ಒಂದು ಕಡೆ ನ್ಯೂಜಿಲೆಂಡ್ ಪಂದ್ಯ ಆರಂಭವಾದ ಬೆನ್ನಲ್ಲೇ ಭಾರತ ತಂಡಕ್ಕೆ ಕಹಿ ಸುದ್ದಿ, ರಾಹುಲ್ ಅಭಿಮಾನಿಗಳಿಗಂತೂ ಫುಲ್ ನಿರಾಸೆ. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದದ ಟಿ 20 ಸರಣಿಯನ್ನು 3-0 ಅಂತರದಿಂದ ಗೆದ್ದಿದೆ. ಈಗ ಇಂದಿನಿಂದ ಭಾರತ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ದ ಮೊದಲ ಟೆಸ್ಟ್ ಆಡಲಿದೆ. ಮೊದಲ ಟೇಸ್ಟ್ ನಾಯಕತ್ವವನ್ನು ಅಜಿಂಕ್ಯಾ ರಹಾನೆ ವಹಿಸುತ್ತಿದ್ದರೇ, ಏರಡನೇ ಟೆಸ್ಟ್ ನಾಯಕತ್ವಕ್ಕೆ ವಿರಾಟ್ ಮರಳಿ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಇನ್ನು ಭಾರತ ತಂಡದ ಅನುಭವಿ ಆಟಗಾರರಾಗಿದ್ದ ರೋಹಿತ್ ಶರ್ಮಾ, ಜಸಪ್ರಿತ್ ಬುಮ್ರಾ, ಮಹಮದ್ ಶಮಿ, ರಿಷಭ್ ಪಂತ್ ಗೆ ವಿಶ್ರಾಂತಿ ನೀಡಿದೆ.

ಇನ್ನು ಮೊದಲನೇ ಟೆಸ್ಟ್ ಗೆ ಅಭ್ಯಾಸ ನಡೆಸುತ್ತಿದ್ದ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಇನ್ ಫಾರ್ಮ್ ಹಾಗೂ ಆರಂಭಿಕ ಬ್ಯಾಟ್ಸಮನ್ ಆಗಿದ್ದ ಕೆ.ಎಲ್.ರಾಹುಲ್ ಗಾಯಗೊಂಡು ಸರಣಿಯಿಂದಲೇ ಹೊರ ನಡೆದಿದ್ದಾರೆ. ಹೀಗಾಗಿ ಈಗ ಆರಂಭಿಕರಾಗಿ ಮಯಾಂಕ್ ಅಗರವಾಲ್ ಹಾಗೂ ಶುಭಮಾನ್ ಗಿಲ್ ಕಣಕ್ಕೆ ಇಳಿದಿದ್ದಾರೆ. ಕೆ.ಎಲ್.ರಾಹುಲ್ ಬದಲು ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಸೂರ್ಯ ಕುಮಾರ್ ಯಾದವ್ ತಂಡವನ್ನು ಸೇರಿಕೊಂಡಿದ್ದಾರೆ, ಆದರೆ ಮೊದಲ ಪಂದ್ಯದಲ್ಲಿ ಅವಕಾಶ ನೀಡಿಲ್ಲ ಬದಲಾಗಿ ಶ್ರೇಯಸ್ ಅಯ್ಯರ್ ಪಾದಾರ್ಪಣೆ ಮಾಡಿದ್ದಾರೆ.

ಹೀಗಿರುವಾಗ ಮೊದಲ ಪಂದ್ಯದಿಂದ ಕೆಲ್ ರಾಹುಲ್ ರವರು ಹೊರಗುಳಿದಿದ್ದಾರೆ ಎಂದು ಮೊದಲಿಗೆ ಸುದ್ದಿ ಕೇಳಿ ಬಂದಿತ್ತು. ನಂತರ ಇಡೀ ಸರಣಿಯಿಂದ ರಾಹುಲ್ ರವರು ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿತ್ತು. ಆದರೆ ಬಿಸಿಸಿಐ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ, ಕೇವಲ ಟೆಸ್ಟ್ ಸರಣಿಯಲ್ಲ ರಾಹುಲ್ ರವರ ಇಂಜುರಿ ಸಮಸ್ಯೆ ನೋಡಿದರೇ ಕಂಡಿತಾ ಅವರು ಕೆಲವು ತಿಂಗಳುಗಳ ಕಾಲ ತಂಡದಿಂದ ಹೊರಗುಳಿಯ ಬೇಕಾಗುತ್ತದೆ ಎಂಬುದು ತಿಳಿದು ಬಂದಿದೆ. ಜೀವನ ಶ್ರೇಷ್ಠ ಫಾರ್ಮ್ ನಲ್ಲಿ ಇದ್ದ ರಾಹುಲ್ ರವರಿಗೆ ಇದೀಗ ಇಂಜುರಿ ಸಮಸ್ಯೆ ಬಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.