ತಾನು ಕೊನೆಯುಸಿರೆಳೆಯುವ ಸಮಯದಲ್ಲಿಯೂ ಹೆಂಡತಿಯ ಆಸೆಯನ್ನು ಪೂರೈಸಿದ ಗಂಡ, ಅಷ್ಟಕ್ಕೂ ನಡೆದದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯಾದ ಹೆಣ್ಣು ಮಕ್ಕಳಿಗೆ ಗಂಡನ ಮನೆಯೇ ಎಲ್ಲಾ ಆಗಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಒಂದು ಮಾತಿದೆ ಸ್ನೇಹಿತರೇ ಅದು ಏನೆಂದರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬಂತೆ ಮದುವೆಯಾದಮೇಲೆ ಅವಳಿಗೆ ತವರುಮನೆಯಲ್ಲಿ ಏನೂ ಇರುವುದಿಲ್ಲ ಬದಲಾಗಿ ಗಂಡನಮನೆ ಅವಳಿಗೆ ಸರ್ವಸ್ವ ವಾಗಿರುತ್ತದೆ.

ಗಂಡ-ಹೆಂಡತಿ ಪರಸ್ಪರ ನಾವು ಏಳೇಳು ಜನ್ಮಕ್ಕೂ ಕೂಡ ಜೋಡಿಗಳ ಎಂಬುದಾಗಿ ಮದುವೆಯಲ್ಲಿ ಶಪಥ ಮಾಡಿರುತ್ತಾರೆ. ಹೀಗಾಗಿಯೇ ಹೆಂಡತಿ ಏನೇ ವಿಚಾರವಿದ್ದರೂ ಕೂಡ ತನ್ನ ಗಂಡನೊಂದಿಗೆ ಹಂಚಿಕೊಳ್ಳುತ್ತಾಳೆ. ಇನ್ನು ಇಂದು ನಾವು ಹೇಳಹೊರಟಿರುವ ನೈಜ ಘಟನೆ ಕೇಳಿದರೆ ಖಂಡಿತವಾಗಿಯೂ ನೀವು ಭಾವುಕರಾಗುವುದು ಖಂಡಿತ. ಹೌದು ಸ್ನೇಹಿತರೆ ಇದು ನಡೆದಿರುವುದು ಗುಜರಾತಿನಲ್ಲಿ. ಒಬ್ಬ ಹುಡುಗಿ 2020ರಲ್ಲಿ ಒಬ್ಬ ಹುಡುಗನನ್ನು ಮದುವೆಯಾಗಿ ಕೆನಡಾಗೆ ಹೋಗಿ ನೆಲೆಸುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಅವಳ ಅತ್ತೆ-ಮಾವನಿಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಗಂಡ-ಹೆಂಡತಿ ಇಬ್ಬರೂ ಕೂಡ ಗುಜರಾತಿಗೆ ತಮ್ಮ ಊರಿಗೆ ವಾಪಸ್ ಸಾಗುತ್ತಾರೆ.

ಇದೇ ಸಂದರ್ಭದಲ್ಲಿ ಅವಳ ಗಂಡನಿಗೆ ಈ ಮಹಾಮಾರಿ ತಗಲುತ್ತದೆ. ಇದರಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಬರೋಬ್ಬರಿ ಎರಡು ತಿಂಗಳುಗಳ ಕಾಲ ವೆಂಟಿಲೇಟರ್ ನಲ್ಲಿ ಇಡಲಾಗುತ್ತದೆ ಹಾಗೂ ತೀವ್ರವಾಗಿ ಚಿಕಿತ್ಸೆ ನಡೆಸಲಾಗುತ್ತದೆ. ಆದರೂ ಕೂಡ ವೈದ್ಯರು ಆತನನ್ನು ಉಳಿಸಿಕೊಳ್ಳುವ ಕುರಿತಂತೆ 100% ವಿಶ್ವಾಸವನ್ನು ಹೊಂದಿರುವುದಿಲ್ಲ. ತನ್ನ ಪತಿಯ ಬಳಿ ಹೆಚ್ಚು ಸಮಯ ಇಲ್ಲ ಎಂಬುದಾಗಿ ತಿಳಿದಂತಹ ಹೆಂಡತಿ ಸಂಪೂರ್ಣವಾಗಿ ಧರಾಶಾಯಿ ಆಗುತ್ತಾಳೆ ಇದಾದ ಕೂಡಲೇ ಆಕೆ ಹೈಕೋರ್ಟ್ಗೆ ಮೊರೆ ಹೋಗುತ್ತಾಳೆ.

