ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ ನೀಡಿದ ಸಾನಿಯಾ ಮಿರ್ಜಾ, ಹೀಗ್ಯಾಕೆ ನಿರ್ಧಾರ ತೆಗೆದುಕೊಂಡಿರಿ ಎಂದ ಅಭಿಮಾನಿಗಳು.

ನಮಸ್ಕಾರ ಸ್ನೇಹಿತರೇ ಭಾರತ ಕೇವಲ ಕ್ರಿಕೇಟ್ ತಾರೆಗಳನ್ನ ಮಾತ್ರ ಹೊತ್ತು ಮೆರೆಸುತ್ತದೇ ಎಂಬ ಮಾತಿಗೆ, ತಪ್ಪಿ ಪ್ರಚಾರಕ್ಕೆ ಬಂದವರೆಂದರೇ ಅದು ಹೈದರಾಬಾದ್ ನ ಮೂಗುತಿ ಸುಂದರಿ, ಟೆನಿಸ್ ತಾರೆ ಸಾನಿಯಾ ಮಿರ್ಜಾ. ಸಾನಿಯಾ ಮಿರ್ಜಾ ಟೆನಿಸ್ ಗಿಂತ ಹೆಚ್ಚು ಫೇಮಸ್ ಆಗಿದ್ದು ತಮ್ಮ ಗ್ಲಾಮರಸ್ ಲುಕ್ ನಿಂದ. ಹಲವಾರು ಗ್ರಾಂಡ್ ಸ್ಲಾಂಗಳಲ್ಲಿ ಭಾಗವಹಿಸಿ ಭಾರತ ದೇಶವನ್ನು ಸಾನಿಯಾ ಮಿರ್ಜಾ ಪ್ರತಿನಿಧಿಸಿದ್ದರು.

ಅದಲ್ಲದೇ ಹಲವಾರು ಚಾಂಪಿಯನ್ ಶಿಪ್ ಗಳಲ್ಲಿ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿದ್ದರು. ಈ ನಡುವೆ ಸಾನಿಯಾ ಮಿರ್ಜಾ ಮದುವೆ ಭಾರತದಲ್ಲಿ ಹೆಚ್ಚು ವಿವಾದ ಸೃಷ್ಠಿಸಿತ್ತು. ಸಾನಿಯಾ ಪಾಕಿಸ್ತಾನದ ಕ್ರಿಕೇಟಿಗ ಶೊಯೇಬ್ ಮಲಿಕ್ ರನ್ನ ವಿವಾಹವಾದ ಕಾರಣ ಭಾರತಾದ್ಯಂತ ಪ್ರತಿಭಟನೆಗಳು ನಡೆದವು. ಆ ವಿವಾದದ ಮಧ್ಯೆಯೂ ಸಾನಿಯಾ ಹಲವಾರು ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಈ ಮಧ್ಯೆ ಸಾನಿಯಾ ಗರ್ಭಿಣಿಯಾದಾಗ ಅವರು ಊಟ ಮಾಡುತ್ತಿದ್ದ ಫೋಟೋ ವೈರಲ್ ಆಗಿ ಟ್ರೋಲ್ ಪೇಜ್ ಗಳಿಗೆ ಸಖತ್ ಆಹಾರವಾಗಿತ್ತು. ಆದರೇ ಈಗ ಅಭಿಮಾನಿಗಳಿಗೆ ಸಾನಿಯಾ ಮಿರ್ಜಾ ಬೇಸರದ ಸಂಗತಿಯನ್ನು ಹೊರಹಾಕಿದ್ದಾರೆ. ಅದು ಏನೆಂದರೇ ಈ ವರ್ಷಾಂತ್ಯ ಅಂದರೇ 2022 ರ ನಂತರ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್ ನಿಂದ ದೂರವುಳಿಯುವುದಾಗಿ ಘೋಷಿಸಿದ್ದಾರೆ. ಈ 2022 ರ ನಂತರ ನಾನು ನನ್ನ ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕು. ಹಾಗೂ ವಯಸ್ಸಾಗುತ್ತಿರುವುದರಿಂದ ನನ್ನಲ್ಲಿ ಮೊದಲಿನಷ್ಟು ಚುರುಕುತನವನ್ನು ಟೆನಿಸ್ ನಲ್ಲಿ ಭಾಗವಹಿಸಲು ಆಗುತ್ತಿಲ್ಲ. ಹಾಗಾಗಿ ಟೆನಿಸ್ ಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು. ನಿವೃತ್ತಿ ನಂತರ ಟೆನಿಸ್ ಕೋಚ್ ಅಥವಾ ಅಕಾಡೆಮಿ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇನ್ಮುಂದೆ ಮಿನಿ ಸ್ಕರ್ಟ್ ಹಾಕಿಕೊಂಡು ಸಾನಿಯಾ ಟೆನಿಸ್ ಆಡುವುದನ್ನ ಲೈವ್ ಆಗಿ ಆಡುವುದನ್ನು ನೋಡಲು ಆಗುವುದಿಲ್ಲ. ಸಾನಿಯಾ ಮಿರ್ಜಾರವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.