ಮಾರ್ಷಿಯಲ್ ಆರ್ಟ್ಸ್ ಅನ್ನು ಕಲಿತುಕೊಂಡಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಇವೆರೆಲ್ಲರ ಮುಂದೆ ಬಾಲ ಬಿಚ್ಚಿದರೆ ಮುಗಿಯಿತು ಕಥೆ.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಎಂದಾಗ ಅಲ್ಲಿ ಸುಂದರ ನಟಿಮಣಿಯರು ಕಾಣಸಿಗುತ್ತಾರೆ. ಪರ ಭಾಷೆಗಳಲ್ಲಿಯೂ ಕೂಡ ಬಾಲಿವುಡ್ ಚಿತ್ರರಂಗದ ಸುಂದರ ನಟಿಮಣಿಯರ ಬಹು ಬೇಡಿಕೆ ಇದೆ. ನಾವು ಕೇವಲ ಈ ನಟಿಮಣಿಯರು ತಮ್ಮ ಗ್ಲಾಮರನ್ನು ತೋರಿಸುವುದನ್ನು ಬಿಟ್ಟು ಬೇರೆ ಏನು ಬರುವುದಿಲ್ಲ ಎಂದು ಅಂದುಕೊಂಡಿರುತ್ತೇವೆ. ಆದರೆ ಇಂದು ನಾವು ಹೇಳಹೊರಟಿರುವ 10 ಬಾಲಿವುಡ್ ನಟಿಯರಿಗೆ ಕೇವಲ ಸೌಂದರ್ಯ ಮಾತ್ರವಲ್ಲದೆ ಮಾರ್ಷಿಯಲ್ ಆರ್ಟ್ಸ್ ಕೂಡ ಬರುತ್ತದೆ.

ಐಶ್ವರ್ಯ ರೈ ಬಚ್ಚನ್ ಜಗತ್ತಿನ ಅತ್ಯಂತ ಸುಂದರಿಯರ ಪೈಕಿಯರಲ್ಲಿ ಐಶ್ವರ್ಯ ರೈ ಅವರು ಕೂಡ ಒಬ್ಬರು. ಅವರು ರಜಿನಿಕಾಂತ್ ನಟನೆಯ ರೋಬೋ ಚಿತ್ರದಲ್ಲಿ ನಟಿಸಬೇಕಾದರೆ ಮಾರ್ಷಲ್ ಆರ್ಟ್ಸ್ ಅನ್ನು ಕಳೆದುಕೊಂಡಿದ್ದರು. ಇನ್ನು ಅವರಿಗೆ ಮೂವತ್ತು ವರ್ಷಗಳಿಂದ ಭಾರತದಲ್ಲಿ ಜಪಾನ್ ಶಿಟೋ ರ್ಯೂ ಸ್ಕೂಲನ್ನು ನಡೆಸುತ್ತಿರುವ ರಮೇಶ್ ರವರು ಮಾರ್ಷಲ್ ಆರ್ಟ್ಸ್ ಅನ್ನು ಕಲಿಸಿದ್ದಾರೆ. ಅಸೀನ್ ಗಜನಿ ಖ್ಯಾತಿಯ ಯಾಸೀನ್ ಇಂಟರ್ನ್ಯಾಷನಲ್ ಪ್ರಾಜೆಕ್ಟ್ ದ 19th Sept ಗಾಗಿ ಕೇರಳದ ಕಳರಿಪಯಟ್ಟು ಗುರುವಿನ ಬಳಿ ಕಳರಿಪಯಟ್ಟು ವಿದ್ಯೆಯನ್ನು ಕಲಿತಿದ್ದರು.

ದೀಪಿಕಾ ಪಡುಕೋಣೆ ಅಕ್ಷಯ್ ಕುಮಾರ್ ನಟನೆಯ ಚಾಂದಿನಿ ಚೌಕ ಟು ಚೈನಾ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ವಿದ್ಯೆಯನ್ನು ಅಕ್ಷಯ್ ಕುಮಾರ್ ಅವರಿಂದ ಹಾಗೂ ಅಜ್ಞಾತ ಗುರುಗಳಿಂದ ಕಲಿತಿದ್ದರು. ಜೆನಿಲಿಯಾ ದೇಶ್ಮುಖ್ ಉರುಮಿ ಚಿತ್ರದ ಪಾತ್ರಕ್ಕಾಗಿ ಜೆನಿಲಿಯಾ ದೇಶಮುಖ್ ರವರು ಕಳರಿಪಯಟ್ಟುವಿನ ಕತ್ತಿವರಸೆಯನ್ನು ಕಲಿತುಕೊಂಡಿದ್ದರು. ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅವರ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಜನಪ್ರಿಯರು.

