ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ಇರಬೇಕು ಎಚ್ಚರ, ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈಕೆಯೇ ಉದಾಹರಣೆ. ಎಲ್ಲವೂ ಚೆನ್ನಾಗಿದ್ದಾಗ ಏನಾಯಿತು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ನಾವು ಎಷ್ಟು ವರ್ಷ ಒಂಟಿಯಾಗಿ ಬದುಕುತ್ತೇವೋ ಗೊತ್ತಿಲ್ಲ, ಆದರೆ ನಮ್ಮ ಜೀವನಕ್ಕೆ ಇನ್ನೊಬ್ಬ ವ್ಯಕ್ತಿಯ ಆಗಮನವಾದ ನಂತರ ಮಾತ್ರ ಎಲ್ಲವೂ ಬದಲಾಗಿ ಹೋಗುತ್ತದೆ. ಕೆಲವರಿಗೆ ಮದುವೆಯ ನಂತರದ ಜೀವನ ಖುಷಿಕೊಟ್ಟರೆ, ಇನ್ನೂ ಕೆಲವರಿಗೆ ಮದುವೆಯ ನಂತರ ಜೀವನ ನರಕವಾಗಿ ಹೋಗುತ್ತದೆ. ಹಾಗಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾನೇ ಎಚ್ಚರಿಕೆಯಿಂದ ಮುಂದುವರೆಯಬೇಕು.

ಹಾಗಾಗದಿದ್ದಲ್ಲಿ ಎಂಥ ಒಂದು ಪರಿಸ್ಥಿತಿಯನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ ಎಂಬುದನ್ನು ಈ ನಿರೂಪಕಿಯ ಜೀವನ ನಿಮಗೆ ಅರ್ಥ ಮಾಡಿಸುತ್ತದೆ. ನಾವಿಲ್ಲಿ ಮಾತನಾಡುತ್ತಿರುವುದು ಚೆನ್ನೈ ನ ಒಬ್ಬಳು ನಿರೂಪಕಿಯ ಬಗ್ಗೆ. ಈಕೆ ಚೆನ್ನೈ ನಲ್ಲಿ ತುಂಬಾನೇ ಫೇಮಸ್ ನಿರೂಪಕಿ ಎಂದು ಹೇಳಬಹುದು. ಆಕೆಯ ಹೆಸರು ಚಿತ್ರಾ. ಈ ಸ್ಪುರದ್ರೂಪಿಯಾದಂಥ ಚಿತ್ರ ಮಾತನಾಡುವುವ ಶೈಲಿ ಹಾಗೂ ಅವರ ಅಭಿವ್ಯಕ್ತಿ ಎಲ್ಲರಿಗೂ ತುಂಬಾನೇ ಇಷ್ಟವಾಗಿತ್ತು. ಅಷ್ಟೇ ಅಲ್ಲ, ವಯಕ್ತಿಕವಾಗಿ ಕೂಡ ಅತ್ಯಂತ ಒಳ್ಳೆಯ ಸ್ವಭಾವ ಚಿತ್ರಾ ಅವರದ್ದು.

