ಬಿಗ್ ನ್ಯೂಸ್: ಅಂತಿಮವಾಯ್ತು 2022 ಟಿ 20 ವಿಶ್ವಕಪ್ ಕ್ರಿಕೇಟ್ ವೇಳಾಪಟ್ಟಿ, ಮೊದಲ ಎದುರಾಳಿ ಯಾರು ಗೊತ್ತೇ?? ಯಾವಾಗ ಪಂದ್ಯಗಳು ನಡೆಯಲಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ 2021 ರ ಟಿ 20 ವಿಶ್ವಕಪ್ ಟೂರ್ನಿಯ ಕಹಿ ನೆನಪುಗಳನ್ನು ಮರೆಯುವ ಒಳಗೆ ಈಗ ಮತ್ತೊಂದು ಟಿ 20 ವಿಶ್ವಕಪ್ ಬಂದಿದೆ. ಹೌದು ಐಸಿಸಿ ಟಿ 20 ವಿಶ್ವಕಪ್ 2022 ರ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಈ ಸಂಭಂದ ಐಸಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಭಾರತ ತಂಡ ಗ್ರೂಪ್ ಬಿ ನಲ್ಲಿ ಸ್ಥಾನ ಪಡೆದಿದೆ. ಭಾರತದ ಜೊತೆ ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.

ಇದಲ್ಲದೇ ಅರ್ಹತಾ ಸುತ್ತಿನಲ್ಲಿ ಆಡಿ ಜಯಿಸುವ ಎರಡು ದೇಶಗಳು ಸಹ ಈ ಗುಂಪಿಗೆ ಕೊನೆಯಲ್ಲಿ ಸೇರಿಕೊಳ್ಳಲಿವೆ. ಈ ಭಾರಿಯೂ ಸಹ ಭಾರತ ತನ್ನ ಸಾಂಪ್ರದಾಯಕ ಎದುರಾಳಿಯಾದ ಪಾಕಿಸ್ತಾನದ ವಿರುದ್ದ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. 23 ನೇ ಅಕ್ಟೋಬರ್ ರಂದು ಪಾಕಿಸ್ತಾನದ ವಿರುದ್ದ ಮೇಲ್ಬೋರ್ನ್ ನಲ್ಲಿ ಮೊದಲ ಪಂದ್ಯ ಆಡಲಿದೆ. 27 ರಂದು ಸಿಡ್ನಿಯಲ್ಲಿ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡದ ವಿರುದ್ದ ಆಡಲಿದೆ.

ಅಕ್ಟೋಬರ್ 30 ರಂದು ಪರ್ತ್ ನಲ್ಲಿ ಸೌತ್ ಆಫ್ರಿಕಾ ವಿರುದ್ದ ಆಡಲಿದೆ. ಅಡಿಲೇಡ್ ನಲ್ಲಿ ನವೆಂಬರ್ 2 ರಂದು ಬಾಂಗ್ಲಾದೇಶದ ವಿರುದ್ದ ಆಡಲಿದೆ. 6 ನೇ ರಂದು ತನ್ನ ಕೊನೆಯ ಪಂದ್ಯವನ್ನು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಇನ್ನೊಂದು ತಂಡದ ವಿರುದ್ದ ಆಡಲಿದೆ. ಇನ್ನು ಎ ಗುಂಪಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಅಫಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಶ್ರೀಲಂಕಾ, ನಮೀಬಿಯಾ ಹಾಗೂ ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು ಬರಬೇಕಾಗಿದೆ. ಅಕ್ಟೋಬರ್ 16 ರಿಂದ ಶುರುವಾಗವ ಈ ಕ್ರಿಕೇಟ್ ಹಬ್ಬ ನವೆಂಬರ್ 13 ಕ್ಕೆ ಮುಕ್ತಾಯವಾಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.