ಇದ್ದಕ್ಕಿದ್ದಂತೆ ಯಾವುದೇ ಸಿನಿಮಾ ಬಿಡುಗಡೆ ಇಲ್ಲದಿದ್ದರೂ ದಿಢೀರ್ ಎಂದು ಸಂಭಾವನೆ ಏರಿಸಿಕೊಂಡ ವಿಜಯ್ ಮಹೇಶ್ ಬಾಬು.ಎಷ್ಟು ಕೋತಿ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸಿನಿಮಾ ರಂಗದ ಮಾರುಕಟ್ಟೆ ಹೆಚ್ಚಾದಂತೆಲ್ಲಾ ಚಿತ್ರ ನಟರ ಸಂಭಾವನೆಯೂ ಹೆಚ್ಚಾಗುತ್ತಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಶೈಲಿ ಬಂದ ಕಾರಣ ಎಲ್ಲಾ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆಯಾಗುವ ಕಾರಣ ಮಾರುಕಟ್ಟೆ ಸಹ ವಿಸ್ತ್ರತವಾಗಿದೆ. ಅದರಂತೆ ಸೂಪರ್ ಸ್ಟಾರ್ ಗಳ ಸಂಭಾವನೆಯ ಗ್ರಾಫ್ ಕೂಡ ಭರಪೂರ ಏರಿದೆ.

ಅದರಲ್ಲೂ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ಮಹೇಶ್ ಬಾಬು ಹಾಗೂ ವಿಜಯ್ ದೇವರಕೊಂಡ ಸಹ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರೆ. ನಟ ಮಹೇಶ್ ಬಾಬುರವರ ಬಹು ನೀರಿಕ್ಷಿತ ಚಿತ್ರ ಸರ್ಕಾರು ವಾರಿಪಾಠ ಸಿನಿಮಾ ಯುಗಾದಿ ನಂತರ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಈ ಚಿತ್ರ ಎಲ್ಲರ ನೀರಿಕ್ಷೆ ಹುಟ್ಟಿಸಿಕೊಂಡಿದೆ. ಈ ಚಿತ್ರಕ್ಕಾಗಿ ಮಹೇಶ್ ಬಾಬು ಬರೋಬ್ಬರಿ 70 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಒಂದು ವೇಳೆ ಈ ಸಿನಿಮಾವೇನಾದರೂ ಸೂಪರ್ ಹಿಟ್ ಆದರೇ, ಮಹೇಶ್ ಬಾಬು ಮುಂದಿನ ಚಿತ್ರಕ್ಕೆ 100 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ತೆಲುಗಿನ ಮತ್ತೊಬ್ಬ ಸೂಪರ್ ಸ್ಟಾರ್ ಎಂದರೇ ಅದು ವಿಜಯ್ ದೇವರಕೊಂಡ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ವಿಜಯ್ ದೇವರಕೊಂಡರವರ ಮತ್ತೊಂದು ಸಿನಿಮಾ ಲೈಗರ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.ಈ ಸಿನಿಮಾ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದ್ದು, ನಂತರ ಬೇರೆ ಭಾಷೆಗಳಿಗೆ ಡಬ್ ಆಗುವ ಸಾಧ್ಯತೆ ಇದೆ‌. ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಬರೋಬ್ಬರಿ 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸಿನಿಮಾ ಸೂಪರ್ ಹಿಟ್ ಆದರೇ , ವಿಜಯ್ ದೇವರಕೊಂಡ ಸಂಭಾವನೆ 50 ಕೋಟಿ ರೂಪಾಯಿಗೆ ಏರುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.