ಪುನೀತ್ ರಾವರಿಗಾಗಿ ದೇವರ ಮುಂದೆ ಹೊಸ ಪ್ರಶ್ನೆ ಇಟ್ಟ ಪುಟ್ಟ ಮಗು, ಈ ಪ್ರಶ್ನೆಗೆ ದೇವರು ಉತ್ತರ ನೀಡಲು ಸಾಧ್ಯವೇ?? ಏನು ಆ ಪ್ರಶ್ನೆ ನೀವೇ ವಿಡಿಯೋದಲ್ಲಿ ನೋಡಿ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನು ಅಗಲಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಅವರನ್ನು ಕಳೆದುಕೊಂಡು ಒಂದು ತಿಂಗಳು ಕಳೆದಿವೆ ಎಂದರೆ ಖಂಡಿತವಾಗಿ ಯಾರೊಬ್ಬರಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಆ ಹಸನ್ಮುಖ ಚೈತನ್ಯ ನಮ್ಮನ್ನು ಅಗಲಿ ಇರುವ ದುಃಖ ಇಂದಿಗೂ ಕೂಡ ಕಡಿಮೆಯಾಗುತ್ತಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವ ಸಾಮಾಜಿಕ ಕಾರ್ಯಗಳ ಕುರಿತಂತೆ ಅವರ ಮರಣದ ನಂತರವೇ ನಮಗೆ ಗೊತ್ತಾಗಿದ್ದು. ತಾನು ಮಾಡಿರುವ ಸಮಾಜಮುಖಿ ಕಾರ್ಯಗಳ ಕುರಿತಂತೆ ಎಂದಿಗೂ ಕೂಡ ಪ್ರಚಾರ ಗಿಟ್ಟಿಸಿಕೊಂಡವರಲ್ಲ ನಮ್ಮ ಅಪ್ಪು.

ಇದಕ್ಕಾಗಿ ಎಲ್ಲರೂ ಅವರನ್ನು ರಾಜರತ್ನ ಎಂದು ಕರೆಯುತ್ತಾರೆ. ತಮ್ಮ ಕೌಟುಂಬಿಕ ಸಿನಿಮಾಗಳ ಮೂಲಕ ಚಿಕ್ಕವರಿಂದ ದೊಡ್ಡವರವರೆಗೆ ಕೂಡ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಅವರ ಅಂತಿಮ ದರ್ಶನವನ್ನು ಪಡೆಯಲು ಬಂದ 25 ಲಕ್ಷಕ್ಕೂ ಅಧಿಕ ಜನರನ್ನು ನೋಡಿ ನೀವು ಇದನ್ನು ಅರ್ಥೈಸಿಕೊಳ್ಳಬಹುದಾಗಿದೆ. ಕನ್ನಡ ಚಿತ್ರರಂಗ ಪುನೀತ್ ರಾಜಕುಮಾರ್ ಅವರಿಗಿಂತ ಅತ್ಯುತ್ತಮ ನಟರನ್ನು ನೋಡಿರಬಹುದು ಆದರೆ ಅವರಂತಹ ಬಂಗಾರದ ಮನಸ್ಸಿನ ವ್ಯಕ್ತಿಯನ್ನು ನೋಡಿರಲು ಸಾಧ್ಯವೇ ಇಲ್ಲ.

ತಾವು ಯಾರಿಗೆ ಕೂಡ ಸಹಾಯ ಮಾಡಿದರು ಅದನ್ನು ಅವರ ಬಳಿಯಲ್ಲಿ ಯಾರಲ್ಲಿ ಕೂಡ ಹೇಳಿದಂತೆ ತಾಕೀತು ಮಾಡಿ ಕಳಿಸುತ್ತಿದ್ದರು. ಇನ್ನು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ 14ಕ್ಕೂ ಅಧಿಕ ಮಂದಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖದಲ್ಲಿ ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಪುನೀತ್ ರಾಜಕುಮಾರ್ ರವರ ಪುಟ್ಟ ಅಭಿಮಾನಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪುಟಾಣಿ ಅಭಿಮಾನಿ ಪುನೀತ್ ರಾಜಕುಮಾರ್ ಮಾಡಿದ ತಪ್ಪೇನು ಎಂಬ ಮಾತನ್ನು ಹೇಳುತ್ತಿದ್ದದ್ದು ಎಲ್ಲರ ಹೃದಯವನ್ನು ಹಿಂಡುವಂತೆ ಮಾಡಿತ್ತು. ನೀವು ಕೂಡ ಆ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದೆ.