಆದಂತಾಯಿತು. ಹೀಗಾಗಿ ಎಲ್ಲರೂ ಕೂಡ ಸಾರಾ ಹಾಗೂ ಶುಭಮನ್ ಇಬ್ಬರು ಕೂಡ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬುದಾಗಿ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಸದ್ಯಕ್ಕೆ ಎಲ್ಲರೂ ಕೂಡ ಇದೇ ವಿಚಾರವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶುಭಮನ್ ಗಿಲ್ ರವರನ್ನು ರೇಗಿಸುತ್ತಿರುವುದಂತೂ ಸುಳ್ಳಲ್ಲ.