ಮುಂದಿನ ಪಂದ್ಯಕ್ಕೂ ಮುನ್ನ ರಾಹುಲ್ ದ್ರಾವಿಡ್ ಏನು ಮಾಡಬೇಕಂತೆ ಗೊತ್ತೇ?? ಜಹೀರ್ ಖಾನ್ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ 5 ಟಿ20 ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಸೌತ್ ಆಫ್ರಿಕಾ ವಿರುದ್ಧ ಸೋತು ಸುಣ್ಣವಾಗಿ ಈಗ ಕುಳಿತಿದೆ. ಈ ಬಗ್ಗೆ ಭಾರತೀಯರಿಗೆ ತಂಡದ ವಿರುದ್ಧ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡ ಐಪಿಎಲ್ ನಂತರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತದೆ ಎಂಬುದಾಗಿ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕೂಡ ಭಾವಿಸಿದ್ದರು ಆದರೆ ಈಗ ಭಾರತೀಯ ಕ್ರಿಕೆಟ್ ತಂಡ ಎರಡು ಪಂದ್ಯಗಳಲ್ಲಿ ನೀಡಿರುವ ನೀರಸ ಪ್ರದರ್ಶನ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಅಸಮಾಧಾನ ಮೂಡುವಂತೆ ಮಾಡಿದೆ. ರಿಷಬ್ ಪಂತ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಕಳಪೆ ಮಟ್ಟದ ಸಂಘಟಿತ ಪ್ರದರ್ಶನವನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು. ಈ ಕುರಿತಂತೆ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರವರು ಮೂರನೇ ಟಿ 20 ಪಂದ್ಯದ ಮುನ್ನ ಈ ಕೆಲಸ ಮಾಡಬೇಕು ಎಂಬುದಾಗಿ ಮಾಜಿ ವೇಗಿ ಜಹೀರ್ ಖಾನ್ ರವರು ಹೇಳಿಕೊಂಡಿದ್ದಾರೆ. ಹೌದು ಗೆಳೆಯರೆ ಭಾರತದ ಕಳಪೆ ಪ್ರದರ್ಶನದಿಂದಾಗಿ ಮಾಜಿ ಕ್ರಿಕೆಟಿಗ ಆಗಿರುವ ಜಹೀರ್ ಖಾನ್ ರವರು ಕೂಡ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಜಹೀರ್ ಖಾನ್ ರವರು ಕೋಚ್ ರಾಹುಲ್ ದ್ರಾವಿಡ್ ರವರಿಗೆ ಭಾರತೀಯ ಕ್ರಿಕೆಟಿಗರಿಗೆ ಕಠಿಣ ಮಾತುಗಳ ಮೂಲಕ ಸೋಲುವ ಸ್ಥಿತಿಯಲ್ಲಿದ್ದರೂ ಕೂಡ ಮತ್ತೆ ತಿರುಗಿ ಹೋರಾಟವನ್ನು ನೀಡುವ ಮನಸ್ಥಿತಿ ಮೂಡುವಂತೆ ಮಾಡಿಸಬೇಕು ಎಂಬುದಾಗಿ ಹೇಳಿದ್ದಾರೆ. ಕ್ರಿಕೆಟಿಗರು ಹಿನ್ನಡೆಯನ್ನು ಅನುಭವಿಸುತ್ತಿರುವ ಬೆನ್ನಲ್ಲೇ ಮೈದಾನದಲ್ಲಿ ನಿರಾಸೆಯಿಂದ ಪ್ರದೇಶದ ನೀಡುತ್ತಿದ್ದಾರೆ ಇದು ಸರಿಯಲ್ಲ 40 ಓವರ್ಗಳ ಕೊನೆಯವರೆಗೂ ಕೂಡ ಗೆಲ್ಲುವುದಕ್ಕಾಗಿ ಹೋರಾಡುವ ಮನಸ್ಸಿನಲ್ಲಿರಬೇಕು ಎಂಬುದಾಗಿ ಜಹೀರ್ ಖಾನ್ ಹೇಳಿದ್ದಾರೆ.