ಇದ್ದಕ್ಕಿದ್ದ ಹಾಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಡೋಲೋ 650 ರಾಗಿ ಹಿಟ್ಟು ಶಶಿ, 300 ರೂಪಾಯಿಗಾಗಿ ಆಂಟಿ ಮಾಡುತ್ತಿರುವ ಕೆಲಸ ನೋಡಿ ಶಾಕ್ ಆದ ಪೊಲೀಸರು.

ನಮಸ್ಕಾರ ಸ್ನೇಹಿತರೇ ಕೆಲವು ತಿಂಗಳುಗಳ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ಒಬ್ಬ ಮಹಿಳೆಯ ವಿಡಿಯೋ ವೈರಲ್ ಆಗಿತ್ತು. ಶಶಿ ಎಂಬ ಮೈಸೂರು ಮೂಲದ ಹೆಣ್ಣುಮಗಳೊಬ್ಬಳು ರಾಜಕಾರಣಿಗಳ ರಾಜಕಾರಣದ ಲಾಕ್ಡೌನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತ ನನಗೂ ಸಹ ಜ್ವರ ಬಂದಿತ್ತು ಸರ್ ಆದರೆ dolo-650 ಮಾತ್ರೆ ಹಾಗೂ ರಾಗಿ ಮುದ್ದೆ ಹಿಟ್ಟು ತಿಂದೆ ಎಲ್ಲ ಸರಿ ಹೋಯಿತು ಎಂಬುದಾಗಿ ಹೇಳಿದ್ದರು. ಇದು ಅಂದಿನ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ವೈರಲ್ ಆಗಿತ್ತು.

ಈಗ ಅದೇ ಶಶಿ ಎಂಬ ಮಹಿಳೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಹಾಗಿದ್ದರೆ ಈಗ ಸಡನ್ನಾಗಿ ಸುದ್ದಿಗೆ ಬರಲು ಕಾರಣ ಏನು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ. ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ಶಶಿಯ ಈ ವಿಡಿಯೋ ಸಾಮಾಜಿಕ ಟ್ರೋಲ್ ಪೇಜ್ ಗಳಲ್ಲಿ ಹಾಗೂ ಜನರಿಂದಲೂ ಕೂಡ ಸಾಕಷ್ಟು ಮೆಚ್ಚುಗೆ ಹಾಗೂ ಬೆಂಬಲವನ್ನು ಪಡೆದಿತ್ತು. ಇಷ್ಟು ಮಾತ್ರವಲ್ಲದೆ ಈಕೆ ಡೋಲೋ ಮತ್ತು ರಾಗಿ ಮುದ್ದೆ ಹಿಟ್ಟಿನ ಕುರಿತಂತೆ ರಿಮಿಕ್ಸ್ ಹಾಡುಗಳು ಕೂಡ ತಯಾರಾಗಿ ಬಿಡುಗಡೆಯಾಗಿದ್ದವು.

ಆ ಸಂದರ್ಭದಲ್ಲಿ ಶಶಿ ಅವರ ಸಂದರ್ಶನವನ್ನು ಕೂಡ ಮೈಸೂರಿನ ಮಾಧ್ಯಮಗಳು ಮಾಡಿದ್ದರು ಆಗ ಶಶಿ ಅವರು ನಾನು ಆಗಾಗ ಟಿವಿಯ ಸುದ್ದಿಗಳನ್ನು ನೋಡಿ ತಿಳಿಯುತ್ತೇನೆ ಎಂಬುದಾಗಿ ಹೇಳಿದ್ದಾರೆ. ಮಾತ್ರವಲ್ಲದೆ ನನ್ನ ಮಗಳನ್ನು ಡಿಸಿ ಮಾಡಿಸುತ್ತೇನೆ ಮಗನನ್ನು ಆರ್ಮಿಗೆ ಸೇರಿಸುತ್ತೇನೆ ಎಂಬುದಾಗಿ ಹೇಳಿದಾಗ ಜನರು ಕೂಡ ಇವರ ಮಾತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅದಾದ ಬಳಿಕ ವಾಹಿನಿಯವರು ಚುನಾವಣೆಗೆ ಏನಾದರೂ ನಿಲ್ತೀರಾ ಎಂಬುದಾಗಿ ಕೇಳಿದಾಗ ಅವಕಾಶ ಸಿಕ್ಕರೆ ಖಂಡಿತವಾಗಿ ನಿಲ್ಲುತ್ತೇನೆ ಎಂಬುದಾಗಿ ಅವರು ಹೇಳಿದ್ದರು. ಇದು ಸ್ವಲ್ಪಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್ ಗಳ ಮುಖಾಂತರ ಟ್ರೋಲ್ ಗೆ ಒಳಗಾಗಿತ್ತು.

