ಗರುಡ ಪುರಾಣದ ಪ್ರಕಾರ ಯಾರೇ ಆಗಲಿ ಅಪ್ಪಿ ತಪ್ಪಿಯೂ ಕೂಡ ಈ ಎರಡು ಕೆಲಸ ಮಾಡುವಾಗ ನೋಡಲೇಬೇಡಿ, ಯಮಯಾತನೆ ಅನುಭವಿಸ್ತೀರಾ.

61

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ದೇಶ ಎನ್ನುವುದು ನಿಮಗೆಲ್ಲ ತಿಳಿದಿರುವಂತೆ ಹಿಂದೂ ಸಂಸ್ಕೃತಿ ಅಂದರೆ ಸನಾತನ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಂತಹ ದೇಶ. ಇಲ್ಲಿ ಹಲವಾರು ಪುರಾಣ ಗ್ರಂಥಗಳು ಕೂಡ ಇವೆ. ಅವುಗಳಲ್ಲಿ ಒಂದು ಪ್ರಮುಖವಾಗಿರುವುದು ಎಂದರೆ ಗರುಡ ಪುರಾಣ. ಗರುಡ ಪುರಾಣ ಗ್ರಂಥ ಎನ್ನುವುದು ಕಶ್ಯಪ ಹಾಗೂ ಮಹಾವಿಷ್ಣುವಿನ ವಾಹನವಾಗಿರುವ ಗರುಡ ಪ್ರಾಣಿಗಳ ಮರಣದ ನಂತರದ ಜೀವನದ ಕುರಿತಂತೆ ಮಹಾವಿಷ್ಣುವಿನಲ್ಲಿ ಕೇಳಿದಾಗ ಮಹಾವಿಷ್ಣು ನೀಡಿದಂತಹ ವಿವರದ ಅಂಶಗಳನ್ನು ಒಳಗೊಂಡಂತಹ ಪವಿತ್ರ ಗ್ರಂಥವಾಗಿದೆ.

ಪುಣ್ಯ ಹಾಗೂ ಪಾಪ ಕಾರ್ಯಗಳ ಕುರಿತಂತೆ ಸವಿವರವಾಗಿ 19 ಸಾವಿರಕ್ಕೂ ಅಧಿಕ ಸಂಸ್ಕೃತ ಶ್ಲೋಕಗಳು ಈ ಗರುಡ ಪುರಾಣ ಗ್ರಂಥದಲ್ಲಿದೆ. ಮರಣದ ನಂತರ ಆತ್ಮಗಳು ಹೇಗೆ ಮರು ಜನ್ಮವನ್ನು ಪಡೆಯುತ್ತವೆ ಹಾಗೂ ಇನ್ನಿತರ ವಿಚಾರಗಳ ಕುರಿತಂತೆ ಗರುಡ ಪುರಾಣ ಗ್ರಂಥದಲ್ಲಿ ಸಾಕಷ್ಟು ಮಹತ್ತರ ವಿಚಾರಗಳು ನಿಮಗೆ ದೊರೆಯುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಬೇರೆಯದೇ ವಿಚಾರದ ಕುರಿತಂತೆ. ಆ ವಿಚಾರವೇನೆಂದರೆ ಮಹಿಳೆಯರು ಈ ಎರಡು ಕೆಲಸ ಮಾಡುತ್ತಿರಬೇಕಾದರೆ ಪುರುಷರು ಅಪ್ಪಿತಪ್ಪಿ ಕೂಡ ನೋಡಬಾರದು.

ಹಾಗಿದ್ದರೆ ಆ ಎರಡು ಕೆಲಸಗಳು ಯಾವುವು ಹಾಗೂ ಒಂದು ವೇಳೆ ನೋಡಿದರೆ ಪುರುಷರಿಗೆ ಏನಾಗುತ್ತದೆ ಎಂಬುದರ ಕುರಿತಂತೆ ನಿಮಗೆ ಹೇಳುತ್ತೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ಮೊದಲನೇದಾಗಿ ಒಂದು ವೇಳೆ ಮಹಿಳೆ ವಿವಸ್ತ್ರಳಾಗಿ ಸ್ನಾನ ಮಾಡುತ್ತಿರುವಾಗ ಪುರುಷರು ನೋಡಬಾರದು. ಒಂದು ವೇಳೆ ನೋಡಿದರೆ ಖಂಡಿತವಾಗಿ ಆತನ ಪುಣ್ಯಕರ್ಮಗಳೆಲ್ಲಾ ನಶಿಸಿಹೋಗಿ ಆತನಿಗೆ ನರಕದಲ್ಲಿ ಊಹಿಸಲಾಗದಂತಹ ಶಿಕ್ಷೆಯನ್ನು ನೀಡಲಾಗುತ್ತದೆ. ಹೀಗಾಗಿ ಈ ಕಾರ್ಯವನ್ನು ಮಾಡಲೇಬಾರದು. ಎರಡನೆಯದಾಗಿ ಒಬ್ಬ ತಾಯಿ ಮಗುವಿಗೆ ಹಾಲುಣಿಸುವಾಗ ಕೆಟ್ಟ ದೃಷ್ಟಿಯಿಂದ ಯಾವ ಪುರುಷರೂ ಕೂಡ ಆಕೆಯ ಸ್ತನವನ್ನು ನೋಡಬಾರದು. ಇದು ಮಹಾಪಾಪ ವಾಗಿದ್ದು ಈ ತಪ್ಪು ಕೆಲಸವನ್ನು ಮಾಡಿರುವ ಪುರುಷ ನರಕದಲ್ಲಿ ದೊಡ್ಡ ಶಿಕ್ಷೆಗೆ ಒಳಪಡುತ್ತಾನೆ. ಹೀಗಾಗಿ ಮಹಿಳೆಯರು ಈ ಎರಡು ಕೆಲಸ ಮಾಡುವಾಗ ಅಪ್ಪಿತಪ್ಪಿಯೂ ಕೂಡ ನೋಡಲೇಬಾರದು ಎಂಬುದಾಗಿ ಗರುಡ ಪುರಾಣದಲ್ಲಿ ಉಲ್ಲೇಖಿತವಾಗಿದೆ.

Get real time updates directly on you device, subscribe now.