ಮನೆಯ ಮಹಿಳೆಯರು ಅಪ್ಪಿ ತಪ್ಪಿಯೂ ಕೂಡ ಈ ಕೆಲಸ ಮಾಡಬಾರದು, ಮಾಡಿದರೇ ದರಿದ್ರ ಪ್ರಾರಂಭವಾಗುತ್ತದೆ. ಯಾವ್ಯಾವು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಲಕ್ಷ್ಮಿಯ ಸ್ವರೂಪ ಎಂದು ಎಲ್ಲರೂ ಹೇಳುತ್ತಾರೆ ಇದು ಪುರಾತನ ಕಾಲದಿಂದಲೂ ಕೂಡ ಹೆಣ್ಣುಮಕ್ಕಳು ಪಡೆದುಕೊಂಡು ಬಂದಂತಹ ಗೌರವವಾಗಿದೆ. ಇನ್ನು ಹೆಣ್ಣುಮಕ್ಕಳು ತಮ್ಮ ಗಂಡನ ಮನೆಗೆ ಹೋಗಿ ಅಲ್ಲಿಯೂ ಕೂಡ ಲಕ್ಷ್ಮಿಯ ಸ್ವರೂಪವಾಗಿ ಬೆಳಗುತ್ತಾರೆ ಎಂಬುದು ನಂಬಿಕೆಯಾಗಿದೆ. ಆದರೆ ಹೆಣ್ಣುಮಕ್ಕಳು ಕೆಲವೊಂದು ವಿಚಾರಗಳನ್ನು ಹಾಗೂ ಕೆಲಸಗಳನ್ನು ಕನಸಿನಲ್ಲಿಯೂ ಕೂಡ ಮಾಡಬಾರದು ಇದರಿಂದಾಗಿ ಸಾಕಷ್ಟು ದರಿದ್ರ ಉಂಟಾಗುತ್ತದೆ ಎಂಬ ನಂಬಿಕೆ ಹಾಗೂ ಪ್ರಸ್ತಾಪನೆ ಗಳು ಉಲ್ಲೇಖ ಕೂಡ ಆಗಿದೆ.

ಒಬ್ಬ ಗಂಡಿನ ಯಶಸ್ಸಿನ ಹಿಂದೆ ಆತನ ಹೆಂಡತಿಯ ಪರಿಣಾಮ ಖಂಡಿತವಾಗಿಯೂ ಇದ್ದೇ ಇರುತ್ತದೆ ಎಂಬುದಾಗಿ ಎಲ್ಲರೂ ಹೇಳುತ್ತಾರೆ. ಹೌದು ಒಂದು ಮಹಿಳೆ ಹೇಗೆ ಗಂಡಿನ ಯಶಸ್ಸಿಗೆ ಕಾರಣಳಾಗುತ್ತಾಳೋ ಹಾಗೆಯೇ ಆತನ ವಿಫಲತೆಗೆ ಕೂಡ ಆಕೆಯ ಕಾರಣವಾಗಬಹುದು. ಇದು ಆಕೆ ಮಾಡುವ ಕಾರ್ಯದ ಮೇಲೆ ನಿಂತಿರುತ್ತದೆ. ಇಂದು ಇದೇ ವಿಷಯದ ಕುರಿತಂತೆ ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ಇಂದು ಹೇಳ ಹೊರಟಿರುವ ವಿಚಾರದಲ್ಲಿ ಮಹಿಳೆಯರು ಕನಸಿನಲ್ಲಿಯೂ ಕೂಡ ಈ ಎಂಟು ಕೆಲಸಗಳನ್ನು ಮಾಡಲೇಬಾರದು ಇಲ್ಲವಾದಲ್ಲಿ ಲಕ್ಷ್ಮಿಯ ಕೃಪಾಕಟಾಕ್ಷ ಅವರು ಇರುವ ಮನೆಯಲ್ಲಿ ಆಗುವುದಿಲ್ಲ. 1 ಯಾವ ಮನೆಯಲ್ಲಿ ಪೊರಕೆಗೆ ಕಾಲನ್ನು ತಾಗಿಸಿಕೊಳ್ಳುತ್ತಾರೆ ಆ ಮನೆಯಲ್ಲಿ ಎಂದಿಗೂ ಕೂಡ ಲಕ್ಷ್ಮಿ ನೆಲೆಸಲು ಸಾಧ್ಯವೇ ಇಲ್ಲ.