ಆ ಸಂದರ್ಭದಲ್ಲಿ ಶಶಿ ಅವರು ಸಾಧ್ಯವಾದರೆ ಸಹಾಯ ಮಾಡಿ ಇಲ್ಲದಿದ್ದರೆ ಸುಮ್ಮನೆ ಇರಿ ಸುಖಾಸುಮ್ಮನೆ ಬೇಕಾಬಿಟ್ಟಿಯಾಗಿ ಟ್ರೋಲ್ ಮಾಡಬೇಡಿ ಎಂಬುದಾಗಿ ಪರೋಕ್ಷವಾಗಿ ಟ್ರೋಲ್ ಪೇಜ್ ಗಳಿಗೆ ಟಾಂಗ್ ನೀಡಿದ್ದರು. ಇದಾದ ನಂತರ ಹಲವಾರು ಸಮಯಗಳ ಕಾಲ ಶಶಿ ಅವರು ಎಲ್ಲೂ ಕೂಡಾ ಪತ್ತೆ ಇರಲಿಲ್ಲ. ಈಗ ಪೊಲೀಸ್ ಠಾಣೆ ಹೇರುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಶಶಿಗೆ ಪರಿಚಯ ಇರುವ ವಸಂತ ಎಂಬ ಆಂಟಿ ಒಬ್ಬರು ಆಕೆ ಅಮ್ಮನ ಬಳಿಗೆ ಬಂದು ಶಶಿ ಅವರ ಫೋನ್ ನಂಬರ್ ಪಡೆದು 4 ಏರಿಯಾ ಗಳಿಗೆ ಪಾಂಪ್ಲೆಟ್ ಹಂಚುವ ಕೆಲಸವಿದೆ 300 ರೂಪಾಯಿ ಸಿಗುತ್ತೆ ಬರ್ತೀಯ ಎಂಬುದಾಗಿ ಹೇಳಿದ್ದಾರೆ.

ಆಗ ಪ್ರತಿಕ್ರಯಿಸಿರುವ ಶಶಿ ನನಗೆ ಗೋಡೌನ್ ನಲ್ಲಿ ಕೆಲಸ ಇದೆ ಅದನ್ನು ಮಾಡಬೇಕು ಎಂಬುದಾಗಿ ಹೇಳಿದ್ದಾರೆ. ಆಗ ಅವರ ಅತ್ತಿಗೆ ಈ ಕೆಲಸವನ್ನು ನಾನು ಮಾಡುತ್ತೇನೆ ಎಂಬುದಾಗಿ ಹೇಳಿ ಎಲ್ಲವನ್ನೂ ಮಾಡಿ ಮುಗಿಸಿ ವಸಂತ ಆಂಟಿಯ ಮನೆಗೆ ಹೋಗಿದ್ದಾರೆ. ಮನೆಗೆ ಬಂದ ಶಶಿ ಅತ್ತಿಗೆಗೆ 300 ರೂಪಾಯಿಯನ್ನು ನೀಡಿ, ಆ ಕೆಲಸ ಮಾಡು ಇನ್ನೂ 300 ರೂಪಾಯಿ ನೀಡುತ್ತೇನೆ ಎಂಬುದಾಗಿ ಹೇಳಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಇದಾದ ಕೂಡಲೇ ಶಶಿ ಅತ್ತಿಗೆ ಶಶಿ ಅವರಿಗೆ ಕರೆ ಮಾಡಿ ನಂತರ ಬಂದು ಬಾಗಿಲು ತೆಗೆದು ಶಶಿಯ ಅತ್ತಿಗೆಯನ್ನು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದ್ದು ಇನ್ನೂ ಕೂಡ ವಸಂತ ಆಂಟಿಯನ್ನು ಠಾಣೆಗೆ ಕರೆದಿಲ್ಲ.

ಈ ಪ್ರಕರಣಕ್ಕೆ ಕುರಿತಂತೆ ಪ್ರತಿಕ್ರಿಯಿಸಿರುವ ಶಶಿ ಅವರು ಬಂದವರೆಲ್ಲಾ ಏನಾಯ್ತು ಏನಾಯ್ತು ಎಂದು ಕೇಳುತ್ತಲೇ ಇದ್ದಾರೆ ಬಂದವರಿಗೆಲ್ಲ ಹೇಳಿಕೊಂಡು ಕೂರೋಕೆ ಏನು ಟಾಮ್ ಅಂಡ್ ಜೆರ್ರಿ ಕಥೆನಾ. ಅವಳ ಗಂಡ ಒಳ್ಳೆಯವನು ಆಗಿದ್ದಕ್ಕೆ ಆಯ್ತು ಇಲ್ಲವಾದರೆ ನೀನು ಕೂಡ ಹೀಗೆ ಮಾಡುತ್ತಿಯಾ ಎಂಬುದಾಗಿ ಅವಳನ್ನು ಬಿಟ್ಟು ಹೋಗುತ್ತಿದ್ದ. ನಾವು ಪಾನಿಪುರಿ ಮಾರಿಕೊಂಡು ಜೀವನ ಸಾಗಿಸುವ ಜನ ನಾನು ಬರುವುದಿಲ್ಲ ಎಂದು ಹೇಳಿದ್ದಕ್ಕೆ ನನ್ನ ಅತ್ತಿಗೆಯನ್ನು ಕರೆದುಕೊಂಡು ಹೋಗಿದ್ದಾರೆ ಇಂತಹ ಕೆಲಸ ಮಾಡುವ ಇವರಿಗೆ ಶಿಕ್ಷೆ ಆಗಲೇಬೇಕು ಎಂಬುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ ಶಶಿ ಅವರು.