ನಾಯಕನ ಸ್ಥಾನಕ್ಕೆ ವಿದಾಯ ಕೋರುತ್ತಿರುವ ಸುದ್ದಿಯನ್ನು ವಿರಾಟ್ ಕೊಹ್ಲಿ ರವರು ಮೊದಲು ಹಂಚಿಕೊಂಡಿದ್ದು ಯಾರ ಬಳಿ ಗೊತ್ತಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಶಸ್ವಿ ನಾಯಕರು ಹಲವಾರು ಜನ ಇರಬಹುದು ಆದರೆ ಆಕ್ರಮಣಕಾರಿಯಾಗಿ ತಂಡವನ್ನು ಮುನ್ನಡೆಸಿಕೊಂಡು ಹೋಗಿ ಗೆಲುವಿನ ದಡಕ್ಕೆ ತಲುಪಿಸಿದ ಏಕೈಕ ನಾಯಕ ಎಂದು ಖಂಡಿತವಾಗಿ ವಿರಾಟ್ ಕೊಹ್ಲಿ ಅವರ ಹೆಸರನ್ನು ಹೇಳಬಹುದಾಗಿದೆ. ಈ ಹಿಂದೆಯೇ ಟಿ-20 ಹಾಗೂ ಏಕದಿನ ತಂಡದ ನಾಯಕತ್ವದ ಸ್ಥಾನಕ್ಕೆ ವಿರಾಟ್ ಕೊಹ್ಲಿ ಅವರು ರಾಜೀನಾಮೆ ನೀಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರಿಸಲಾಗದಂತಹ ದುಃಖವನ್ನು ನೀಡಿದ್ದರು.

ಆದರೆ ಈಗ ಸೌತ್ ಆಫ್ರಿಕಾ ಸರಣಿಯನ್ನು ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಸ್ಥಾನಕ್ಕೆ ಕೂಡ ರಾಜೀನಾಮೆ ನೀಡಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಮತ್ತೊಂದು ಶಾ’ಕ್ ನೀಡಿದ್ದಾರೆ. ಹೌದು ಗೆಳೆಯರೆ ವಿರಾಟ್ ಕೊಹ್ಲಿ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಳ್ಳುವುದರ ಮೂಲಕ ನಾಯಕನ ಸ್ಥಾನಕ್ಕೆ ವಿದಾಯ ಹೇಳುತ್ತಿದ್ದೇನೆ ಎಂಬ ಸಂದೇಶವನ್ನು ಎಲ್ಲರಿಗೂ ಕೂಡ ತಲುಪಿಸಿದ್ದಾರೆ. ಈ ಪೋಸ್ಟ್ನಲ್ಲಿ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ಹಾಗೂ ತನ್ನನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ಸಿದ್ಧಪಡಿಸಿದ ಮಹೇಂದ್ರಸಿಂಗ್ ಧೋನಿ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಧೋನಿ ರವರು ನನ್ನ ಮೇಲೆ ನಂಬಿಕೆ ಇಟ್ಟು ನಾನು ತಂಡವನ್ನು ಮುನ್ನಡೆಸಿಕೊಂಡು ಹೋಗಬಲ್ಲೆ ಎಂಬುದನ್ನು ನಮಗೆ ಮನದಟ್ಟು ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂಬುದಾಗಿ ಕೂಡ ಹೇಳಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ರವರು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವ ಸುದ್ದಿಯನ್ನು ಮೊದಲಿಗೆ ಹೇಳಿದ್ದು ಯಾರಿಗೆ ಗೊತ್ತಾ. ಹೌದು ಗೆಳೆಯರೇ ಈ ಸುದ್ದಿ ಸಾಕಷ್ಟು ಕುತೂಹಲವನ್ನು ಉಂಟು ಮಾಡಿದ್ದು ಇದಕ್ಕೂ ಕೂಡ ನಾವು ಉತ್ತರವನ್ನು ಹೇಳಲಿದ್ದೇವೆ. ಹೌದು ಗೆಳೆಯರೇ ಈ ಸುದ್ದಿಯನ್ನು ಮೊದಲಿಗೆ ಹೇಳಿದ್ದು ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ಮತ್ತು ತಂಡದ ಸದಸ್ಯರಿಗೆ. ತಂಡದ ಸಭೆಯಲ್ಲಿ ಈ ವಿಚಾರವನ್ನು ಹಂಚಿಕೊಂಡ ನಂತರ ನಾನು ಘೋಷಣೆ ಮಾಡುವವರೆಗೂ ಕೂಡ ಯಾರಿಗೂ ಹೇಳಬೇಡಿ ಎಂಬುದಾಗಿ ವಿರಾಟ್ ಕೊಹ್ಲಿ ರವರು ಹೇಳಿದ್ದರಂತೆ. ಭಾರತೀಯ ಕ್ರಿಕೆಟ್ ತಂಡವನ್ನು ನಾಯಕನಾಗಿ 68 ಪಂದ್ಯಗಳಲ್ಲಿ ಮುನ್ನಡೆಸಿ 40 ಪಂದ್ಯಗಳಲ್ಲಿ ಗೆದ್ದಿದ್ದಾರೆ ಎಂಬುದನ್ನು ಕೂಡ ನಾವು ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ.

Get real time updates directly on you device, subscribe now.