ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನು ಕೂಡ ಮೀರಿಸುವಂತಹ ಟಾಪ್ 5 ಕ್ರಿಕೆಟ್ ಆಟಗಾರ್ತಿಯರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಸೌಂದರ್ಯ ಎಂದು ಬಂದಾಗಲೆಲ್ಲ ನಮಗೆ ನೆನಪಾಗುವುದು ಬಾಲಿವುಡ್ ಚಿತ್ರರಂಗದ ನಟಿಮಣಿಯರು. ಯಾಕೆಂದರೆ ಅಂದಿನ ಕಾಲದಲ್ಲಿ ಮಾತ್ರವಲ್ಲದೆ ಇಂದೂ ಕೂಡ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳಿಗೆ ಬಾಲಿವುಡ್ ಚಿತ್ರರಂಗದ ನಟಿಯರನ್ನೇ ಆಯ್ಕೆ ಮಾಡಲಾಗುತ್ತದೆ. ದಕ್ಷಿಣ ಭಾರತ ಚಿತ್ರರಂಗದ ನಟಿಮಣಿಯರಿಗೆ ಹೋಲಿಸಿದರೆ ಬಾಲಿವುಡ್ ಚಿತ್ರರಂಗದ ನಟಿಮಣಿಯರಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ನಟಿಮಣಿಯರನ್ನು ಸೌಂದರ್ಯದಲ್ಲಿ ಮೀರಿಸುವಂತಹ ಮಹಿಳಾ ಕ್ರಿಕೆಟಿಗರ ಕುರಿತಂತೆ. ಹಾಗಿದ್ದರೆ ಯಾರಪ್ಪ ಅಷ್ಟೊಂದು ಸೌಂದರ್ಯವತಿ ಯಾಗಿರುವ ಕ್ರಿಕೆಟ್ ಆಟಗಾರ್ತಿಯರು ಎಂದು ನೀವು ಕೇಳಬಹುದು. ಬನ್ನಿ ಅದಕ್ಕೆ ನಿಮಗೆ ಈ ಕೆಳಗಿನ ಲೇಖನಿಯಲ್ಲಿ ಉತ್ತರ ಸಿಗುತ್ತದೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಮೊದಲನೇದಾಗಿ ಸಾರಾ ಟೇಲರ್. ಇವರು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾಗಿದ್ದು ಮಹಿಳಾ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಆಗಿದ್ದಾರೆ. ಕೇವಲ ಕ್ರಿಕೆಟ್ ಆಟದಿಂದ ಮಾತ್ರವಲ್ಲದೆ ತಮ್ಮ ಸಾಮಾಜಿಕ ಕಾರ್ಯಗಳಿಂದ ಕೂಡ ಜನಪ್ರಿಯತೆ ಪಡೆದುಕೊಂಡಿರುವ ವ್ಯಕ್ತಿತ್ವ ಇವರದ್ದು. ಸಾರಾ ರವರು 2019 ರಂದು ತಮ್ಮ 13 ವರ್ಷಗಳ ಕ್ರಿಕೆಟ್ ಟೂರ್ನಿಯನ್ನು ವಿದಾಯ ಹೇಳುವುದರ ಮೂಲಕ ಮುಗಿಸಿದ್ದಾರೆ. ಕೇವಲ ಕ್ರಿಕೆಟ್ಗೆ ಮಾತ್ರವಲ್ಲದೆ ತಮ್ಮ ಸೌಂದರ್ಯದಿಂದ ಕೂಡ ಇವರು ಸುದ್ದಿಯಾಗಿದ್ದಾರೆ.