ಜಾಕ್ವೆಲಿನ್ ಫರ್ನಾಂಡಿಸ್ ಮೊದಲಿನಿಂದಲೂ ಕೂಡ ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್ ಬಗ್ಗೆ ಸಾಕಷ್ಟು ಕಾಳಜಿ ಇರುವವರು. ಇನ್ನು ಇವರು ವರುಣ್ ಧವನ್ ರವರ ಜೊತೆಗಿನ ಚಿತ್ರಕ್ಕಾಗಿ ಕೇರಳದ ಕಳರಿಪಯಟ್ಟು ವಿದ್ಯೆಯನ್ನು ಕಲಿತುಕೊಂಡಿದ್ದಾರೆ. ಕಂಗನಾ ರಣಾವತ್ ಕಂಗನಾ ರಾಣಾವತ್ ಡೈಲಾಗ್ ಡೆಲಿವರಿ ಹಾಗೂ ನಟನೆಯಲ್ಲಿ ಎಲ್ಲರ ಮನ ಗೆಲ್ಲುವಂತಹ ನಟಿ. ಇನ್ನು ಇವರು ಕ್ರಿಶ್ 2 ಚಿತ್ರಕ್ಕಾಗಿ ಕಿಕ್ ಬಾಕ್ಸಿಂಗ್ ಅನ್ನು ಕಲಿತುಕೊಂಡಿದ್ದರು.

ನರ್ಗಿಸ್ ಫಕ್ರಿ ತಾವು ಮುಂದೆ ನಟಿಸಲಿರುವ ಚಿತ್ರಕ್ಕಾಗಿ ನಟಿ ನರ್ಗೀಸ್ ಫಕ್ರಿ ಯವರು ಮೂವಾಯ್ ಥಾಯ್ ಮಾರ್ಷಿಯಲ್ ಆರ್ಟ್ಸ್ ವಿದ್ಯೆಯನ್ನು ಕಲಿತು ಕೊಳ್ಳುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ ದ್ರೋಣ ಚಿತ್ರಕ್ಕಾಗಿ ಪ್ರಿಯಾಂಕ ಚೋಪ್ರಾ ರವರಿಗೆ ಮಾರ್ಷಲ್ ಆರ್ಟ್ಸ್ ಅನ್ನು ಕಲಿಸಲಾಯಿತು. ಈ ಸಂದರ್ಭದಲ್ಲಿ ಕೋಲು ವರಸೆಯ ಮಾರ್ಷಲ್ ಆರ್ಟ್ಸ್ ಆಗಿರುವ ಘಟ್ಕಾವನ್ನು ಕಲಿಸಲಾಯಿತು. ಶಿಲ್ಪ ಶೆಟ್ಟಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಶಿಲ್ಪ ಶೆಟ್ಟಿ ಅವರು ಒಳ್ಳೆಯ ನಟಿ ಜೊತೆಗೆ ಯೋಗ ಟೀಚರ್ ಕೂಡ ಹೌದು.

ಆದರೆ ನಿಮಗೂ ಇದು ಕೂಡ ತಿಳಿದಿರಲಿ ಶಿಲ್ಪ ಶೆಟ್ಟಿ ಅವರು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಅನ್ನು ತೆಗೆದುಕೊಂಡಿದ್ದಾರೆ. ಮಾಧುರಿ ದೀಕ್ಷಿತ್ ಕೇವಲ ನೃತ್ಯ ಹಾಗೂ ನಟನೆಯಲ್ಲಿ ಮಾತ್ರವಲ್ಲದೆ ಮಾಧುರಿ ದೀಕ್ಷಿತ್ ಅವರು ಶಾವೋಲಿನ್ ಕುಂಗ್ ಫೂ, ಪೆಕಿಟಿ ತಿರ್ಸಿಯಾ ಕಲಿ ಮತ್ತು ಶಾವೋಲಿನ್ ಚಿನ್ ನ ವಿದ್ಯೆಯನ್ನು ಕೂಡ ಕಲಿತುಕೊಂಡಿದ್ದಾರೆ. ಇವಿಷ್ಟು ಬಾಲಿವುಡ್ ನಟಿಯರು ಸೌಂದರ್ಯದ ಜೊತೆಗೆ ಮಾರ್ಷಿಯಲ್ ಆರ್ಟ್ಸ್ ಅನ್ನು ಕೂಡ ಕಲಿತುಕೊಂಡಿದ್ದಾರೆ.