ಅಂದಿನ ಕಾಲದ ಎಲ್ಲರ ನೆಚ್ಚಿನ ನಟ ಶ್ರೀಧರ್ ಅವರ ಮಗಳು ಯಾರು ಗೊತ್ತೇ??ಅವರು ಕೂಡ ಫುಲ್ ಫೇಮಸ್. ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ, ಕನ್ನಡ ಹಿರಿತೆರೆಯಲ್ಲಿ ಮಿಂಚಿದ ಹಲವಾರು ಕಲಾವಿದರ ಬಗ್ಗೆ ನಮಗೆ ತಿಳಿದಿದೆ. ಇನ್ನು ಕೆಲವು ಮುಖಗಳಂತೂ ನಾವು ಮರೆಯಲು ಸಾಧ್ಯವೇ ಇಲ್ಲ. ಅನಂತನಾಗ್, ಪ್ರಕಾಶ್ ರಾಜ್ ಮೊದಲಾದವರು ಪೋಷಕ ಪಾತ್ರಗಳನ್ನು ನಿರ್ವಹಿಸಿದರೂ ಕೂಡ ಅವರನ್ನು ನೋಡುವುದಕ್ಕಾಗಿಯೇ ಚಿತ್ರಮಂದಿರಕ್ಕೆ ಹೋಗುವವರಿದ್ದಾರೆ. ಅಂಥ ಅದ್ಭುತ ನಟರು ಅವರು. ಇನ್ನು ನಟ ಶ್ರೀಧರ್ ಕೂಡ ಈ ಸಾಲಿಗೆ ಸೇರುತ್ತಾರೆ. ಒಂದು ಕಾಲದ ಅದ್ಭುತ ಕಲಾವಿದ ನಟ ಶ್ರೀಧರ್.

ಒಬ್ಬ ನಟ ಕೇವಲ ಮುಖದಲ್ಲಿಯೇ ತನ್ನ ಎಲ್ಲಾ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಬಲ್ಲ ಎಂದಿದ್ದರೆ ಆ ಕ್ರೆಡಿಟ್ ನಟ ಶ್ರೀಧರ್ ಅವರಿಗೆ ಸಲ್ಲುತ್ತದೆ. ಹೌದು ಸ್ನೇಹಿತರೆ ನಟ ಶ್ರೀಧರ್ ನಟರು ಮಾತ್ರವಲ್ಲ ಒಬ್ಬ ಅತ್ಯದ್ಭುತ ನೃತ್ಯಗಾರ ಕೂಡ. ಹಾಗಾಗಿ ಸಾಕಷ್ಟು ಪೌರಾಣಿಕ ಸಿನಿಮಾಗಳಲ್ಲಿ, ಭಾವನಾತ್ಮಕ ಚಿತ್ರಗಳಲ್ಲಿ ನಟಿಸಿ, ತಮ್ಮ ನೈಜ ನಟನೆಗೆ ಸೈ ಎನಿಸಿಕೊಂಡವರು ನಟ ಶ್ರೀಧರ್. ಶ್ರೀಧರ್ ಅವರು ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದವರು.

1984ರಲ್ಲಿ ತೆರೆಕಂಡ ಅಮೃತ ಘಳಿಗೆ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟವರು ನಟ ಶ್ರೀಧರ್. ಇವರು ಸಾಂಸಾರಿಕ ಚಿತ್ರಗಳಲ್ಲಿ ಹಾಗೂ ಭಕ್ತಿ ಪ್ರಧಾನ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಮಹಿಳಾ ಅಭಿಮಾನಿಗಳನ್ನೇ ಹೆಚ್ಚು ಸಂಪಾದಿಸಿಕೊಂಡಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಶ್ರೀಧರ್ ಅವರು ಕನ್ನಡದಲ್ಲಿ 90 ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೇ ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ.

ನಟ ಶ್ರೀಧರ್ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೂ ಕೂಡ ಭಾಜನರಾಗಿದ್ದಾರೆ. ಅವರ ಸಂತ ಶಿಶುನಾಳ ಷರೀಫ ಚಿತ್ರಕ್ಕೆ ಉತ್ತಮ ನಟ ಎಂಬ ರಾಜ್ಯ ಪ್ರಶಸ್ತಿ ಲಭಿಸಿದೆ. ಶ್ರೀಧರ್ ಅವರ ವಯಕ್ತಿಕ ಜೀವನದ ಬಗ್ಗೆ ಹೇಳೋದಾದ್ರೆ, ನಟ ಶ್ರೀಧರ್ ಭರತನಾಟ್ಯ ಪ್ರವೀಣ. ಇವರು ನೃತ್ಯ ನಿರ್ದೇಶಕರಾಗಿ ಕಾರ್ಮನಿರ್ವಹಿಸಿದ್ದಾರೆ. 1991 ರಲ್ಲಿ ಭರತನಾಟ್ಯ ಕಲಾವಿದರಾದ ಅನುರಾಧ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಬ್ಬರೂ ಜೊತೆಗೂಡಿ ಸಾಕಷ್ಟು ನೃತ್ಯ ಪ್ರದರ್ಶನಗಳನ್ನು ನೀಡಿದ್ದು ಮಾತ್ರವಲ್ಲದೇ ತಮ್ಮ ಮಗಳು ಅನಘ ಗೌರಿಯವರಿಗೂ ಕೂಡ ನೃತ್ಯವನ್ನು ಕಲಿಸಿ, ಆಕೆ ಉತ್ತಮ ಭರತನಾಟ್ಯ ಕಲಾವಿದೆಯಾಗುವಲ್ಲಿ ಶ್ರೀಧರ್ ದಂಪತಿಗಳದ್ದು ದೊಡ್ಡ ಪಾತ್ರ. ಒಟ್ಟಿನಲ್ಲಿ ಭರತನಾಟ್ಯ ಕಲೆಯನ್ನು ಬಹು ಎತ್ತರಕ್ಕೆ ಬೆಳೆಸುವ ಅಭಿಲಾಷೆ ಹೊಂದಿರುವ ಈ ಕುಟುಂಬ ತಮ್ಮ ಕನಸು ನನಸಾಗಿಸಿಕೊಳ್ಳುವತ್ತ ಇನ್ನಷ್ಟು ದಾಪುಗಾಲು ಇಡಲಿ ಎಂಬುದೇ ನಮ್ಮೆಲ್ಲರ ಆಶಯ. ಸ್ನೇಹಿತರೆ, ಇನ್ನು ನಟ ಶ್ರೀಧರ್ ಅವರ ಯಾವ ಚಿತ್ರ ನಿಮಗಿಷ್ಟ ಎಂದು ಕಮೆಂಟ್ ಮಾಡಿ ನಮಗೆ ತಿಳಿಸಿ.