ಕೊನೆಗೂ ಬಯಲಾಯ್ತು ಅಸಲಿ ಕಾರಣ. ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21ಕ್ಕೆ ಏರಿಸಲು ಅಸಲಿ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರಮುಖವಾದ ಘಟ್ಟವಾಗಿದೆ ಇದರಿಂದಾಗಿ ಅದರ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹಾಗೂ ವಿಮರ್ಶೆಗಳನ್ನು ಮಾಡಲೇಬೇಕಾಗುತ್ತದೆ. ಇನ್ನು ಈಗ ಇದರ ಕುರಿತಂತೆ ಕೇಂದ್ರವು ಕೂಡ ಹೊಸ ಕ್ರಮಗಳನ್ನು ಕೈಗೊಂಡಂತಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲ ಕಾನೂನು ಹೇಗಿತ್ತು ಎಂದರೆ ಹುಡುಗಿಗೆ 18 ವರ್ಷ ವಾದರೆ ಸಾಕು ಆಕೆಯನ್ನು ಮದುವೆ ಮಾಡಿ ಕೊಡಬಹುದು ಎನ್ನುವುದಾಗಿತ್ತು.

ಆದರೆ ಈಗ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳಿಂದಾಗಿ ಕೇಂದ್ರ ಹುಡುಗಿಯರ ಮದುವೆ ಆಗುವ ವಯಸ್ಸಿನ ನಿಯಮವನ್ನು ತಿದ್ದುಪಡಿ ಮಾಡಿದೆ. ಕ್ಯಾಬಿನೆಟ್ ಹಾಗೂ ಸಚಿವ ಸಂಪುಟದ ಒಮ್ಮತ ಒಪ್ಪಿಗೆಯ ಮೇರೆಗೆ ಮದುವೆ ಆಗುವ ಹುಡುಗಿಯ ವಯಸ್ಸಿನ ನಿಯಮವನ್ನು 18ರಿಂದ 21ಕ್ಕೆ ಏರಿಸಲಾಗಿದೆ. ಇನ್ನು ಈ ವಿಚಾರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿ ಸ್ವಾಗತಿಸಿದರೆ ಇನ್ನೂ ಕೆಲವರು ಟೀಕಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮದುವೆ ವಯಸ್ಸಿನ ನಿಯಮವನ್ನು ತಿದ್ದುಪಡಿ ಮಾಡಿರುವುದಕ್ಕೆ ಕಾರಣ ಏನು ಎಂಬುದನ್ನು ಕೂಡ ನಾವು ನಿಮಗೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.

ಮದುವೆ ಆಗುತ್ತಿರುವ ಯುವಕ ಹಾಗೂ ಯುವತಿಯ ನಡುವೆ ವಯಸ್ಸಿನ ಸಮಾನತೆಯನ್ನು ಹೆಚ್ಚಿಸುವುದರ ಕಾರಣದಿಂದಾಗಿ, ಯುವತಿಯ ಶೈಕ್ಷಣಿಕ ಸಾಧನೆಗೆ ಇನ್ನಷ್ಟು ಅವಕಾಶಗಳನ್ನು ಕಲ್ಪಿಸುವುದಕ್ಕಾಗಿ, ಬೇಗ ಮದುವೆ ಆಗುವುದರಿಂದ ಕೆಲವೊಮ್ಮೆ ಗರ್ಭಿಣಿ ಹಾಗೂ ಮಗು ಇಬ್ಬರಿಗೂ ಕೂಡ ಮರಣದ ಸಂಭವ ಹೆಚ್ಚಾಗಿರುವುದರಿಂದ ಅದನ್ನು ತಗ್ಗಿಸುವ ಸಲುವಾಗಿ. ಇನ್ನು ಹೆಣ್ಣುಮಕ್ಕಳು ಅಪೌಷ್ಟಿಕತೆಯನ್ನು ತಪ್ಪಿಸುವ ಕಾರಣದಿಂದಾಗಿ ಈ ನಿಯಮಗಳನ್ನು ಜಾರಿ ಮಾಡಿದೆ. ಇನ್ನು ಸಂಸದೆಯಾಗಿರುವ ಜಯ ಬಚ್ಚನ್ ಸೇರಿದಂತೆ ಹಲವಾರು ಜನರು ಪ್ರತಿಪಕ್ಷದವರು ಕೂಡ ಈ ಕಾರ್ಯಕ್ರಮವನ್ನು ಸ್ವಾಗತಿಸಿದ್ದಾರೆ. ಇದರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.