ನೀವು ಚಿನ್ನ ಹಾಗೂ ಬೆಳ್ಳಿ ಕೊಂಡು ಕೊಳ್ಳಬೇಕು ಎಂದುಕೊಂಡಿದ್ದೀರಾ??ಹಾಗಿದ್ದರೆ ಇವುಗಳನ್ನು ಕೊಳ್ಳಲು ಶುಭ ದಿನ ಯಾವುದು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯರು ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕೊಳ್ಳುವುದರಲ್ಲಿ ಜಾಗತಿಕವಾಗಿ ಸಾಕಷ್ಟು ಮುಂದಿದ್ದಾರೆ ಎಂಬುದು ಈಗಾಗಲೇ ಸರ್ವೆಯ ಪ್ರಕಾರ ತಿಳಿದುಬಂದಿದೆ. ನಿಮಗೆಲ್ಲ ತಿಳಿದಿರುವಂತೆ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ತೆಗೆದುಕೊಳ್ಳಲು ಅಕ್ಷಯತೃತಿಯ ದಿನ ತುಂಬಾ ಶುಭದಿನ ಎಂಬುದು ಗೊತ್ತೇ ಇದೆ.

ಆದರೆ ವರ್ಷಕ್ಕೆ ಒಂದು ಬಾರಿ ಬರುವ ಅಕ್ಷಯ ತೃತೀಯದಂದು ಮಾತ್ರ ಚಿನ್ನಾಭರಣಗಳನ್ನು ತೆಗೆದುಕೊಳ್ಳುವ ರೂಲ್ಸ್ ಇಲ್ಲ. ಹಾಗಿದ್ದರೆ ಬೇಕೆಂದಾಗ ಚಿನ್ನವನ್ನು ಕೂಡ ತೆಗೆದುಕೊಳ್ಳಬಾರದು. ಚಿನ್ನ ಹಾಗೂ ಬೆಳ್ಳಿ ಯನ್ನು ಖರೀದಿಸಲು ಅದಕ್ಕೆ ಆದಂತಹ ಕೆಲವು ವಿಶೇಷವಾದ ದಿನಗಳಿರುತ್ತವೆ. ಹಿಂದುಗಳ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಲು ಯೋಚಿಸಿದ್ದರೆ ಈ ದಿನಗಳಲ್ಲಿ ಖರೀದಿಸಿ. ಸೋಮವಾರ ಚಂದ್ರನ ವಾರ ವಾಗಿರುವುದರಿಂದಾಗಿ ಬೆಳ್ಳಿ ತರಲು ಶುಭದಿನ. ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಅಥವಾ ಸಂಜೆ 6 ರಿಂದ ರಾತ್ರಿ 10 ಗಂಟೆ ಒಳಗಡೆ ಬೆಳ್ಳಿಯನ್ನು ಖರೀದಿಸಬಹುದು. ಮಟಮಟ ಮಧ್ಯಾಹ್ನದ ಸಮಯದಲ್ಲಿ ಬೆಳ್ಳಿಯನ್ನು ಖರೀದಿಸಲೇ ಬಾರದು.

ಇನ್ನೂ ಚಿನ್ನವನ್ನು ಶುಕ್ರವಾರ ಅಥವಾ ಗುರುವಾರ ಕೊಂಡು ತಂದರೆ ಶುಭವಾಗಿರುತ್ತದೆ. ರಾಹುಕಾಲದ ನಂತರ ಅಥವಾ ಅದಕ್ಕಿಂತ ಮುನ್ನ ಚಿನ್ನದ ಅಂಗಡಿಗೆ ಹೋಗಿ ಚಿನ್ನವನ್ನು ಖರೀದಿಸಬೇಕು. ಚಿನ್ನ ಗುರು ಸ್ವರೂಪ ವಾಗಿರುವುದರಿಂದ ಆಗಿ ಶುಭ ಕಾಲದಲ್ಲಿ ಚಿನ್ನವನ್ನು ಮನೆಗೆ ತಂದರೆ ದೀರ್ಘಕಾಲದವರೆಗೆ ಇರುತ್ತದೆ. ಒಂದು ವೇಳೆ ರಾಹುಕಾಲದಲ್ಲಿ ಚಿನ್ನವನ್ನು ತೊಂದರೆ ಹೆಚ್ಚು ಕಾಲ ನಿಮ್ಮೊಂದಿಗೆ ಚಿನ್ನ ಎನ್ನುವುದು ಉಳಿಯುವುದಿಲ್ಲ. ಇನ್ನು ಬೆಳ್ಳಿಯನ್ನು ಹೆಚ್ಚು ಮನೆಯಲ್ಲಿ ಸಂಗ್ರಹಿಸಿಡಬಾರದು. ಚಿನ್ನವನ್ನು ಹೆಚ್ಚಾಗಿ ಧರಿಸಿಕೊಂಡು ಓಡಾಡಬಾರದು ಇದರಿಂದಾಗಿ ಕಷ್ಟಗಳು ಮನೆಯಲ್ಲಿ ಹೆಚ್ಚುತ್ತದೆ. ಹೀಗಾಗಿ ಎಲ್ಲವನ್ನೂ ಕೂಡ ಮಿತವಾಗಿ ಬಳಸಿ ಶಾಸ್ತ್ರ ಪ್ರಕಾರವಾಗಿ ನಡೆಯಬೇಕಾಗಿರುವುದು ಅನುಕೂಲವಾಗಿದೆ.

Get real time updates directly on you device, subscribe now.