ಕಳ್ಳತನ ಮಾಡಲು ಹೋದ, ಹಣ ಏನೋ ಸಿಕ್ತು. ಆದರೆ ಮಲಗಿದ್ದ ಸುಂದರ ಸ್ತ್ರೀಗೆ ಮರುಳಾದ. ಅದೇ ತಪ್ಪಾಯ್ತು. ಕಳ್ಳನ ಸ್ಥಿತಿ ಏನಾಗಿದೆ ಗೊತ್ತೇ??

1

ನಮಸ್ಕಾರ ಸ್ನೇಹಿತರೇ ತಾನೊಂದು ಬಗೆದರೆ ದೈವವೊಂದು ಬಗೆಯಿತು ಏನು ಮಾತು ಇಂದು ನಾವು ಹೇಳಹೊರಟಿರುವ ಒಂದು ನೈಜ ಘಟನೆ ಖಂಡಿತವಾಗಿಯೂ ಸೀಮಿತವಾಗಿದೆ ಎಂದರೆ ಖಂಡಿತ ತಪ್ಪಾಗಲಾರದು. ಆತ ಮಾಡಲು ಹೋಗಿದ್ದೆ ಬೇರೆ ಅಲ್ಲಿ ನಡೆದಿದ್ದೆ ಬೇರೆ ಮುಂದೆ ಆಗಿದ್ದೆ ಬೇರೆ ಎಂಬಂತೆ ಆಗಿದೆ ಈ ವಿಷಯ.

ಕೇಳಲು ಹಾಸ್ಯಸ್ಪದವಾಗಿ ಇದ್ದರೂ ಕೂಡ ಕೊನೆಗೆ ಆತನ ಪರಿಸ್ಥಿತಿ ಆಗಿರುವುದು ಮಾತ್ರ ಶೋಚನೀಯವಾಗಿದೆ. ಹೌದು ಗೆಳೆಯರೇ ಇದು ನಡೆದಿರುವುದು ಬಿಹಾರದಲ್ಲಿ. ಕಳ್ಳನೊಬ್ಬ ಒಬ್ಬ ಸುಂದರ ಮಹಿಳೆಯ ಮನೆಗೆ ಕಳ್ಳತನ ಮಾಡಲು ಹೋಗಿದ್ದ. ಮೊದಲಿಗೆ ನಾವು ಹೇಳುವುದಾದರೆ ಕಳ್ಳತನವೇ ಒಂದು ಕೆಟ್ಟ ಕೆಲಸ. ಆದರೆ ಈ ಕೆಟ್ಟ ಕೆಲಸದ ಜೊತೆಗೆ ಮತ್ತೊಂದು ಕೆಟ್ಟ ಕೆಲಸ ಮಾಡಲು ಹೋಗಿದ್ದು ಆತನಿಗೆ ಮುಳುವಾಗಿ ಪರಿಣಮಿಸಿದೆ ಎಂದು ಹೇಳಬಹುದಾಗಿದೆ.

ಹೌದು ರಾತ್ರಿ ಹೊತ್ತಿಗೆ ಆತ ಮಹಿಳೆಯೊಬ್ಬರ ಮನೆಗೆ ಕನ್ನ ಹಾಕಲು ಹೋಗಿದ್ದ. ಈ ಸಂದರ್ಭದಲ್ಲಿ ಕಳ್ಳತನ ಮಾಡುವ ಹೊತ್ತಿಗೆ ಆತನಿಗೆ ತಾನು ಬಂದಿದ್ದ ಕೆಲಸವೇ ಮರೆತುಹೋಗಿತ್ತು. ಇದಕ್ಕೆ ಕಾರಣವಾಗಿದ್ದು ಆ ಮಹಿಳೆಯ ಸೌಂದರ್ಯ. ಆಕೆಯ ಜೊತೆಗೆ ಮಾಡಬಾರದ ಕೆಲಸ ಮಾಡಲು ಹೋಗಿದ್ದಾಗ ಆಕೆ ಧೈರ್ಯ ತೆಗೆದುಕೊಂಡು ಜೋರಾಗಿ ಕಿರುಚಿದ್ದಾಳೆ. ಇದನ್ನು ಕೇಳಿ ಹೆದರಿಕೊಂಡ ಆ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ.

