ಅಸಲಿಗೆ ನಿಜವಾಗಲೂ ಅಪ್ಪು ಫೋಟೋ ಅನ್ನು ಶಬರಿಮಲೆಗೆ ತೆಗೆದುಕೊಂಡು ಹೋದದ್ದು ಯಾಕೆ?? ಯಾಕೆ ಈ ರೀತಿ ಮಾಡಿದ್ದಾರೆ ಗೊತ್ತೇ??

0

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಎಂದಾಕ್ಷಣ ಅಕ್ಟೋಬರ್ 29 ಎಂಬ ಕರಾಳ ದಿನ ನೆನಪಿಗೆ ಬರುತ್ತದೆ. ಇಂದಿಗೂ ಕೂಡ ಅವರನ್ನು ಇಷ್ಟಪಟ್ಟಿರುವ ಎಲ್ಲಾ ಅಭಿಮಾನಿಗಳು ಆ ದಿನ ಕನಸಾಗಿ ಮತ್ತೆ ಪುನೀತ್ ರಾಜಕುಮಾರ್ ರವರು ಎದ್ದು ಬರಲಿ ಎಂದು ಆಶಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ರವರು ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಒಬ್ಬ ಸಮಾಜಸೇವಕರಾಗಿ ಕೂಡ ಯಾರಿಗೂ ತಿಳಿಯದಂತೆ ಸಮಾಜದಲ್ಲಿ ಒಂದು ಉತ್ತಮ ಬೆಳವಣಿಗೆ ಮೂಡಿಬರಲು ಕಾರಣರಾಗಿದ್ದಾರೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಇಷ್ಟೊಂದು ಒಳ್ಳೆಯ ಕೆಲಸಗಳನ್ನು ಮಾಡಿದರು ಕೂಡ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳದೆ ಅದರ ಶ್ರೇಯವನ್ನು ತಾನು ಪಡೆಯದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸಮಾಜದಲ್ಲಿ ಬದುಕಿದ್ದವರು. ಇಂಥವರನ್ನು ಪಡೆಯಲು ನಿಜಕ್ಕೂ ಕರ್ನಾಟಕ ಧನ್ಯವಾದಗಳು ಎಂದರೆ ತಪ್ಪಾಗಲಾರದು. ಕೇವಲ 46ನೇ ವಯಸ್ಸಿಗೆ ಈ ಲೋಕದ ಪಯಣವನ್ನು ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದರೆ ಯಾರಿಗೂ ಕೂಡ ನಂಬಲು ಸಾಧ್ಯ ಇಲ್ಲ. ಇನ್ನು ಇತ್ತೀಚಿಗಷ್ಟೇ ಅಯ್ಯಪ್ಪನ ಸನ್ನಿಧಿಗೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ಅವರ ಫೋಟೋವನ್ನು ತೆಗೆದುಕೊಂಡು ಹೋಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸುದ್ದಿಯನ್ನು ಮಾಡಿತ್ತು. ಈ ವಿಷಯದ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇನೆ.

ತುಮಕೂರಿನ ನಿವಾಸಿಯಾಗಿರುವ ದೇವರಾಜು ರವರು ಅಣ್ಣಾವ್ರ ಕುಟುಂಬದ ದೊಡ್ಡ ಅಭಿಮಾನಿಯಾಗಿದ್ದರು. ಇವರು ಅಣ್ಣಾವ್ರ ಕುಟುಂಬದ ಎಲ್ಲಾ ಸಿನಿಮಾಗಳನ್ನು ಕೂಡ ಒಂದು ಚಾಚೂ ತಪ್ಪದಂತೆ ನೋಡಿದ್ದಾರೆ. ಇನ್ನು ಇವರ ಊರ ದೇವಸ್ಥಾನವನ್ನು ಹೊಡೆಯಲಾಗಿದೆ ಹೊಸದಾಗಿ ನಿರ್ಮಾಣ ಮಾಡುವವರೆಗೂ ದೇವರ ಮೂರ್ತಿಗಳನ್ನು ಅವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ದೇವಸ್ಥಾನ ಕಾರ್ಯಗಳು ಪೂರ್ಣವಾದ ನಂತರ ಶನೇಶ್ವರ ಹಾಗೂ ಮುನೇಶ್ವರ ಸ್ವಾಮಿಯ ಜೊತೆಗೆ ಅಪ್ಪು ಅವರ ಫೋಟೋವನ್ನು ಕೂಡ ಗರ್ಭಗುಡಿಯ ಒಳಗೆ ಇಟ್ಟು ಪೂಜೆ ಮಾಡುತ್ತಾರಂತೆ. ಅಷ್ಟಿಲ್ಲದೇ ಅಣ್ಣಾವ್ರು ಆ ಕಾಲದಲ್ಲಿ ಅಭಿಮಾನಿಗಳು ದೇವರು ಎಂದು ಕರೆದಿದ್ದಾರಾ.