ಇದರ ಹಿಂದಿನ ಕಾರಣ ಆಕೆ ತನ್ನ ಗಂಡನ ಸ್ಪರ್ಮ್ ಬೇಕೆಂದು ಬಯಸುತ್ತಾರೆ ಅದರಿಂದಾಗಿ ಗಂಡನ ಮಗುವಿಗೆ ತಾಯಿಯಾಗಲು ಆಕೆ ಪ್ರಯತ್ನ ಪಡುತ್ತಿರುತ್ತಾಳೆ ಆದರೆ ಅದಕ್ಕೆ ವೈದ್ಯರು ಅಡ್ಡಿಪಡಿಸುತ್ತಾರೆ. ಆದರೆ ಆ ಮಹಿಳೆಗೆ ಮದುವೆಯಾದ ನಾಲ್ಕು ತಿಂಗಳಿಗೆ ಗಂಡನಿಗೆ ಹೀಗಾಗುತ್ತದೆ ಎಂಬುದನ್ನು ಕನಸಿನಲ್ಲಿಯೂ ಕೂಡ ಭಾವಿಸಿ ಕೊಂಡಿರಲಿಲ್ಲ.

ಹೀಗಾಗಿ ಕೊನೆಯ ಗಳಿಗೆಯಲ್ಲಿ ಆಕೆ ತನ್ನ ಗಂಡನ ಮಗುವಿಗೆ ತಾಯಿ ಆಗುವ ಮೂಲಕ ತನ್ನ ಗಂಡನನ್ನು ಜೀವಮಾನದ ಕೊನೆಯ ವರೆಗೂ ಕೂಡ ತನ್ನ ಮಗುವಿನ ರೂಪದಲ್ಲಿ ನೋಡಬಹುದು ಎಂಬುದಾಗಿ ಆಕೆಯ ಆಸೆಯಾಗಿತ್ತು ಇದಕ್ಕಾಗಿ ಆಕೆ ಕೋರ್ಟಿನ ಮೊರೆ ಹೋಗಿದ್ದಳು. ಎಲ್ಲಾ ವಿಷಯಗಳನ್ನು ಬದಿಗಿರಿಸಿ ಈ ಮಹಿಳೆಯ ವಿಷಯವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಹಾಗೂ ಆಕೆಗೆ ಇದರ ಕುರಿತಂತೆ ಅನುಮತಿಯನ್ನು ಕೂಡ ನೀಡುತ್ತದೆ. ಗಂಡ ಕೊನೆಯುಸಿರೆಳೆಯುವ ಮುನ್ನ ಹೆಂಡತಿಯ ಈ ಆಸೆಯನ್ನು ಪೂರೈಸಿ ಇಹಲೋಕವನ್ನು ತ್ಯಜಿಸುತ್ತಾನೆ. ಮಹಾಮಾರಿಯ ಪರಿವೆಯೂ ಇಲ್ಲದೆ ಗಂಡನ ಸ್ಪರ್ಮ್ ಅನ್ನು ಪಡೆದುಕೊಂಡು ತಾಯಿಯಾಗಲು ಹೊರಟಿದ್ದ ಈ ಮಹಿಳೆಯ ಕಥೆಯನ್ನು ಕೇಳಿ ಎಲ್ಲರೂ ಕೂಡ ಭಾವುಕರಾಗಿದ್ದಾರೆ‌. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.