ಎರಡನೇ ಸ್ಥಾನದಲ್ಲಿ ಸ್ಮೃತಿ ಮಂದನ ಅವರು ಕಾಣಿಸಿಕೊಳ್ಳುತ್ತಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬಾಲಿವುಡ್ ನಟಿಯರಿಗಿಂತ ಹೆಚ್ಚಾಗಿ ಇವರು ಸುದ್ದಿಯಲ್ಲಿರುತ್ತಾರೆ. ಖಂಡಿತವಾಗಿ ಕ್ರಿಕೆಟ್ ಆಟದಲ್ಲಿ ಕೂಡ ಇವರು ಉತ್ತಮ ಪರ್ಫಾರ್ಮೆನ್ಸ್ ಹೊಂದಿದ್ದರು ಇವರು ಸುದ್ದಿಯಾಗೋದು ಇವರ ಸೌಂದರ್ಯದಿಂದಾಗಿ. ಕ್ರಿಕೆಟನ್ನು ಇಷ್ಟಪಡುವ ಯುವಜನತೆಯ ಕ್ರಶ್ ಆಗಿದ್ದಾರೆ ಇವರು. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿರುವ ಇವರು ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಮೂರನೇದಾಗಿ ಹರ್ಲೀನ್ ಡಿಯೊಲ್ ಕಾಣಿಸುತ್ತಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಬ್ಯಾಟ್ಸ್ಮನ್ ಆಗಿರುವವರು ಕ್ರಿಕೆಟ್ ಜಗತ್ತಿನ ಹೊರಗೆ ಬಂದರೆ ಸ್ಟೈಲಿಶ್ ಹುಡುಗಿಯನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವರು ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಯಾವುದೇ ಬಾಲಿವುಡ್ ನಟಿಯರಿಗೆ ಕೂಡ ಕಮ್ಮಿ ಇಲ್ಲದಂತೆ ಸಕ್ಕತ್ ಸೌಂದರ್ಯವತಿ ಯಾಗಿದ್ದಾರೆ.

ನಾಲ್ಕನೇದಾಗಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾಗಿರುವ ಎಲ್ಲಿಸ್ ಪೆರಿ ಅವರು ಕಂಡುಬರುತ್ತಾರೆ. ಎಲ್ಲಿಸ್ ಅವರು ಕ್ರಿಕೆಟ್ ಆಡುವುದಕ್ಕೂ ಸೈ ನಟಿಯಂತೆ ಕಾಣುವುದಕ್ಕೆ ಕೂಡ ಸೈ ಎಂಬ ಮಾತಿಗೆ ಪರ್ಫೆಕ್ಟ್ ಉದಾಹರಣೆ ಎಂದರೆ ತಪ್ಪಾಗಲಾರದು. ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಇವರ ಫಿಟ್ನೆಸ್ ಕುರಿತಂತೆ ಆಗಾಗ ಸಾಕಷ್ಟು ಸುದ್ದಿ ಆಗುತ್ತಲೇ ಇರುತ್ತದೆ. ಇವರ ಸೌಂದರ್ಯ ಹಾಗೂ ಫಿಟ್ನೆಸ್ ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಜನ ಫಾಲೋವರ್ಸ್ ಗಳು ಇದ್ದಾರೆ.

ಕೊನೆಯ ಸ್ಥಾನದಲ್ಲಿ ಪಾಕಿಸ್ತಾನದ ಮೂಲದ ಆಟಗಾರ್ತಿಯಾಗಿರುವ ಕೈನತ್ ಇಮ್ತಿಯಾಜ್ ರವರು ಕಾಣುತ್ತಾರೆ. ಪಾಕಿಸ್ತಾನದ ಮೂಲ ಆಟಗಾರ್ತಿಯಾಗಿರುವ ಕೈನತ್ ರವರು ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ 15 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಜನರು ಅವರನ್ನು ಅವರ ಕ್ರಿಕೆಟ್ ಆಟಕ್ಕಿಂತ ಹೆಚ್ಚಾಗಿ ಅವರ ಸೌಂದರ್ಯದ ಕುರಿತಂತೆ ಹೆಚ್ಚು ಇಷ್ಟಪಡುತ್ತಾರೆ. ಇವರೇ ಸೌಂದರ್ಯದಲ್ಲಿ ಬಾಲಿವುಡ್ ನಟಿಯರಿಗೂ ಕೂಡ ಟಕ್ಕರ್ ನೀಡುವಂತಹ ಆ 5 ಆಟಗಾರ್ತಿಯರು. ಇವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ಹಂಚಿಕೊಳ್ಳಿ.