ಪುಷ್ಪ ಸಿನಿಮಾ ಯಶಸ್ಸು ಪಡೆದದ್ದೇ ತಡ ಸಂಭಾವನೆ ಹೆಚ್ಚಿಸಿಕೊಂಡ ಅಲ್ಲು ಅರ್ಜುನ್, ಒಂದು ಸಿನೆಮಾಗೆ ಎಷ್ಟು ಕೋಟಿ ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪಂಚಭಾಷಾ ಸಿನಿಮಾಗಳ ಬಿಡುಗಡೆ ವಿಚಾರದ ಮಟ್ಟಿಗೆ ಪುಷ್ಪ ಚಿತ್ರ ಸದ್ಯದ ಮಟ್ಟಿಗೆ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತು ಎಂಬುದನ್ನು ಎಲ್ಲರೂ ಕೂಡ ಒಪ್ಪಲೇ ಬೇಕಾದಂತಹ ವಿಚಾರ. ಜಾಗತಿಕವಾಗಿ ಪಂಚ ಭಾಷೆಗಳಲ್ಲಿ ಪುಷ್ಪ ಚಿತ್ರ ಒಟ್ಟಾರೆಯಾಗಿ 350 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿ ಅಲ್ಲು ಅರ್ಜುನ್ ರವರ ಮಾರುಕಟ್ಟೆಯ ವ್ಯಾಲ್ಯೂ ವನ್ನು ಎಲ್ಲರಿಗೂ ಪರಿಚಯಿಸಿದೆ. ಕೇವಲ ಅಲ್ಲುಅರ್ಜುನ್ ರವರ ಮಾರ್ಕೆಟ್ ವ್ಯಾಲ್ಯೂ ಮಾತ್ರವಲ್ಲದೆ ನಟಿ ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ಸುಕುಮಾರ್ ಅವರ ಬೇಡಿಕೆ ಕೂಡ ಹೆಚ್ಚುವಂತೆ ಮಾಡಿದೆ.

ಪುಷ್ಪ ಚಿತ್ರದ ಮುನ್ನ ಸ್ಟೈಲಿಶ್ ಸ್ಟಾರ್ ಆಗಿದ್ದಂತಹ ಅಲ್ಲು ಅರ್ಜುನ್ ರವರು ಪುಷ್ಪ ಚಿತ್ರದ ನಂತರ ಐಕಾನ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ರವರು ಪಟ್ಟಂತಹ ಪರಿಶ್ರಮ ನಿಜವಾಗಿಯೂ ಫಲ ಕೊಟ್ಟಿದೆ ಎಂದು ಚಿತ್ರದ ಯಶಸ್ಸಿನಿಂದ ಹೇಳಬಹುದಾಗಿದೆ. ಈಗ ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಅವರ ಸಂಭಾವನೆ ಕೂಡ ಹೆಚ್ಚಳವಾಗಿದೆ ಎಂಬುದಾಗಿ ಟಾಲಿವುಡ್ ನಿಂದ ಸುದ್ದಿಗಳು ಕೇಳಿಬರುತ್ತಿವೆ. ಈ ಹಿಂದೆ ಅಲಾ ವೈಕುಂಠಪುರಮಲೋ ಚಿತ್ರ ಸ್ವಂತ ಬ್ಯಾನರ್ ನಿಂದ ನಿರ್ಮಿಸಿದ್ದರು ಆ ಚಿತ್ರ ಕೂಡ ಭರ್ಜರಿಯಾಗಿ ಯಶಸ್ವಿಯಾಗಿತ್ತು.

ಈಗ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಪುಷ್ಪಾ ಚಿತ್ರದ ಮೊದಲ ಭಾಗಕ್ಕಾಗಿ 32 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಈ ಚಿತ್ರ ಕೂಡ ಭರ್ಜರಿಯಾಗಿ ಯಶಸ್ಸು ಕಂಡಿದೆ. ಬ್ಯಾಕ್ ಟು ಬ್ಯಾಕ್ 2 ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಂತರ ಪುಷ್ಪ ಭಾಗ 2ಕ್ಕಾಗಿ ಅಲ್ಲು ಅರ್ಜುನ್ ಅವರು ಬರೋಬ್ಬರಿ 40 ರಿಂದ 45 ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಿರೀಕ್ಷೆಯಿದೆ. ಪುಷ್ಪ ಚಿತ್ರದ ಎರಡನೇ ಭಾಗ ಕ್ಕಾಗಿ ಈಗಾಗಲೇ ದಕ್ಷಿಣ ಭಾರತದ ಸಿನಿಪ್ರೇಮಿಗಳಗಿಂತ ಹೆಚ್ಚಾಗಿ ಉತ್ತರ ಭಾರತದ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಪುಷ್ಪ ಚಿತ್ರದ ಎರಡನೇ ಭಾಗದ ಕುರಿತಂತೆ ನಿಮ್ಮ ನಿರೀಕ್ಷೆಗಳೇನು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.