ಯಾಕೆಂದರೆ ಪೊರಕೆಗೆ ಲಕ್ಷ್ಮಿ ದೇವಿಯ ಸಮಾನವಾದ ಮಾನ್ಯತೆಗಳು ನೀಡಲಾಗುತ್ತದೆ. ಒಂದು ವೇಳೆ ಗೊರಕೆಯನ್ನು ಅವಮಾನ ಮಾಡಿದರೆ ಲಕ್ಷ್ಮೀದೇವಿಗೆ ಅವಮಾನ ಮಾಡಿದಂತಾಗುತ್ತದೆ. 2 ಯಾವುದೇ ಮಹಿಳೆ ಯಾಗಲಿ ಎಂಜಲು ಆಗಿರುವ ಪಾತ್ರವನ್ನು ಬಿಸಿಮಾಡಲು ಬಿಟ್ಟು ಮಲಗುತ್ತಾರೆ ಆ ಮನೆಯಲ್ಲಿ ಖಂಡಿತವಾಗಿಯೂ ಬಡತನ ಎನ್ನುವುದು ಎದ್ದು ಕಾಣುತ್ತದೆ. 3 ಯಾವ ಮಹಿಳೆಯರು ಬಾಗಿಲನ್ನು ತಮ್ಮ ಕಾಲಿನಿಂದ ತೆಗೆಯುತ್ತಾರೋ ಅಲ್ಲಿಗೆ ಲಕ್ಷ್ಮೀದೇವಿಯ ಆಗಮನ ಆಗುವುದಿಲ್ಲ. ಬದಲಾಗಿ ಆ ಮನೆಯಲ್ಲಿ ಬಡತನದ ಲಕ್ಷಣಗಳು ಪ್ರಾರಂಭವಾಗಲು ಶುರುವಾಗುತ್ತದೆ.

4 ಇನ್ನು ಯಾವುದೇ ಸಂದರ್ಭದಲ್ಲೂ ಕೂಡ ಹೆಂಗಸರು ಮನೆಯ ಹೊಸ್ತಿಲಿನ ಮೇಲೆ ಕೂತು ಊಟ ಮಾಡಿದರೆ ಖಂಡಿತವಾಗಿಯೂ ಆ ಮನೆಯಲ್ಲಿ ಲಕ್ಷ್ಮೀದೇವಿ ವಾಸ ಮಾಡಲು ಸಾಧ್ಯವೇ ಇಲ್ಲ ಬದಲಾಗಿ ಆ ಮನೆಯಲ್ಲಿ ದರಿದ್ರದ ಛಾಯೆ ಮೂಡಲು ಪ್ರಾರಂಭವಾಗುತ್ತದೆ. ಹೊಸ್ತಿಲಿನಲ್ಲಿ ಕೂತು ಊಟ ಮಾಡುವುದು ಲಕ್ಷ್ಮೀದೇವಿಗೆ ಮನೆಯವರೆಗೆ ಬರುವುದಕ್ಕೆ ದಾರಿಯನ್ನು ಅಡ್ಡ ಕಟ್ಟಿದಂತಾಗುತ್ತದೆ. 5 ಇನ್ನು ಮನೆಯ ಮಹಿಳೆಯರು ಅಡುಗೆ ಮನೆಯಲ್ಲಿ ಎಂಜಲಾದ ಬಟ್ಟಲನ್ನು ಹಾಗೆ ಇಟ್ಟು ಮಲಗಿದರೆ ಖಂಡಿತವಾಗಿಯೂ ಕೆಟ್ಟ ದಿನಗಳು ಪ್ರಾರಂಭವಾಗುವುದರ ಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿ ಪ್ರತಿದಿನ ಬಟ್ಟಲನ್ನು ತೊಳೆದು ಮಲಗಿಕೊಳ್ಳಿ.

6 ಇನ್ನು ಮನೆಯಲ್ಲಿ ಶಾಂತಿ ನೆಲೆಸಲು ವಾರಕ್ಕೆ ಒಮ್ಮೆಯಾದರೂ ಉಪ್ಪಿಯಿಂದ ನೆಲ ವರೆಸಲು ಅಭ್ಯಾಸ ಮಾಡಿಕೊಳ್ಳಿ. 7 ಮನೆಯ ಮಹಾಲಕ್ಷ್ಮಿ ರೂಪ ವಾದಂತಹ ಹೆಣ್ಣುಮಗಳು ಬೆಳಿಗ್ಗೆ ಕಸ ಗುಡಿಸುವ ಬದಲು ಸಂಜೆ ಹೊತ್ತಿನಲ್ಲಿ ಕಸ ಗುಡಿಸಿದರೆ ಮನೆಯಲ್ಲಿದ್ದ ಸಕಾರಾತ್ಮಕ ಶಕ್ತಿಗಳು ಹೊರಹೋಗುತ್ತದೆ. 8 ಎಲ್ಲದಕ್ಕಿಂತ ಮುಖ್ಯವಾಗಿ ಈ ಮನೆಯ ಹೆಣ್ಣುಮಗಳು ಎಲ್ಲರಿಗಿಂತ ಮೊದಲೇ ಪ್ರಾತಃಕಾಲದಲ್ಲಿ ಎದ್ದೇಳಬೇಕಾಗುತ್ತದೆ. ಇಲ್ಲವಾದಲ್ಲಿ ಖಂಡಿತವಾಗಿಯೂ ಆ ಮನೆಗೆ ಕೆಟ್ಟ ಸಮಯಗಳು ಪ್ರಾರಂಭವಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.