ಬಾಲಿವುಡ್ ನಟಿಯರು ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಲಿವುಡ್ ನಟಿಯರಿಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಗಳು ಇನ್ಸ್ಟಾಗ್ರಾಂ ನಲ್ಲಿ ಇರುತ್ತಾರೆ. ಅವರು ಒಂದು ಪೋಸ್ಟ್ ಮಾಡುವುದಕ್ಕೆ ಎಷ್ಟು ರೂಪಾಯಿ ಚಾರ್ಜ್ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 79.4 ಮಿಲಿಯನ್ ಫಾಲೋವರ್ಸ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹೊಂದಿರುವ ಪ್ರಿಯಾಂಕ ಚೋಪ್ರಾ ರವರು ಒಂದು ಪೋಸ್ಟ್ ಮಾಡುವುದಕ್ಕೆ 1.80 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ.

67.4 ಮಿಲಿಯನ್ ಫಾಲೋವರ್ಸ್ ಹೊಂದಿರುವ ದೀಪಿಕಾ ಪಡುಕೋಣೆ ರವರು ಒಂದು ಪೋಸ್ಟ್ ಮಾಡುವುದಕ್ಕೆ 1.5 ಕೋಟಿ ರೂಪಾಯಿ ಶುಲ್ಕ ಪಡೆಯುತ್ತಾರೆ. ಇತ್ತೀಚೆಗಷ್ಟೆ ಮದುವೆಯಾಗಿರುವ ಯುವ ಉದಯೋನ್ಮುಖ ನಟಿ ಆಲಿಯಾ ಭಟ್ ರವರು ಇನ್ಸ್ಟಾಗ್ರಾಮ್ ನಲ್ಲಿ 66.4 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ ಇವರು ಒಂದು ಪೋಸ್ಟ್ ಮಾಡುವುದಕ್ಕೆ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ( ಇವೆಲ್ಲವನ್ನೂ ನಾವು ಮಾತನಾಡುತ್ತಿರುವುದು ಕೇವಲ ಪ್ರಚಾರ ಪೋಸ್ಟ್ ಗಾಗಿ ಮಾತ್ರ ) ಇನ್ನು ಕತ್ರಿನಾ ಕೈಫ್ ರವರು 65.2 ಮಿಲಿಯನ್ ಫಾಲೋವರ್ಸ್ ಅನ್ನು ಇನ್ಸ್ಟಾಗ್ರಾಂ ನಲ್ಲಿ ಹೊಂದಿದ್ದಾರೆ. ಇವರು ಒಂದು ಪ್ರಚಾರದ ಪೋಸ್ಟ್ ಗಾಗಿ ಬರೋಬ್ಬರಿ 97 ಲಕ್ಷ ರೂಪಾಯಿ ಅನ್ನು ಚಾರ್ಜ್ ಮಾಡುತ್ತಾರೆ.

ಇನ್ನು 59 ಮಿಲಿಯನ್ ಫಾಲೋವರ್ಸ್ ನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಂದಿರುವ ವಿರಾಟ್ ಕೊಹ್ಲಿ ರವರ ಪತ್ನಿ ಹಾಗೂ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶರ್ಮಾ ರವರು ಪ್ರತಿ ಪ್ರಚಾರದ ಪೋಸ್ಟ್ ಗಾಗಿ 95 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್ನೂ ಹಲವಾರು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಟಾರ್ ನಟಿ ಕರೀನಾ ಕಪೂರ್ ಅವರು ಇನ್ಸ್ಟಾಗ್ರಾಮ್ ನಲ್ಲಿ 9.2 ಮಿಲ್ಲಿಯನ್ ಫಾಲವರ್ಸ್ ಹೊಂದಿದ್ದು ಇವರು ಒಂದು ಬ್ರಾಂಡ್ ಪ್ರಮೋಷನ್ ಗಳಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ ಎಂಬ ಮಾತಿದೆ. ಈ ನಟಿಯರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.