ರಾಹುಲ್ ನಾಯಕನಾದ ಬೆನ್ನಲ್ಲೇ ಇಡೀ ತಂಡಕ್ಕೆ ಸಿಹಿ ಸುದ್ದಿ ನೀಡಿದ ಬಿಸಿಸಿಐ, ಇದು ನಾಯಕರ ಅದೃಷ್ಟ ಎಂದ ನೆಟ್ಟಿಗರು ಯಾಕೆ ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿಯ ಐಪಿಎಲ್ ಮುಗಿದಿದ್ದು ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾದ ವಿರುದ್ಧ 5 ಟ್ವೆಂಟಿ-20 ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ.ಇನ್ನು ಈ ಬಾರಿ ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ಕೆ ಎಲ್ ರಾಹುಲ್ ಅವರು ಆಯ್ಕೆಯಾಗಿದ್ದು ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವಾರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದೇ ಜೂನ್ 9 ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದಿಂದ ಪ್ರಾರಂಭವಾಗಲಿದೆ ಈ ಸರಣಿ. ಎಲ್ಲಾ ಭಾರತೀಯ ಆಟಗಾರರನ್ನು ಜುಲೈ ಐದರ ಒಳಗಾಗಿ ದೆಹಲಿಗೆ ಬರಲು ಮಂಡಳಿ ತಿಳಿಸಿದೆ.

ಈಗಾಗಲೇ ಸೌತ್ ಆಫ್ರಿಕಾ ತಂಡ ದೆಹಲಿಯನ್ನು ತಲುಪಿದೆ ಎಂದು ಸುದ್ದಿಗಳು ಈಗಾಗಲೇ ಅಧಿಕೃತವಾಗಿ ಬರಲಾರಂಭಿಸಿವೆ. ಜೂನ್ 19ರವರೆಗೆ ಈ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಇದಾದ ನಂತರ ಭಾರತೀಯ ಕ್ರಿಕೆಟ್ ತಂಡ ತಿಂಗಳ ಕೊನೆಯಲ್ಲಿ ಐರ್ಲೆಂಡ್ ವಿರುದ್ಧದ ಎರಡು ಟ್ವೆಂಟಿ-20 ಪಂದ್ಯಗಳಿಗಾಗಿ ಐರ್ಲೆಂಡ್ ಗೆ ಪ್ರಯಾಣವನ್ನು ಬೆಳೆಸಲಿದೆ. ಈ ನಡುವೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಒಂದು ಶುಭ ಸುದ್ದಿ ಸಿಕ್ಕಿದೆ.

ಅದೇನೆಂದರೆ ಬರೋಬ್ಬರಿ ಕಳೆದ ಎರಡು ವರ್ಷಗಳಿಂದಲೂ ಕೂಡ ಮಹಾಮಾರಿ ಕಾರಣದಿಂದಾಗಿ ಬಯೋ ಬಬಲ್ ನಲ್ಲಿ ಭಾರತೀಯ ಆಟಗಾರರು ಇರಬೇಕಾಗಿತ್ತು. ಈ ಕಾರಣದಿಂದಾಗಿ ಅವರ ಮಾನಸಿಕ ಸ್ಥಿತಿಯ ಮೇಲೆ ಸಾಕಷ್ಟು ಒತ್ತಡ ಬೀಳುತಿತ್ತು. ಆದರೆ ಈ ಸರಣಿಯಿಂದ ಆರಂಭಗೊಂಡು ಇನ್ನು ಮುಂದೆ ಬಯೋ ಬಬಲ್ ನಲ್ಲಿ ಇರಬೇಕಾದ ಅಗತ್ಯ ಇಲ್ಲ ಎನ್ನುವುದಾಗಿ ಅಧಿಕೃತವಾಗಿ ಬಿಸಿಸಿಐ ಮೂಲಗಳು ಘೋಷಿಸಿವೆ. ಕೆ ಎಲ್ ರಾಹುಲ್ ನಾಯಕತ್ವ ವನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಆಟಗಾರರಿಗೆ ಅದೃಷ್ಟ ಖುಲಾಯಿಸಿದ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.