ಆರಂಭಿಕ ಛಾಯಾಚಿತ್ರಗ್ರಾಹಕರಿಗೆ ಮಾಡೆಲ್ ಆಗಿ ಅಥವಾ ಸ್ಥಳೀಯ ವಾಹಿನಿಗಳಿಗೆ ನಿರೂಪಕಿಯಾಗಿ ಹಣವನ್ನು ತೆಗೆದುಕೊಳ್ಳದೇ ಅಥವಾ ಅತ್ಯಂತ ಕಡಿಮೆ ದುಡ್ಡಿಗೆ ಕೆಲಸ ಮಾಡಿಕೊಡುತ್ತಿದ್ದರು. ತುಂಬಾನೇ ಸಹಾಯಕ ಮನೋಭಾವವನ್ನು ಹೊಂದಿದ್ದರು ಚಿತ್ರಾ ಎಂದು ಅವರ ಸ್ನೇಹಿತರು ಹಾಗೂ ಆಪ್ತರು ಹೇಳುತ್ತಾರೆ. ಚಿತ್ರಾ ನಿರೂಪಕಿಯಾಗಿ ಜನರ ಮೆಚ್ಚುಗೆ ಗಳಿಸಿದ ಮೇಲೆ ನಿಧಾನವಾಗಿ ನಟನಾ ಲೋಕಕ್ಕೂ ಪಾದಾರ್ಪಣೆ ಮಾಡಿದರು. ತಮಿಳು ಧಾರಾವಾಹಿಗಳಲ್ಲಿ ಅತ್ಯುತ್ತಮವಾಗಿ ಪಾತ್ರ ನಿಭಾಯಿಸುತ್ತಿದ್ದ ಚಿತ್ರ ಜನರಿಗೆ ಇನ್ನಷ್ಟು ಹತ್ತಿರವಾದರು.

ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಚಿತ್ರಾ ನಟನೆಯ ಮೊದಲ ಧಾರಾವಾಹಿ ಪಾಂಡ್ಯನ್ ಸ್ಟೋರ್ಸ್. ಈ ಧಾರಾವಾಹಿಯಲ್ಲಿ ಆಕೆಯ ಪಾತ್ರದ ಹೆಸರು ಮುಲೈಯನ್ ಎಂದು. ಇನ್ನು ನ್ರೂಪಕಿಯಾಗಿ ಮಾತ್ರವಲ್ಲ, ನಟಿಯಾಗಿಯೂ ಕೂಡ ಜನರನ್ನು ಸಂಪೂರ್ಣ ಆವರಿಸಿಬಿಟ್ತರು ಚಿತ್ರಾ. ಇದಾದ ಬಳಿಕ ಅವರಿಗೆ ಸಾಕಷ್ಟು ಆಫರ್ ಗಳೂ ಕೂಡ ಬಂದವು. ಈ ಎಲ್ಲದರ ನಡುವೆ ವಿಧಿ ನಿಶ್ಚಯ ಮಾಡಿದ್ದು ಮಾತ್ರ ಬೇರೆಯದೇ ಆಗಿತ್ತು. ಡಿಸೆಂಬರ್ 9 ರಂದು ಚಿತ್ರಾ ಚೆನ್ನೈನ ಹೋಟೆಲ್ ರೂಮ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ತಾವೇ ಸ್ವತಃ ಜೀವ ತೆಗೆದುಕೊಂದರು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಆದರೆ ಚಿತ್ರಾ ಅವರ ಪಾಲಕರು ಚಿತ್ರಾ ಹಾಗೆಲ್ಲಾ ಮಾಡಿಕೊಳ್ಳುವವಳಲ್ಲ,

ಅವಳ ಗಂಡನೇ ಏನೋ ಮಾಡಿರಬೇಕು, ಅವನನ್ನು ವಿಚಾರಿಸಿ ಎಂದು ಪೋಲೀಸರಿಗೆ ದೂರು ನೀಡಿದರು. ಚಿತ್ರಾ ಅವರ ಪತಿ ಹೇಮಂತ್ ರಾಜ್, ಚೆನ್ನೈ ನವರೇ ಆದ ಇವರು ಅಲ್ಲಿನ ಸ್ಥಳಿಯ ಉದ್ಯಮಿ. 2020ರಲ್ಲಿ ಇಬ್ಬರೂ ಪರಿಚಯವಾಗಿ ಪರಸ್ಪರ ಒಮ್ಮತದಿಂದ ಅಕ್ಟೋಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ನವೆಂಬರ್ ನಲ್ಲಿಯೇ ಎಲ್ಲರ ಸಮ್ಮುಖದಲ್ಲಿ ಮದುವೆಯನ್ನೂ ಕೂಡ ಆಗುತ್ತಾರೆ. ಚಿತ್ರಾ ಹಾಗೂ ಹೇಮಂತ್ ರಾಜ್ ಎಲ್ಲಿ ಯಾವಾಗ ಹೇಗೆ ಪರಿಚಯ ಆದ್ರು ಅನ್ನೋದು ಯಾರಿಗೂ ಗೊತ್ತಿಲ್ಲ, ಕೊನೆಗೆ ತನಿಖೆಯ ನಂತರ ಇವರಿಬ್ಬರ ಸಂಬಂಧ ಇಬ್ಬರ ಮನೆಯವರಿಗೂ ಇಷ್ಟವಿರಲಿಲ್ಲ ಎಂದು ಗೊತ್ತಾಗುತ್ತದೆ.

