ಸಚಿನ್ ದ್ರಾವಿಡ್ ಗಂಗೂಲಿ ರವರಂತಹ ಲೆಜೆಂಡ್ ಗಳನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದ ಕೊಹ್ಲಿ, ತಡವಾಗಿ ಬೆಳಕಿಗೆ ಬಂದ ಮಹತ್ವದ ದಾಖಲೆ ಏನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಆಧುನಿಕ ಕ್ರಿಕೆಟ್ ಜಗತ್ತಿನ ರನ್ ಮೆಷಿನ್ ವಿರಾಟ್ ಕೊಹ್ಲಿ ಎಂದರೆ ಕಂಡಿತವಾಗಿ ತಪ್ಪಾಗಲಾರದು. ಅವರು ತಂಡದ ನಾಯಕತ್ವವನ್ನು ಕಳೆದುಕೊಂಡಿರಬಹುದು ಆದರೆ ಅವರ ಪರ್ಫಾರ್ಮೆನ್ಸ್ ಎನ್ನುವುದು ಇಂದಿಗೂ ಕೂಡ ತಂಡಕ್ಕೆ ಉಪಯುಕ್ತವಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿ ಸೌತ್ ಆಫ್ರಿಕಾದ ವಿರುದ್ಧ ಸೋತಿತ್ತು. ಈ ಸಂದರ್ಭದಲ್ಲಿ ಕೂಡ ವಿರಾಟ್ ಕೊಹ್ಲಿ ಅವರು ತಮ್ಮ 63ನೇ ಅರ್ಧಶತಕವನ್ನು ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಸೊನ್ನೆಯನ್ನು ಸುತ್ತಿದ್ದರು.

ಈ ಸಂದರ್ಭದಲ್ಲಿ ಸಿಂಗ್ ವಿರಾಟ್ ಕೊಹ್ಲಿ ರವರು ಭಾರತೀಯ ಕ್ರಿಕೆಟ್ ತಂಡದ ಮಟ್ಟಿಗೆ ಹಲವಾರು ದಾಖಲೆಗಳನ್ನು ನೆಲಸಮ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತಾನು ಯಾರು ತನ್ನ ಅರ್ಹತೆಯೇನು ತನ್ನ ಸಾಮರ್ಥ್ಯ ಏನು ಎಂಬುದನ್ನು ವಿರಾಟ್ ಕೊಹ್ಲಿ ರವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹಾಗಿದ್ದರೆ ಅವರೀ ಕ್ರಿಯೇಟ್ ಮಾಡಿರುವ ಹೊಸ ರೆಕಾರ್ಡ್ ಗಳ ಕುರಿತಂತೆ ನಿಮಗೆ ಹೇಳುತ್ತೇವೆ ಬನ್ನಿ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ. ಈ ಲೇಖನಿ ಖಂಡಿತವಾಗಿ ಪ್ರತಿಯೊಬ್ಬ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕಾಲರ್ ಎತ್ತುವಂತಹ ಕ್ಷಣವನ್ನು ತಂದಿರಿಸೋದು ಗ್ಯಾರಂಟಿ.

ವಿರಾಟ್ ಕೊಹ್ಲಿ ರವರು ಸೌತ್ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ 9 ರನ್ ಗಳಿಸಿ ಬ್ಯಾಟಿಂಗ್ ಆಡುತ್ತಿರಬೇಕಾದರೆ ವಿದೇಶದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ರವರ ಹೆಸರಿನಲ್ಲಿ ಇತ್ತು. ಸಚಿನ್ ರವರು ವಿದೇಶಿ ನೆಲದಲ್ಲಿ ಬರೋಬ್ಬರಿ 5065 ರನ್ನುಗಳನ್ನು ಬಾರಿಸಿದ್ದರು. ಈಗ ವಿರಾಟ್ ಕೊಹ್ಲಿ ರವರು 5108 ರನ್ನುಗಳನ್ನು ಬಾರಿಸಿದ್ದಾರೆ.

ಮೂರನೇ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಹಾಗೂ 5ನೇ ಸ್ಥಾನದಲ್ಲಿ ಸೌರವ್ ಗಂಗೂಲಿ ಅವರು ಇರುತ್ತಾರೆ. ಇಷ್ಟು ಮಾತ್ರವಲ್ಲದೆ ಸೌತ್ಆಫ್ರಿಕ ಹಾಗೂ ಭಾರತೀಯ ತಂಡಗಳು ಮುಖಾಮುಖಿಯಾದಾಗ ಅತ್ಯಂತ ಹೆಚ್ಚು ರನ್ ಬಾರಿಸಿದ ಎರಡನೇ ಭಾರತೀಯ ಎಂಬುದಾಗಿ ಕೂಡ ತಮ್ಮ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ. ಈ ಮೂಲಕ ದ್ರಾವಿಡ್ ಹಾಗೂ ಗಂಗೂಲಿ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ. ಇಂದು ಕೂಡ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವನ್ನು ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ದಾಖಲೆಗಳನ್ನು ವಿರಾಟ್ ಕೊಹ್ಲಿ ರವರು ಮುರಿಯುವ ಸಾಧ್ಯತೆ ಇದೆ.

Get real time updates directly on you device, subscribe now.