ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪರೂಪದ ವಿದ್ಯಮಾನ. ಒಂದೇ ತಿಂಗಳು ಅಂದರೆ ಇದೇ ಜನವರಿ ಯಲ್ಲಿ ಎಷ್ಟು ಗ್ರಹಗಳು ಸ್ಥಾನಪಲ್ಲಟ ಮಾಡುತ್ತವೆ ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಜ್ಯೋತಿಷ್ಯಾಸ್ತ್ರದಲ್ಲಿ ಗ್ರಹ ಸಂಚಾರಕ್ಕೆ ಹೆಚ್ಚಿನ ಮಹತ್ವವಿದೆ. ಪ್ರತಿ ಗ್ರಹಗಳೂ ಸಂಚಾರವಾದಾಗ ಅದು ನಮ್ಮ ರಾಶಿಗಳ ಮೇಲೆ ಪ್ರಭಾವ ಬೀರುತ್ತಿದೆ. ಆಗ ಅದು ನಮ್ಮ ಜೀವನದಲ್ಲೂ ಕೆಲವು ಬದಲಾವಣೆಗಳನ್ನು ತರಬಹುದು. ೨೦೨೧ರ ಡಿಸೆಂಬರ್‌ನಲ್ಲಿ ಮಕರ ರಾಶಿಗೆ ಬುಧನ ಸಂಚಾರವಾಗಿದೆ. ಧನು ರಾಶಿಯಲ್ಲಿ ಬುಧ ವಕ್ರೀಯವಾಗಿ ಡಿ. 30ರಿಂದ ಚಲಿಸುತ್ತಿದ್ದಾನೆ.ಹಾಗಾದರೆ, ಈ ವರ್ಷದ ಆರಂಭದಲ್ಲಿ ಯಾವ ಗ್ರಹಗಳು ಸಂಚಾರ ನಡೆಸುತ್ತವೆ ನೋಡೋಣ.

ಜನವರಿ 14ಕ್ಕೆ ಸೂರ್ಯ ಸಂಕ್ರಮಣ ಇದೆ. ಕರ್ನಾಟಕದಲಿ ಮಾತ್ರವಲ್ಲದೇ ದೇಶದ ವಿವಿದೆಡೆ ಈ ದಿನವನ್ನು ಸಂಕ್ರಮಣ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಸೂರ್ಯ ಸಂಕ್ರಮಣದ ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನ ಮಹತ್ವದ ದಿನವಾಗಲಿದೆ. ಇದೇ ದಿನ ಮಕರದಲ್ಲಿ ಬುಧನ ವಕ್ರೀಯ ಚಲನೆ ನಡೆಯುತ್ತದೆ. ಸೂರ್ಯನ ನೇರ ಚಲನೆ, ಬುಧನ ಚಕ್ರೀಯ ಚಲನೆ ಕೆಲವು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಜನವರಿ 16ರಂದು ಧನು ರಾಶಿಗೆ ಮಂಗಳ ಗ್ರಹದ ಪ್ರವೇಶವಾಗುತ್ತದೆ. ಮಂಗಳನು ಮೇಷ ಹಾಗೂ ವೃಶ್ಚಿಕ ರಾಶಿಗಳಿಗೆ ಅಧಿಪತಿಯಾದವನು. ಇನ್ನು ಧನು ರಾಶಿಯಲ್ಲಿ ಶುಕ್ರನ ನೇರ ಸಂಚಾರವಾಗಲಿದೆ. ಧನು ರಾಶಿಯಲ್ಲಿ ವಕ್ರೀಯವಾಗಿ ಚಲಿಸುತ್ತಿದ್ದ ಶುಕ್ರ, ಜನವರಿ 29ರಿಂದ ಮತ್ತೆ ನೇರವಾಗಿ ಚಲಿಸಲಾರಂಭಿಸುತ್ತಾನೆ. ಈ ಸಮಯದಲ್ಲಿ ಜೀವನದಲ್ಲಿ ಕೆಲವು ಬದಲಾವಣೆಗಳಾಗಬಹುದು. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

Get real time updates directly on you device, subscribe now.