ಆದರೆ ಹೋದೆ ಪಿಶಾಚಿ ಬಂದೆ ಗವಾಕ್ಷಿ ಎನ್ನುವ ಹಾಗೆ ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದ ಪೊಲೀಸರು ಈತನನ್ನು ನೋಡಿ ಠಾಣೆಗೆ ಎಳೆದುಕೊಂಡು ಬಂದಿದ್ದಾರೆ. ಠಾಣೆಗೆ ಕರೆತಂದು ಆತನನ್ನು ಪೋಲಿಸ್ ಶೈಲಿಯಲ್ಲಿ ವಿಚಾರಿಸಿದ್ದಾರೆ. ಆಗ ಆತ ನಡೆದಿರುವ ವಿಷಯವನ್ನೆಲ್ಲ ಬಾಯಿಬಿಟ್ಟಿದ್ದಾನೆ. ತನ್ನದೇ ಪರಿಸರದ ಸುತ್ತಮುತ್ತಲಿರುವ ಮನೆಯಲ್ಲಿ ಈತ ಕಳ್ಳತನಕ್ಕೆ ಹೋಗಿದ್ದಾನೆ. ಇನ್ನು ಈತನ ನಿಜವಾದ ಹೆಸರು ಸೌರವ್ ಎನ್ನುವುದಾಗಿ. ಸೌರವ್ ಆಕೆಯ ಮನೆಗೆ ಕಳ್ಳತನಕ್ಕೆ ಹೋಗಿದ್ದಾಗ ಆಕೆ ತನ್ನ ಮಗುವಿನೊಂದಿಗೆ ಒಬ್ಬಳೇ ಮಲಗಿದ್ದಾಳೆ.

ಇನ್ನು ಆಕೆಯ ತಲೆದಿಂಬಿನ ಕೆಳಗೆ ಇರುವ ಬೀರುವಿನ ಕಿ ಅನ್ನು ತೆಗೆದುಕೊಂಡು ಹೋಗಿ 10 ಸಾವಿರದ ಬಂಡಲ್ ಅನ್ನು ತೆಗೆದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ಆ ಮಹಿಳೆಯ ಮೇಲೆ ಕೂಡ ಆ ಕಳ್ಳ ಆಸೆಪಟ್ಟಿದ್ದ. ಹೀಗಾಗಿ ಅವಳನ್ನು ಮುಟ್ಟಲು ಹೋಗಿದ್ದ ಈತ. ತಾನು ಮಾಡಲು ಬಂದ ಕೆಲಸವನ್ನು ಸರಿಯಾಗಿ ಮಾಡಿದರೆ ಈತ ಸರಿಯಾದ ಸ್ಥಿತಿಯಲ್ಲೇ ಹೊರಗೆ ಹೋಗುತ್ತಿದ್ದ.

ಆದರೆ ಆತನ ಮನಸ್ಸಿನಲ್ಲಿ ಬಂದಂತಹ ಇನ್ನೊಂದು ಕೆಟ್ಟ ಯೋಚನೆ ಈತನನ್ನು ಅಲ್ಲೇ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಹಿಡಿಯುವಂತೆ ಆಯ್ತು. ಈಗ ಸೌರವ್ ಪೊಲೀಸರ ಅತಿಥಿಯಾಗಿದ್ದು ಠಾಣೆಯಲ್ಲಿ ಪೊಲೀಸರು ಈತನಿಗೆ ಸರಿಯಾಗಿ ಥಳಿಸಿದ್ದಾರೆ. ಸೌರವ್ ಕುರಿತಂತೆ ಹಾಗೂ ಆತನು ಮಾಡಲು ಹೊರಟಿದ್ದ ಕೆಲಸದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.