ಗೆದ್ದದ್ದು ಮೂರೇ ಪಂದ್ಯವಾದರೂ, ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ ಗೆದ್ದ ಹಣ ಎಷ್ಟು ಕೋತಿ ಗೊತ್ತೇ?? ಇದಕ್ಕೆ ಮಾತ್ರ ಲಾಯಕ್ಕು ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಪಂದ್ಯಾವಳಿಗೂ ಮುನ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಕರೆಸಿಕೊಂಡಿದ್ದ ಭಾರತ, ಅಭ್ಯಾಸ ಪಂದ್ಯಗಳಲ್ಲಿ ಬಲಿಷ್ಠ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಮಣಿಸಿ ಅಭಿಮಾನಿಗಳಲ್ಲಿ ತನ್ನದೇ ಆದ ನೀರಿಕ್ಷೆ ಸಹ ಹುಟ್ಟಿಸಿತ್ತು. ಆದರೇ ಆರಂಭಿಕ ಎರಡು ಪಂದ್ಯಗಳಲ್ಲಿ ತನ್ನ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ದ ಹತ್ತು ವಿಕೇಟ್ ಗಳ ಸೋಲು ಹಾಗೂ ಐಸಿಸಿ ಟೂರ್ನಿಗಳಲ್ಲಿ ಪದೇ ಪದೇ ಕಾಡುವ ನ್ಯೂಜಿಲೆಂಡ್ ತಂಡದ ವಿರುದ್ದ ಎಂಟು ವಿಕೇಟ್ ಗಳ ಸೋಲನ್ನ ಅನುಭವಿಸಿತು.

ಹಾಗಾಗಿ ಭಾರತ ತಂಡ ಐಸಿಸಿ ಪಂದ್ಯಾವಳಿಯಲ್ಲಿ ಬಹುತೇಖ ಹೊರಬಿದ್ದಂತೆ ಆಯಿತು. ಈ ಮೂಲಕ ಕೋಟ್ಯಾಂತರ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಇನ್ನು ಪುಟಿದೆದ್ದ ಭಾರತ ತಂಡ ಅಫಘಾನಿಸ್ತಾನ, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳ ವಿರುದ್ದ ಭರ್ಜರಿ ಜಯಗಳಿಸಿದರೂ, ಉಪಾಂತ್ಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಈ ಪಂದ್ಯಾವಳಿಯಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಐಸಿಸಿ ಬರೋಬ್ಬರಿ 12 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತವನ್ನು ನೀಡಿದೆ. ಇನ್ನು ರನ್ನರ್ ಅಪ್ ಆಗಿರುವ ನ್ಯೂಜಿಲೆಂಡ್ ತಂಡಕ್ಕೆ 6 ಕೋಟಿ ರೂಪಾಯಿ ದೊರೆತಿದೆ.

ಇನ್ನು ಸೂಪರ್ 12 ಆಡಿರುವ ಪ್ರತಿ ತಂಡಗಳಿಗೂ 54 ಲಕ್ಷ ರೂಪಾಯಿ ಸಂಭಾವನೆ ನಿಗದಿಪಡಿಸಲಾಗಿತ್ತು. ಹಾಗೂ ಪ್ರತಿ ಪಂದ್ಯ ಗೆದ್ದರೇ ಅದಕ್ಕೆ 29.19 ಲಕ್ಷ ರೂಪಾಯಿ ನೀಡುತ್ತಿತ್ತು. ಭಾರತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ 89 ಲಕ್ಷ ಹಾಗೂ ಮೂಲ ಸಂಭಾವನೆ 52 ಲಕ್ಷ ಎರಡನ್ನು ಸೇರಿಸಿದರೇ, ಸುಮಾರು ಒಂದು ಕೋಟಿ 41 ಲಕ್ಷ ರೂಪಾಯಿಯನ್ನು ಈ ಟೂರ್ನಿಯಲ್ಲಿ ಪಡೆದಿದೆ. ಹಣ ಎಷ್ಟೇಗಳಿಸಿದರೂ, ಟ್ರೋಫಿ ಗೆಲ್ಲಲಾಗಲಿಲ್ಲ ಎಂಬ ನೋವು ಅಭಿಮಾನಿಗಳಿಗೆ ಸದಾ ಕಾಡುತ್ತಿರುತ್ತದೆ, ಅದೇ ಕಾರಣಕ್ಕಾಗಿ ನೆಟ್ಟಿಗರು ಬಾರಿ ಟ್ರೊಲ್ ಮಾಡುತ್ತಿದ್ದಾರೆ. ಕೋಟಿ ಕೋಟಿ ಕೊಟ್ಟು ಆಡಿಸುತ್ತೀರಾ ಆದರೂ ಕೂಡ ಸರಿಯಾಗಿ ಆಡುವುದಿಲ್ಲ, ಒಮ್ಮೆ ಸರಿ ಕೆಲವರು ದುರ್ಬಲ ತಂಗಗಳ ವಿರುದ್ಧ ಕೂಡ ಫಾರ್ಮ್ ಕಂಡು ಕೊಂಡಿಲ್ಲ, ಮತ್ತೆ ಇವರಿಗೆ ಕೋಟಿ ಬೇರೆ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.