ನೀರಲ್ಲಿ ಹೋಮ ಮಾಡಿದ ರೀತಿ 9 ಕೋಟಿ ಕೊಟ್ಟ ಸಿರಾಜ್ ಮಾಡಿದ ದಾಖಲೆ ಏನು ಗೊತ್ತಾ?? ಎದುರಾಳಿ ತಂಡಕ್ಕೆ ಉಪಯೋಗವಾದ ದಾಖಲೆ ಏನು ಗೊತ್ತೆ??

0

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದಿರುವ ಕ್ವಾಲಿಫೈಯರ್ 2 ಪಂಜದಲ್ಲಿ ರಾಜಸ್ಥಾನ ರಾಜಸ್ಥಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪಂದ್ಯಕ್ಕೆ ಅದ್ದೂರಿಯಾಗಿ ಎಂಟ್ರಿ ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ತಂಡವನ್ನು ಸೋಲಿಸಿ ಕ್ವಾಲಿಫೈಯರ್ 2 ಹಂತಕ್ಕೆ ಎಂಟ್ರಿಯನ್ನು ನೀಡಿತ್ತು. ಈ ಬಾರಿ ಖಂಡಿತವಾಗಿ ಆರ್ಸಿಬಿ ತಂಡ ಕಪ್ ಗೆಲ್ಲುತ್ತದೆ ಎನ್ನುವುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ನಿನ್ನೆ ನಡೆದಿರುವ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಸಂಪೂರ್ಣ ಅಧಿಕಾರಯುತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿ ರಾಜಾರೋಷವಾಗಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಆಡಲು ಫೈನಲ್ಗೆ ಎಂಟ್ರಿ ನೀಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 157 ರನ್ನುಗಳನ್ನು ಗಳಿಸಲು ಮಾತ್ರ ಶಕ್ತವಾಯಿತು. ಅದು ಕೂಡ ರಜತ್ ಪಾಟೀಲರವರ ಅರ್ಧಶತಕದ ನೆರವಿನಿಂದ ಎಂದು ಹೇಳಬಹುದಾಗಿದೆ. 158 ರನ್ನುಗಳನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 11 ಎಸೆತಗಳು ಬಾಕಿ ಉಳಿದಿರುವಂತೆ ಪಂದ್ಯವನ್ನು ಗೆದ್ದು ಬೀಗಿದೆ. ಅದರಲ್ಲೂ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಟಗಾರ ಜಾಸ್ ಬಟ್ಲರ್ ಕೇವಲ 60 ಎಸೆತಗಳಲ್ಲಿ ಬರೋಬ್ಬರಿ 106 ರನ್ನುಗಳ ಬೃಹತ್ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ರವರು ಕೂಡ ಐಪಿಎಲ್ ನಲ್ಲಿ ಈ ಮೂಲಕ ಕೆಟ್ಟ ಸಾಧನೆಯನ್ನು ಮಾಡಿದ್ದಾರೆ. ಹೌದು ಗೆಳೆಯರೇ ಈ ಹಿಂದೆ ಒಂದು ಐಪಿಎಲ್ ಸೀಸನ್ ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ ನೀಡಿರುವ ಬೌಲರ್ ರೆಕಾರ್ಡನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೊ ರವರು 29 ಸಿಕ್ಸ್ ನೀಡುವ ಮೂಲಕ ಹೊಂದಿದ್ದರು. ಆದರೆ ಈ ಬಾರಿಯ ಐಪಿಎಲ್ ನಲ್ಲಿ ಈ ಸಾಧನೆಯನ್ನು ಮೊಹಮ್ಮದ್ ಸಿರಾಜ್ ಅವರು ಮುರಿದಿದ್ದಾರೆ ಎಂದು ಹೇಳಬಹುದಾಗಿದೆ‌. ಈ ಬಾರಿ ಕೇವಲ ಸಿರಾಜ್ ಮಾತ್ರವಲ್ಲದೆ ವನಿಂದು ಹಸರಂಗ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಬರೋಬ್ಬರಿ 30 ಸಿಕ್ಸರ್ ಗಳನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಐಪಿಎಲ್ ನಲ್ಲಿ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಪ್ರಮುಖ ಕಾರಣವಾಗಿ ಕಾಣಿಸಿಕೊಂಡಿದ್ದಾರೆ.