ಬಿಗ್ ನ್ಯೂಸ್: ಇರುವ ಏಕೈಕ ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳುತ್ತಾ ಜೆಡಿಎಸ್. ಪ್ರಜ್ವಲ್ ರೇವಣ್ಣ ಮಾಡಿಕೊಂಡ ಎಡವಟ್ಟು ಏನು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡಮಟ್ಟದ ಬದಲಾವಣೆಗಳು ಕಂಡು ಬರುತ್ತಿವೆ. ಡ್ರಾಮಗಳು ಹೈಡ್ರಾ ಮಗಳು ಕೂಡ ನಡೆಯುತ್ತಿದೆ. ಇನ್ನು ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಹೌದು ಗೆಳೆಯರೇ ದೊಡ್ಡಗೌಡರ ಮೊಮ್ಮಗನಾಗಿರುವ ಪ್ರಜ್ವಲ್ ರೇವಣ್ಣನವರು ಈಗ ಹೊಸ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ನವರು ಹಾಸನ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಂತಹ ಏಕೈಕ ಕ್ಷೇತ್ರವೆಂದರೆ ಅದು ಪ್ರಜ್ವಲ್ ರೇವಣ್ಣನವರ ಹಾಸನ ಕ್ಷೇತ್ರ. ಈಗ ಪ್ರಜ್ವಲ ರೇವಣ್ಣನವರ ಕ್ಷೇತ್ರ ಕೂಡ ಜೆಡಿಎಸ್ ನಿಂದ ಕೈತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತದೆ. ಇದಕ್ಕೆ ಕಾರಣವಾಗಿರುವುದು ಪ್ರಜ್ವಲ್ ರೇವಣ್ಣ ರವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಅಂತಹ ಕೆ ಮಂಜುರವರು. ಮಂಜುರವರು ಪ್ರಜ್ವಲ ರೇವಣ್ಣನವರು ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿಯ ಕುರಿತಂತೆ ಸುಳ್ಳು ದಾಖಲೆಗಳನ್ನು ನೀಡಿ ಮೋಸ ಮಾಡಿದ್ದಾರೆ ಎಂಬುದರ ಕುರಿತಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಇದನ್ನು ಹೈಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿತ್ತು.

ಇನ್ನು ಇದಾದ ನಂತರ ಈ ಪ್ರಕರಣ ಎನ್ನುವುದು ಸುಪ್ರೀಂ ಕೋರ್ಟ್ ಗೆ ಹೋಗಿ ಅಲ್ಲಿಂದ ಮತ್ತೊಮ್ಮೆ ಇದರ ಕುರಿತಂತೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಒಂದು ವೇಳೆ ಪ್ರಜ್ವಲ್ ರೇವಣ್ಣನವರು ತಪ್ಪು ಆಸ್ತಿಯ ವಿವರವನ್ನು ನೀಡಿದ್ದರೆ ಇದು ಸಾಬೀತಾದರೆ ಖಂಡಿತವಾಗಿಯೂ ಅವರು ಸ್ಥಾನವನ್ನು ಕಳೆದುಕೊಳ್ಳುವುದು ಗ್ಯಾರಂಟಿ ಎಂಬುದಾಗಿ ರಾಜಕೀಯ ವಲಯದಲ್ಲಿ ಮಾತುಗಳು ಶುರುವಾಗಿದೆ. ಇದರ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿಯ ಟರ್ನ್ ಅಂಡ್ ಟ್ವಿಸ್ಟ್ ಗಳನ್ನು ಪಡೆಯುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Get real time updates directly on you device, subscribe now.