ನೀವು ಬ್ಯಾಂಕ್ ನಲ್ಲಿ ಹಣ ಇಟ್ಟಿದ್ದೀರಾ?? ಆಗಿದ್ದರೆ ಕೂಡ ಈ ಚಿಕ್ಕ ಕೆಲಸ ಮಾಡಿ, ಇಲ್ಲವಾದಲ್ಲಿ ಖಂಡಿತಾ ತೊಂದರೆ ಕಟ್ಟಿಟ್ಟ ಬುತ್ತಿ.

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸರ್ಕಾರದ ಅಧೀನದಲ್ಲಿರುವ ಬ್ಯಾಂಕಿಂಗ್ ದೈತ್ಯ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗಷ್ಟೇ ಎರಡು ಗೋಷಣೆ ಗಳನ್ನು ಜಾರಿಗೆ ಮಾಡಿದೆ. ಒಂದು ಪ್ಯಾನ್ ಹಾಗೂ ಆಧಾರ ಕಾರ್ಡ್ ಕುರಿತಂತೆ ಹಾಗೂ ಇನ್ನೊಂದು ಡಿಜಿಟಲ್ ವಹಿವಾಟು ಕುರಿತಂತೆ. ತಡೆರಹಿತ ಬ್ಯಾಂಕಿಂಗ್ ಸೇವೆಗಳನ್ನು ಅನುಭವಿಸಲು ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ಯಾನ್ ಕಾರ್ಡ್ ಅನ್ನು ಖಾತೆಯೊಂದಿಗೆ ಲಿಂಕ್ ಮಾಡುವುದಕ್ಕೆ ಈಗಾಗಲೇ ಅಧಿಸೂಚನೆಯನ್ನು ನೀಡಿದೆ.

ಕೇವಲ ಪಾನ್ ಕಾರ್ಡ್ ಮಾತ್ರವಲ್ಲದೆ ಆಧಾರ್ ಕಾರ್ಡನ್ನು ಕೂಡ ಲಿಂಕ್ ಮಾಡಲು ಸೂಚಿಸಲಾಗಿದೆ. ಒಂದು ವೇಳೆ ನಿಯಮಿತ ಸಮಯದಲ್ಲಿ ಲಿಂಕ್ ಮಾಡದಿದ್ದರೆ ತಾತ್ಕಾಲಿಕವಾಗಿ ಖಾತೆಯನ್ನು ಬಂದ್ ಮಾಡಲಾಗುವುದು ಎನ್ನುವುದಾಗಿ ಬ್ಯಾಂಕ್ ಈಗಾಗಲೇ ಸೂಚಿಸಿದೆ. ಇನ್ನು ಪ್ಯಾನ್ ಆಧಾರಿತ ಏಕೀಕರಣದ ಗಡುವನ್ನು ಸರ್ಕಾರ 2022 ರ ಮಾರ್ಚ್ 31ರವರೆಗೆ ಕೂಡ ವಿಸ್ತರಿಸಿತ್ತು. ಡಿಮ್ಯಾಟ್ ಖಾತೆ ಹಾಗೂ ಠೇವಣಿ ಖಾತೆ ಇನ್ನಿತರ ಖಾತೆಗಳನ್ನು ಮಾಡಲು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡನ್ನು ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ ಮೂಲಕ ಜೋಡಿಸಬಹುದಾಗಿದೆ.

ಇನ್ನೊಂದು ಘೋಷಣೆಯಾಗಿ ಡಿಜಿಟಲ್ ವಹಿವಾಟಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂಬುದಾಗಿ ಹೇಳಿದೆ. ಸದ್ಯದಲ್ಲಿಯೇ ಆದಾಯ ತೆರಿಗೆಯನ್ನು ಸಲ್ಲಿಸುವ ಗಡುವು ಸಮೀಪ ವಾಗಿರುವುದರಿಂದ ಆಗಿ ನಿಮ್ಮ ಖಾತೆಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಸಂಪರ್ಕ ಹೊಂದಿರುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹಾಗೂ ಹೊಸ ಪ್ಯಾನ್ ಪಡೆಯಲು ಹೊಸ ಆಧಾರ್ ಅನ್ನು ಕಡ್ಡಾಯಗೊಳಿಸಿದ ಸಂಸ್ಥೆ. ತೆರಿಗೆ ಕಾಯ್ದೆ 139 ಎಎ2 ರ ಪ್ರಕಾರ ಪ್ಯಾನ್ ಕಾರ್ಡ್ ಹೊಂದಿರುವ ಹಾಗೂ ಆಧಾರ್ ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅಧಿಕಾರಿಗಳಿಗೆ ತನ್ನ ಆಧಾರ್ ಕಾರ್ಡ್ ಸಂಖ್ಯೆಯನ್ನು ತಿಳಿಸಬೇಕಾಗಿದೆ.

Get real time updates directly on you device, subscribe now.