ಕಥೆ ಇಷ್ಟಕ್ಕೆ ಮುಗಿಯಲಿಲ್ಲ, ಚಿತ್ರಾ ಸಾವಿಗೆ ಅವಳ ಪತಿ ಹೇಮಂತ ಕಾರಣ ಅಂತ ಊರ್‍ಏ ಹೇಳ್ತಿದ್ರು ಹೇಮಂತ್ ಮಾತ್ರ ತಾನು ಅದೆಷ್ಟು ಸಾಚಾ ಎಂದು ಪ್ರೋವ್ ಮಾಡಿಕೊಳ್ಳುವುದರಲ್ಲಿ ಮಗ್ನನಾಗಿದ್ದ. ಆಕೆ ಹೋಟೆಲ್ ಗೆ ಬರ ಹೇಳಿದ್ದಳು. ನಾನು ಹೋದಾಗ ಸ್ನಾನ ಮಾಡಿ ಬರುವುದಾಗಿ ಒಳ ಹೋದವಳು ಎಷ್ಟೋತ್ತಾದರೂ ಬರಲಿಲ್ಲ ಆನಂತರ ಹೋಗಿ ನೋಡಿದರೆ ಉಸಿರು ಬಿಟ್ಟಿದ್ದಳು ಎಂದು ಹೇಳುತ್ತಾನೆ. ಆದರೆ ಎಷ್ಟಂದ್ರೂ ಪೋಲಿಸರು ಒಮ್ಮೆ ಅನುಮಾನ ಬಂದ್ರೆ ಬಿಡುತ್ತಾರೆಯೇ? ಕೊನೆಗೂ ಸತ್ಯ ಬೆಳಕಿಗೆ ಬಂದೇ ಬಿಡ್ತು.

ಚಿತ್ರಾ ಜಗತ್ತನ್ನು ತೊರೆಯುವುದಕ್ಕೆ ಕಾರಣ ಹೇಮಂತ್ ಗಿದ್ದ ಒಂದು ವಾಸಿಯಾಗದ ರೋಗ ಅದುವೆ, ಅನುಮಾನ. ಹೌದು ಚಿತ್ರಾ ಅಭಿನಯಿಸುತ್ತಿರುವುದು ಹೇಮಂತ್ ಗೆ ಇಷ್ಟವಿರಲಿಲ್ಲ. ಆಕೆ ಅಭಿನಯಿಸಿದಾಗ ಅವಳಿಗೆ ಮೆಸೇಜ್ ಅಥವಾ ಕಾಲ್ ಮಾಡಿ ಟಾರ್ಚರ್ ಮಾಡುತ್ತಿದ್ದ. ಇದೇ ಕಾರಣಕ್ಕೆ ಆಕೆ ತನ್ನ ಜೀವವನ್ನೇ ಬಿಡಬೇಕಾಯಿತು. ಹೌದು ಸ್ನೇಹಿತರೆ, ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಒಮ್ಮೆ ಎಡವಿದರೆ ಮುಂದಿನ ಜೀವನ ಪೂರ್ತಿ ಕಷ್ಟಪಡಬೇಕಾದ ಸ್ಥಿತಿ ಎದುರಾಗಬಹುದು ಎಚ್ಚರ!

Get real time updates directly on you device, subscribe now.