ಮುಂದಿನ ವಿಶ್ವಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಜಯ ಯಾರಿಗೆ ಎಂದು ತಿಳಿಸಿದ ಶೋಯೆಬ್: ಆಯ್ಕೆ ಮಾಡಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕೇವಲ ದೇಶ ದೇಶಗಳ ನಡುವೆ ಮಾತ್ರವಲ್ಲದೆ ಕ್ರಿಕೆಟ್ ಅಂಗಣದಲ್ಲಿ ಕೂಡ ಭಾರತ ಹಾಗೂ ಪಾಕಿಸ್ತಾನದ ನಡುವೆ ಮೊದಲಿನಿಂದಲೂ ಕೂಡ ಜಿದ್ದಾಜಿದ್ದಿನ ಪೈಪೋಟಿ ನಡೆದುಕೊಂಡು ಬಂದಿದೆ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಐಸಿಸಿ ಟೂರ್ನಮೆಂಟ್ ಗಳಲ್ಲಿ ಮೊದಲಿನಿಂದಲೂ ಕೂಡ ಭಾರತ ಪಾಕಿಸ್ತಾನದ ವಿರುದ್ಧ ಅದ್ವಿತೀಯ ಜಯವನ್ನು ಸಾಧಿಸುತ್ತಾ ಬಂದಿದೆ. ಆದರೆ ಮೊದಲ ಬಾರಿ ಭಾರತವು ಕಳೆದ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ಎದುರು ಮೊದಲ ಸೋಲನ್ನು ಕಂಡಿತ್ತು. ಹೌದು ಗೆಳೆಯರೆ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಕಳೆದ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನ್ನು ಕಂಡಿತ್ತು.

ಈಗ ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡಕ್ಕೆ ಈ ಬಾರಿ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಭಾರತೀಯ ಕ್ರಿಕೆಟ್ ತಂಡ ಮತ್ತೊಮ್ಮೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಬಾಬರ್ ಆಜಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮತ್ತು ಎದುರಿಸಲಿದ್ದು ಭಾರತೀಯ ಕ್ರಿಕೆಟ್ ತಂಡಕ್ಕೆ ರಿವೆಂಜ್ ಸೇರಿಸಿಕೊಳ್ಳು ಅವಕಾಶ ಮತ್ತೊಮ್ಮೆ ದೊರೆಯಲಿದೆ ಎಂಬುದಾಗಿ ಹೇಳಬಹುದಾಗಿದೆ. ಇವರಿಬ್ಬರಲ್ಲಿ ಯಾರು ಗೆಲ್ಲಬಹುದು ಎನ್ನುವ ಪ್ರೆಡಿಕ್ಷನ್ ಅನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಆಗಿರುವ ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೋಯಬ್ ಅಖ್ತರ್ ಅವರು ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ಟೀಮ್ ಮ್ಯಾನೇಜ್ಮೆಂಟ್ ಪಾಕಿಸ್ತಾನ ಎದುರು ಯಾವುದು ಮಾಮೂಲಿ ತಂಡವನ್ನು ಕಣಕ್ಕಿಳಿಸಿದರೆ ಖಂಡಿತವಾಗಿ ಸೋಲಲಿದೆ ಹೀಗಾಗಿ ಪಾಕಿಸ್ತಾನ ತಂಡದ ಬಲಾಬಲವನ್ನು ಅರಿತುಕೊಂಡು ತಂಡವನ್ನು ಆಯ್ಕೆ ಮಾಡಿ ಕಣಕ್ಕಿಳಿಸಿದರೆ ಉತ್ತಮ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಯಾರು ಗೆಲ್ಲುತ್ತಾರೆ ಎಂದು ಊಹೆ ಮಾಡುವುದು ಅಷ್ಟೊಂದು ಸುಲಭವಲ್ಲ ಆದರೆ ಒಂದು ಲಕ್ಷ ಕೆಪಾಸಿಟಿ ಇರುವ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಈ ಪಂದ್ಯವನ್ನು ನೋಡಲು ಪಾಕಿಸ್ತಾನಿಗರಿ ಗಿಂತ ಹೆಚ್ಚಾಗಿ ಭಾರತೀಯರು ಆಗಮಿಸಲಿದ್ದಾರೆ 70000ಕ್ಕೂ ಅಧಿಕ ಭಾರತೀಯರು ಭಾರತೀಯ ಕ್ರಿಕೆಟ್ ತಂಡಕ್ಕೆ ಸಪೋರ್ಟ್ ಮಾಡುತ್ತಾ ಪಂದ್ಯವನ್ನು ವೀಕ್ಷಿಸುವಾಗ ಪಾಕಿಸ್ತಾನದ ಮೇಲೆ ಒತ್ತಡ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶೋಯಬ್ ಅಖ್ತರ್ ಹೇಳಿದ್ದಾರೆ.