ದಿಢೀರನೆ ಮೇಘನಾರಾಜ್ ಮನೆಗೆ ಭೇಟಿ ನೀಡಿದ ಚಾಲೆಂಜಿಂಗ್ ಸ್ಟಾರ್ ದಂಪತಿಗಳು; ಜೂನಿಯರ್ ಚಿರು ಸರ್ಜಾ ಗೆ ನೀಡಿದ ಉಡುಗೊರೆ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿರುಸರ್ಜ ರವರ ಅಕಾಲಿಕ ಮರಣ ದಿಂದಾಗಿ ಮೇಘನಾ ರಾಜ್ ರವರು ಸಾಕಷ್ಟು ದುಃಖಿತರಾಗಿದ್ದಾರೆ. ಜೀವನದಲ್ಲಿ ಎಲ್ಲಾ ಆಸೆಗಳನ್ನು ಕೂಡ ಕಳೆದುಕೊಂಡಿದ್ದರು ಎಂದರೆ ತಪ್ಪಾಗಲಾರದು. ಆದರೆ ಅವರ ಜೀವನದಲ್ಲಿ ಭರವಸೆಯ ಕಿರಣವಾಗಿ ಮೂಡಿಬಂದದ್ದು ಜೂನಿಯರ್ ಚಿರು ಸರ್ಜಾ. ಜೂನಿಯರ್ ಚಿರು ಸರ್ಜಾ ಗಾಗಿಯೇ ಈಗ ಮೇಘನಾ ರಾಜ್ ರವರು ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿರುವುದು. ಇನ್ನು ಮೇಘನಾ ರಾಜ್ ರವರ ದುಃಖದ ಸಂದರ್ಭದಲ್ಲಿ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಪತ್ನಿ ಆಗಿರುವ ವಿಜಯಲಕ್ಷ್ಮಿ ಅವರು ಕೂಡ ಸಾಕಷ್ಟು ಸಾಂತ್ವನವನ್ನು ತುಂಬಿದ್ದಾರೆ.

ಇನ್ನು ಮೇಘನಾ ರಾಜ್ ರವರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಕುರುಕ್ಷೇತ್ರ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹೀಗಾಗಿ ಮೊದಲಿನಿಂದಲೂ ಕೂಡ ಸರ್ಜಾ ಹಾಗೂ ಮೇಘನರಾಜ್ ಕುಟುಂಬದೊಂದಿಗೆ ಡಿ ಬಾಸ್ ರವರು ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದಾರೆ. ಚಿರು ಸರ್ಜಾ ರವರ ಪ್ರತಿಯೊಂದು ಸಿನಿಮಾಗಳಿಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಶುಭಾಶಯಗಳನ್ನು ಕೋರಿ ಪ್ರೋತ್ಸಾಹ ನೀಡಿದ್ದಾರೆ. ಇನ್ನು ಜೂನಿಯರ್ ಚಿರು ಸರ್ಜಾ ಹುಟ್ಟಿದಾಗ ಅವನನ್ನು ನೋಡಲು ಚಾಲೆಂಜಿಂಗ್ ಸ್ಟಾರ್ ದಂಪತಿಗಳಿಗೆ ಬರಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಇತ್ತೀಚೆಗಷ್ಟೇ ಇಬ್ಬರು ಕೂಡ ಮಗ ವಿನೀಶ್ ಜೊತೆಗೆ ಮೇಘನಾ ರಾಜ್ ರವರ ಮನೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಕಷ್ಟ-ಸುಖ ಮಾತುಗಳನ್ನು ಆಡಿ ಮೇಘನಾ ರಾಜ್ ಅವರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆದಿದ್ದಾರೆ. ಜೂನಿಯರ್ ಚಿರು ಸರ್ಜಾ ಗಾಗಿ ಆಟಿಕೆಗಳನ್ನು ಕೂಡ ಉಡುಗೊರೆಯಾಗಿ ತಂದಿದ್ದಾರೆ. ಇನ್ನು ಚಿರು ಸರ್ಜಾ ಅವರ ಕೊನೆಯ ಸಿನಿಮಾ ಆಗಿರುವ ರಾಜಮಾರ್ತಾಂಡ ಚಿತ್ರದ ಬಿಡುಗಡೆಗಾಗಿ ಕೂಡ ತಾನು ಸಹಾಯ ಮಾಡುತ್ತೇನೆ ಎಂಬುದಾಗಿ ಡಿ-ಬಾಸ್ ಹೇಳಿದ್ದಾರೆ. ರಾಜಮಾರ್ತಾಂಡ ಚಿತ್ರದಲ್ಲಿ ಡಿ ಬಾಸ್ ಕೂಡ ಧ್ವನಿ ನೀಡಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಒಟ್ಟಾರೆಯಾಗಿ ಈ ಭೇಟಿಯನ್ನುವುದು ಮೇಘನರಾಜ್ ಸೇರಿದಂತೆ ಎಲ್ಲರ ಮುಖದಲ್ಲಿ ಕೂಡ ಖುಷಿ ಮೂಡಿಸಿದೆ ಎಂದು ಹೇಳಬಹುದಾಗಿದೆ.