ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀ ರಾಮ ಚಂದ್ರನ ಅವತಾರ ಕೊನೆಯಾಗಿದ್ದು ಹೇಗೆ ಗೊತ್ತೇ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ರಾಮಾಯಣದ ಕಥೆ ಬಹುತೇಕ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ರಾಮಾಯಣ, ಎಲ್ಲರಿಗೂ ಮಾದರಿ. ರಾಮಾಯಣವನ್ನ ಮಕ್ಕಳಿಗೆ ಓದಿಸಿದರೆ ಮಕ್ಕಳ ಭವಿಷ್ಯವೂ ತಪ್ಪು ಹಾದಿತುಳಿಯದಂತೆ ರೂಪಿಸಬಹುದು ಎಂದು ಹೇಳಲಾಗುತ್ತದೆ. ಇದು ಅಕ್ಷರಶಃ ಸತ್ಯ ಯಾಕಂದ್ರೆ ರಾಮನೆಂದರೆ ಅಂತಹ ಪ್ರಾಮಾಣಿಕ ವ್ಯಕ್ತಿತ್ವವನ್ನ, ಮಾದರಿ ವ್ಯಕ್ತಿತ್ವವನ್ನ ಹೊಂದಿರುವಂಥವನು. ಹಾಗಾಗಿ ಶ್ರೀ ರಾಮನನ್ನು ಪೂಜಿಸುವುದು ಮಾತ್ರವಲ್ಲ, ತಮ್ಮ ಮಕ್ಕಳು ರಾಮನಂತಹ ಗುಣವನ್ನೇ ಕಲಿಯಲಿ ಎಂದು ಅಂದುಕೊಳ್ಳುತ್ತಾರೆ ಅದೆಷ್ಟೋ ತಾಯಂದಿರು.

ಸ್ನೇಹಿತರೆ, ರಾಮ ಎನ್ನುವುದೂ ಮಹಾವಿಷ್ಣುವಿನ ಅವತಾರ ಎಂಬುದು ಎಲ್ಲರಿಗೂ ಗೊತ್ತು. ಆದರೆ ರಾಮನಾಗಿ ತನ್ನ ಕರ್ತವ್ಯವನ್ನ ಮುಗಿಸಿ, ವಿಷ್ಣು ತನ್ನ ರಾಮಾವತಾರವನ್ನ ಹೇಗೆ ಕೊನೆಗೊಳಿಸಿದ ಎಂಬುದು ಮಾತ್ರ ಹಲವರಿಗೆ ಗೊತ್ತಿಲ್ಲ. ಹಾಗಾಗಿ, ಈ ವಿಷಯದ ಬಗ್ಗೆ ಈ ಏಖನದಲ್ಲಿ ನೋಡೋಣ.

ಅಯೋಧ್ಯೆಯ ರಾಜ ದಶರಥನ ಹಿರಿಯ ಮಗನಾಗಿ ಜನಿಸಿದ ರಾಮನನ್ನು ಹಿಂದೂ ಧರ್ಮದಲ್ಲಿ ಮರ್ಯಾದಾ ಪುರುಷೋತ್ತಮ ಎಂದೇ ಕರೆಯಲಾಗುತ್ತದೆ. ಮಹಾವಿಷ್ಣುವು ತನ್ನ ಯಾವುದೇ ಅವತಾರವನ್ನು ಮುಗಿಸಿದಾಗ ಅದನ್ನ ಸಾವು ಎನ್ನುವಂತಿಲ್ಲ. ಯಾಕಂದ್ರೆ ಪ್ರತಿಯೊಂದು ಅವತಾರವೂ ಒಂದೊಂದು ಕಾರ್ಯಸಿದ್ಧಿಗಾಗಿ ಅವತಾರತಾಳಿದ್ದು ಮಹಾವಿಷ್ಣು. ಹಾಗಾಗಿ ಆಯಾ ಅವತಾರಗಳಲ್ಲಿ ಆಯಾ ಕೆಲಸವನ್ನು ಮುಗಿಸಿ ಕಣ್ಮರೆಯಾಗುತ್ತಾನೆ. ಹಾಗೆಯೇ ಶ್ರೀರಾಮನೂ ಕೂಡ. ರಾಮನು ಸರಯೂ ನದಿಯನ್ನು ಸ್ವಯಂಪ್ರೇರಣೆಯಿಂದ ಪ್ರವೇಶಿಸಿದಾಗ ಆತ ಕಣ್ಮರೆಯಾದ. ಈ ಕಥೆ ಪದ್ಮ ಪುರಾಣದಲಿ ವಿವರಿಸಲಾಗಿದೆ.

ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಶ್ರೀರಾಮನು 11 ಸಾವಿರ ವರ್ಷಗಳ ಕಾಲ ಆಳಿದನು ಆತನ ಮಕ್ಕಳು ಮರಿಮಕ್ಕಳು ಪರಿವಾರದವರು ಹಲವಾರು ಕಡೆ ರಾಜ್ಯಭಾರ ಮಾಡುತ್ತಾರೆ. ಈ ಅವಧಿಯಲ್ಲಿ ಸೀತಾದೇವಿಯನ್ನು ಭೂದೇವಿ ತನ್ನೊಂದಿಗೆ ಕರೆಸಿಕೊಳ್ಳುತ್ತಾಳೆ. ಆಗ ಸೀತೆ ಭೂಮಿಯಿಂದ ಕಣ್ಮರೆಯಾಗುತ್ತಾಳೆ. ಲವ ಮತ್ತು ಕುಶ ತಮ್ಮ ತಂದೆಯಂತೆ ಉತ್ತಮ ಆಡಳಿತಗಾರರಾಗುತ್ತಾರೆ. ಒಂದು ದಿನ ಋಷಿಯೊಬ್ಬರು ರಾಮನ ಭೇಟಿಗಾಗಿ ಬರುತ್ತಾರೆ. ಇವರಿಬ್ಬರೂ ಮಾತನಾಡುವಾಗ ಯಾರೂ ಒಳಗೆ ಪ್ರವೇಶಿಸಬಾರದೆಂದು ಶ್ರೀ ರಾಮ ಲಕ್ಷ್ಮಣನಿಗೆ ಆಜ್ಞೆ ಮಾಡುತ್ತಾನೆ. ರಾಮನನ್ನು ಭೇಟಿಯಾಗಲು ಬಂದ ಈ ಸಂತ ಬೇರೆ ಯಾರೂ ಅಲ್ಲ, ಕಾಲದೇವ ಅಥವಾ ಸಮಯ ಎಂದು ಹೇಳಲಾಗುತ್ತದೆ.

ಕಾಲ ಬಂದಿದ್ದೇ ರಾಮನ ಸಮಯ ಭೂಮಿಯ ಮೇಲೆ ಮುಗಿದಿದೆ ಎಂಬುದನ್ನು ನೆನಪಿಸಲು. ಲಕ್ಷ್ಮಣನು ಕಾವಲು ಕಾಯುತ್ತಿರುವಾಗ ದೂರ್ವಾಸ ಮುನಿ ಅಲ್ಲಿಗೆ ಬರುತ್ತಾರೆ. ಆದರೆ ಲಕ್ಷ್ಮಣ ಅನುಜನ ಆಜ್ಞೆಯನ್ನು ಮೀರುವುದಿಲ್ಲ. ಆಗ ದುರ್ವಾಸ ಕೋಪಗೊಳ್ಳುತ್ತಾನೆ. ತನ್ನನ್ನು ಅವಮಾನಿಸಿದರೆ ಅಯೋಧ್ಯೆ ಹಾಗೂ ಅಲ್ಲಿನ ನಿವಾಸಿಗಳ ಮೇಲೆ ಮತ್ತು ಇಡೀ ರಘು ವಂಶದ ಮೇಲೆ ಭೀಕರ ವಿನಾಶದ ಶಾಪ ನೀಡುವುದಾಗಿ ಬೆದರಿಕೆ ಹಾಕುತ್ತಾರೆ. ಆಗ ಲಕ್ಷ್ಣಣನು ದೂರ್ವಾಸರು ಏನೇ ಶಿಕ್ಷೆ ಕೊಡುವುದಿದ್ದರೂ ತನಗೇ ಕೊಡುವಂತೆ ಕೋರುತ್ತಾನೆ.

ನಂತರ ಲಕ್ಷ್ಮಣನು ಸರಯೂ ನದಿ ಬಳಿ ಹೋಗಿ ಅನಂತ ಶೇಷನ ರೂಪ ತಾಳುತ್ತಾನೆ. ಲಕ್ಷ್ಮಣನ ಮರಣದ ವಿಷಯ ತಿಳಿದ ಶ್ರೀ ರಾಮ ತಾನು ಕೂಡಾ ತನ್ನೆಲ್ಲ ಜವಾಬ್ದಾರಿಗಳನ್ನು ಮಕ್ಕಳ ಹೆಗಲಿಗೆ ಹಾಕಿ ಸರಯೂ ನದಿಯೊಳಗೆ ಅಂತರ್ಗತನಾಗುತ್ತಾನೆ. ಅದೇ ಸ್ಥಳದಲ್ಲಿ ವಿಷ್ಣುವು ಅನಂತ ಶೇಷನ ಮೇಲೆ ಮಲಗಿದ ರೂಪದಲ್ಲಿ ಕಾಣಿಸಿಕೊಂಡು ಭಕ್ತರಿಗೆ ಆಶೀರ್ವಾದ ಮಾಡುತ್ತಾನೆ. ಇದು ಶ್ರೀ ರಾಮ ತನ್ನ ಅವತಾರವನ್ನು ಮುಗಿಸಿದ ಪರಿ ಎಂದು ನಂಬಲಾಗಿದೆ.

Get real time updates directly on you device, subscribe now.