ಕೊನೆಗೂ ಅಧಿಕೃತವಾಗಿ ತನ್ನ ಎಲ್ಲಾ ಆಟಗಾರರನ್ನು ಆಯ್ಕೆ ಮಾಡಿ ಘೋಷಣೆ ಮಾಡಿ ಎರಡು ಹೊಸ ಐಪಿಎಲ್ ತಂಡಗಳು. ಆಯ್ಕೆಯಾದವರು ಯಾರ್ಯಾರು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಹೊಸತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಕೊನೆಗೂ ತಾವು ಹರಾಜಿಗಿಂತ ಮುಂಚೆ ಆಯ್ಕೆಮಾಡಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಅಹಮದಾಬಾದ್ ತಂಡ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಮತ್ತು ಶುಭಮಾನ್ ಗಿಲ್ ರನ್ನು ಆಯ್ದುಕೊಂಡರೇ, ಇತ್ತ ಲಕ್ನೋ ತಂಡ ಕನ್ನಡಿಗ ಕೆ.ಎಲ್.ರಾಹುಲ್, ಮಾರ್ಕಸ್ ಸ್ಟೋಯಿನಿಸ್ ಹಾಗೂ ರವಿ ಬಿಷ್ಣೋಯಿ ಯವರನ್ನ ಆಯ್ಕೆ ಮಾಡಿಕೊಂಡಿತು.

ಅಚ್ಚರಿ ಎಂಬಂತೆ ಲಕ್ನೋ ತಂಡ ಬರೋಬ್ಬರಿ 17 ಕೋಟಿ ರೂಪಾಯಿ ನೀಡಿ ಖರೀದಿಸಿತು. ಇದು ಐಪಿಎಲ್ ಇತಿಹಾಸದಲ್ಲಿಯೇ ಹೆಚ್ಚು.ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ದಾಖಲೆ ನಿರ್ಮಿಸಿತು. ಈ ನಡುವೆ ಅಹಮದಾಬಾದ್ ಹಾಗೂ ಲಕ್ನೋ ತಂಡ ತಮ್ಮ ನಾಯಕರನ್ನು ಸಹ ಅಂತಿಮಗೊಳಿಸಿವೆ. ಬನ್ನಿ ಹೊಸ ನಾಯಕರು ಯಾರು ಎಂಬುದನ್ನು ತಿಳಿಯೋಣ. ಆಹಮದಾಬಾದ್ ತಂಡ : ಗುಜರಾತ್ ಮೂಲದ ಅಹಮದಾಬಾದ್ ತಂಡ, ಲೋಕಲ್ ಬ್ರಾಂಡ್ ಗಿಟ್ಟಿಸಿಕೊಳ್ಳಲು ಬರೋಡಾದ ಹಾರ್ದಿಕ್ ಪಾಂಡ್ಯಗೆ ನಾಯಕನ ಪಟ್ಟ ನೀಡಿದೆ.

ಮೊದಲು ಶ್ರೇಯಸ್ ಅಯ್ಯರ್ ಈ ತಂಡಕ್ಕೆ ನಾಯಕರಾಗುತ್ತಾರೆ ಎಂಬ ಸುದ್ದಿ ಇತ್ತು. ಆದರೇ ಹಾರ್ದಿಕ್ ಪಾಂಡ್ಯರ ಲೋಕಲ್ ಇಮೇಜ್ ನ್ನು ಬಳಸಿಕೊಳ್ಳಲು ಅಹಮದಾಬಾದ್ ತಂಡ ಹಾರ್ದಿಕ್ ಪಾಂಡ್ಯರಿಗೆ ನಾಯಕನ ಪಟ್ಟ ಕಟ್ಟಿದೆ. ಲಕ್ನೋ ತಂಡ :- ಲಕ್ನೋ ತಂಡ ಉತ್ತರ ಪ್ರದೇಶದ ಮೂಲವಾದರೂ,ಕನ್ನಡಿಗ ಕೆ.ಎಲ್.ರಾಹುಲ್ ಗೆ ನಾಯಕತ್ವ ಪಟ್ಟ ನೀಡಿದೆ. ಸದ್ಯ ಭಾರತೀಯ ಕ್ರಿಕೇಟ್ ನ ಹಾಟ್ ಫೇವರೇಟ್ ಆಗಿರುವ ರಾಹುಲ್ ಗೆ ದಾಖಲೆಯ 17 ಕೋಟಿ ರೂಪಾಯಿ ನೀಡಿ ನಾಯಕತ್ವ ಪಟ್ಟ ನೀಡಿದೆ. ರಾಹುಲ್ ಹೊಸ ತಂಡದ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾರೆಂದು ಕಾದು ನೋಡಬೇಕಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಎರಡು ವರ್ಷ ನಾಯಕರಾಗಿ ನಿಭಾಯಿಸಿದ ಅನುಭವ ಕೆ.ಎಲ್.ರಾಹುಲ್ ಗೆ ವರವಾಗುವ ನೀರಿಕ್ಷೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.