ಭರ್ಜರಿ ಆಫರ್ ನೀಡಿದ ವೊಡಾಫೋನ್ ಐಡಿಯಾ ಸಂಸ್ಥೆ, ಆಫರ್ ತಿಳಿದರೇ ಈ ಕೂಡಲೇ ನಂಬರ್ ಬದಲಾಯಿಸುತ್ತೀರಿ. ಏನು ಆಫರ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತ ದೇಶದಲ್ಲಿ ಜಿಯೋ ಏರ್ಟೆಲ್ ವೊಡಾಫೋನ್ ಐಡಿಯಾ ದಂತಹ ಜನಪ್ರಿಯ ಟೆಲಿಕಾಂ ಸಂಸ್ಥೆಗಳಿವೆ. ಪ್ರತಿಯೊಂದು ಸಂಸ್ಥೆಗಳು ಕೂಡ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ವೊಡಾಫೋನ್ ಐಡಿಯಾ ಸಂಸ್ಥೆಯ ಹೊಸ ರೀಚಾರ್ಜ್ ಪ್ಲಾನ್ ಕುರಿತಂತೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಗ್ರಾಹಕರಿಗೆ ವಿಶೇಷವಾದ ಟೆಲಿಕಾಂ ಸೇವೆಯ ಅನುಭವವನ್ನು ನೀಡಲು ಹೊಸ ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸುತ್ತಲೇ ಇರುತ್ತವೆ.

ಈಗ ನಾವು ಮಾತನಾಡಲು ಹೊರಟಿರುವುದು ಐಡಿಯಾ ಸಂಸ್ಥೆ ಪರಿಚಯಿಸಿರುವ 601 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಕುರಿತಂತೆ. 601 ರೂಪಾಯಿ ರೀಚಾರ್ಜ್ ಮಾಡಿದರೆ ವೊಡಾಫೋನ್ ಐಡಿಯಾ ಸಂಸ್ಥೆ ತನ್ನ ಗ್ರಾಹಕರಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಲಿವೆ ಎಂಬುದರ ಕುರಿತಂತೆ ನಿಮಗೆ ವಿವರವಾಗಿ ಹೇಳಲಿದ್ದೇವೆ. ಮೊದಲನೇದಾಗಿ ಒಟಿಟಿ ಪ್ಲಾಟ್ಫಾರ್ಮ್ ಆಗಿರುವ ಡಿಸ್ನಿ ಹಾಟ್ಸ್ಟಾರ್ ಒಂದು ವರ್ಷದವರೆಗೆ ಉಚಿತವಾಗಿ ನೋಡಬಹುದಾಗಿದೆ. ವೊಡಾಫೋನ್ ಐಡಿಯಾ ಸಂಸ್ಥೆ ಮರು ಪರಿಚಯಿಸಿರುವ 601 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ನಲ್ಲಿ 28 ದಿನಗಳವರೆಗೆ ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಮೆಸೇಜ್ ಮತ್ತು 3gb ಡೇಟಾವನ್ನು ಪಡೆಯಬಹುದಾಗಿದೆ.

ಈ ಪ್ಲಾನ್ ನಲ್ಲಿ ಬಿಂಗ್ ಆಲ್ ನೈಟ್ ಸೇವೆ ಕೂಡ ಲಭ್ಯವಾಗಿದೆ. ಇದರ ಪ್ರಕಾರ ರಾತ್ರಿ 12 ರಿಂದ ಬೆಳಿಗ್ಗೆ 5 ರತನಕ ಉಚಿತವಾಗಿ ಸಿನಿಮಾಗಳನ್ನು ನೋಡಬಹುದಾಗಿದೆ. ವೀಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಕೂಡ ಇದೆ. ಇದರ ಪ್ರಕಾರ ನೀವು ವಾರಪೂರ್ತಿ ಬಳಸದೆ ಉಳಿಸಿರುವ ಡೇಟಾವನ್ನು ವಾರಾಂತ್ಯಕ್ಕೆ ಬಳಸಬಹುದಾದಂತಹ ಅವಕಾಶವಿದೆ. ಡೇಟಾ ಡಿಲೈಟ್ಸ್ ಸೇವೆ ಕೂಡ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ನೀವು ರಿಚಾರ್ಜ್ ಮಾಡಿದ್ದಕ್ಕಾಗಿ ಬಂದಿರುವುದಕ್ಕಿಂತ ಹೆಚ್ಚುವರಿ ಡೇಟಾವನ್ನು ಯೋಜನೆಗಳಲ್ಲಿ ಪಡೆಯಬಹುದಾಗಿದೆ. ನೀವು ಒಂದು ವೇಳೆ ವೊಡಾಫೋನ್ ಐಡಿಯಾ ಸಂಸ್ಥೆಯ ಗ್ರಾಹಕರಾಗಿದ್ದರೆ ಪ್ರೀಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಪ್ರಯತ್ನಿಸಬಹುದಾಗಿದೆ.