ಮನೆ ಚಿಕ್ಕದಾಗಿದೆ ಅಂತ ಚಿಂತೆ ಬೇಡ, ಹೀಗೆ ಮಾಡಿದ್ರೆ ಮನೆಯಲ್ಲಿ ಜಾಗ ಉಳಿಯುವಂತೆ ಮಾಡಬಹುದು. ಹೇಗೆ ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಬಾಡಿಗೆ ಮನೆ ಅಂತ ಆದ್ರೆ ಮನೆ ನಮಗೆ ಬೇಕಾದ ಹಾಗೆ ಇರುವುದಿಲ್ಲ, ಅದರಲ್ಲೂ 1BHK ಆದ್ರೆ (ಒಂದು ಕೋಣೆ, ಹಾಲ್ ಮತ್ತು ಕಿಚನ್) ಮನೆಯಲ್ಲಿ ವಸ್ತುಗಳನ್ನು ಇಟ್ಟುಕೊಳ್ಳುವುದೇ ಕಷ್ಟ. ಇನ್ನು ನೆಂಟರು ಬಂದರಂತೂ ಮುಗೀತು ಮಲಗೋದಕ್ಕೇ ಜಾಗವಿರಲ್ಲ, ಹಾಗಾಗಿ ಯಾರನ್ನಾದರೂ ಮನೆಗೆ ಕರೆಯಲೂ ಕೂಡ ಹಿಂದೆ ಮುಂದೆ ಯೋಚನೆ ಮಾಡ್ತೇವೆ. ಹಾಗಾದ್ರೆ ಈ ಸಮಸ್ಯೆಯಿಂದ ಹೊರಬರೋದು ಹೇಗೆ? ಇಲ್ಲಿದೆ ಸಿಂಪಲ್ ಉಪಾಯಗಳು!

ಮೊದಲನೆಯದಾಗಿ ನೀವು ಆಯ್ದುಕೊಳ್ಳುವ ಪೀಠೋಪಕರಣಗಳು. ಬೇಕಾದಾಗ ಬಳಸಿ ಬೇಡವಾದಾಗ ಮಡಚಿ ಇಡಬಹುದಾದಂಥ ಪೀಠೋಪಕರಣಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಜಾಗ ಉಳಿತಾಯವಾಗುತ್ತದೆ. ಇನ್ನು ಒಂದು ಬಿಹೆಚ್ ಕೆ ಮನೆಯಲ್ಲಿ ಇದ್ದರೆ ಸಮಸ್ಯೆ ಇಲ್ಲ, ಆದರೆ ಮನೆಯಲ್ಲಿ ಸಾಕಷ್ಟು ಸ್ಟೋರೇಜ್ ಜಾಗ ಇರುವಂಥದ್ದನ್ನು ಆಯ್ಕೆ ಮಾಡಿ, ಅಂದರೆ ಹಾಲ್, ಅಡುಗೆ ಮನೆ ಎಲ್ಲದರ ಮೇಲ್ಗಡೆ ವಸ್ತುಗಳನ್ನಿಡಲು ಎಂದೇ ಮಾಡಿರುವ ಸ್ಥಳ ಅಧಿಕವಾಗಿದ್ರೆ ವಸ್ತುಗಳು ಚಲ್ಲಾಪಿಲ್ಲಿಯಾಗದಂತೆ ಮೇಲ್ಗಡೆ ಇಟ್ಟುಬಿಡಬಹುದು.

ಮನೆಯ ಬಣ್ನವೂ ಕೂಡ ಮನೆ ದೊಡದಾಗಿ ಕಾಣುವಂತೆ ಮಾಡುತ್ತದೆ. ಹೌದು, ಬಿಳಿ, ಕ್ರೀಮ್ ನಂಥ ಲೈಟ್ ಬಣ್ಣಗಳು ಮನೆ ದೊಡ್ಡದಾಗಿರುವ ಅನುಭವವನ್ನು ಕೊಡುತ್ತವೆ. ಇನ್ನು ಅಡುಗೆ ಮನೆಯಲ್ಲಿಯೂ ಕುಡ ಒಂದರ ಮೇಲೆ ಒಂದು ಇಡುವಂಥ ಪಾತ್ರೆಗಳು, ಡಬ್ಬಗಳನ್ನು ಬಳಸಿ. ಸುಲಭವಾಗಿ ಒಯ್ಯಬಹುದಾದ ಕಪಾಟುಗಳನ್ನು ಮನೆಯಲ್ಲಿ ವಸ್ತುಗಳನ್ನಿಡಲು ಬಳಸಬಹುದು. ಪೇಟೆಯಲ್ಲಿ ಇರುವವರಿಗೆ ಈ ಟಿಪ್ಸ್ ಗಳು ಖಂಡಿತ ಉಪಯೋಗವಾಗುತ್ತವೆ. ಹೆಚ್ಚು ಅನಗತ್ಯ ವಸ್ತುಗಳನ್ನು ಮನೆಯಲ್ಲಿ ತುಂಬಿಸದೇ ಮನೆ ಸುಂದರವಾಗಿ ಕಾಣಲು ಗೋಡೆಯನ್ನು ಅಲಂಕರಿಸಿ. ಇದರಿಂದ ಮನೆ ಸುಂದರವಾಗಿಯೂ ದೊಡ್ದದಾಗಿಯೂ ಕಾಣುತ್ತದೆ.

Get real time updates directly on you device, subscribe now.