ಸಿ.ಎಸ್.ಕೆ ತಂಡದಿಂದ ಕೊನೆಗೂ ಧೋನಿ ಔಟ್ ಫಿಕ್ಸ್, ಚೆನ್ನೈ ತಂಡದ ನೂತನ ನಾಯಕ ಯಾರು ಗೊತ್ತೇ?? ಬಾರಿ ಟ್ವಿಸ್ಟ್ ನಲ್ಲಿ ನಾಯನ ಆಯ್ಕೆ.

ನಮಸ್ಕಾರ ಸ್ನೇಹಿತರೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಶುರುವಾದಗಿಂದಲೂ ಹೆಚ್ಚು ಡಾಮಿನೇಟ್ ಮಾಡುತ್ತಿರುವ ತಂಡ. 2008 ರಲ್ಲಿ ಆ ತಂಡಕ್ಕೆ ಸೇರಿ ನಾಯಕರಾಗಿದ್ದ ಧೋನಿ, ಆ ತಂಡವನ್ನ ಪ್ರಶಸ್ತಿ ಸುತ್ತಿಗೆ ಹಲವಾರು ಭಾರಿ ಏರಿಸಿದ್ದಾರೆ. ಭರ್ತಿ ಹನ್ನೆರೆಡು ವರ್ಷಗಳ ಕಾಲ ಆ ತಂಡಕ್ಕೆ ನಾಯಕರಾಗಿದ್ದರು. ಮಧ್ಯ ಎರಡು ಆ ವರ್ಷ ಆ ತಂಡ ಬ್ಯಾನ್ ಆಗಿತ್ತು. ಆದರೇ ಧೋನಿಗೂ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಒಂದು ರೀತಿಯ ಅವಿನಾಭಾವ ಸಂಭಂದ ಇದೆ. ಜೊತೆಗೆ ಈ ಭಾರಿಯ ಚಾಂಪಿಯನ್ ಸಹ ಆಗಿದೆ. ಹಾಗಾಗಿ 40 ರ ಹರೆಯದ ಧೋನಿ, ಇನ್ಮುಂದೆ ಚೆನ್ನೈ ತಂಡದ ನಾಯಕರಾಗಿರುವುದಿಲ್ಲ. ಬದಲಿಗೆ ಆ ತಂಡದ ಕೋಚ್ ಹುದ್ದೆ ಅಥವಾ ಮೆಂಟರ್ ಆಗಿ ಕಾರ್ಯನಿರ್ವಹಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸ್ವತಃ ಸ್ಪಷ್ಟಪಡಿಸಿರುವ ಧೋನಿ, ಈ ಭಾರಿ ನಮ್ಮನ್ನು ರಿಟೇನ್ ಮಾಡಬೇಡಿ, ನಾನು ಹರಾಜಿನಲ್ಲಿಯೂ ಸಹ ಭಾಗವಹೀಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಧೋನಿ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಈಗ ಎದುರಾಗಿದೆ. ಧೋನಿ ಒಂದು ವೇಳೆ ಐಪಿಎಲ್ ಆಡದಿದ್ದರೇ, ಅವರ ಪರಮಾಪ್ತ ಸುರೇಶ್ ರೈನಾ ಸಹ ಹೊರಗುಳಿಯುತ್ತಾರೆ. ಹಾಗಾಗಿ ನೂತನ ನಾಯಕನ ಹುಡುಕಾಟದಲ್ಲಿ ಸಿಎಸ್ಕೆ ತಂಡದ ಮ್ಯಾನೇಜ್ ಮೆಂಟ್.

ತಂಡದ ಹಿರಿಯ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ರವರನ್ನ ನಾಯಕ ಸ್ಥಾನಕ್ಕೆ ಪರಿಗಣಿಸುತ್ತದೆ. ಅದಲ್ಲದೇ ವಿದೇಶಿ ಕೋಟಾದಲ್ಲಿ ಈ ಭಾರಿ ಹರಾಜಿಗೆ ಲಭ್ಯವಾಗುವ ಡೇವಿಡ್ ವಾರ್ನರ್ ರವರನ್ನು ಖರೀದಿಸಿ ಅವರಿಗೆ ನಾಯಕ ಪಟ್ಟವನ್ನ ನೀಡಲು ಸಹ ಚಿಂತಿಸುತ್ತದೆ. ಆದರೇ ಚೆನ್ನೈ ತಂಡ ಹಾಗೂ ಮ್ಯಾನೇಜ್ ಮೆಂಟ್ ಜೊತೆ ಬಹುವರ್ಷಗಳ ಒಡನಾಟ ಇರುವ ರವೀಂದ್ರ ಜಡೇಜಾ ನಾಯಕರಾಗುವ ಸಾಧ್ಯತೆ ದಟ್ಟವಾಗಿದೆ.

ಚೆನ್ನೈ ತಂಡದ ಪರ ಕೆಳ ಕ್ರಮಾಂಕದ ಬ್ಯಾಟ್ಸಮನ್ ಹಾಗೂ ಪ್ರಮುಖ ಸ್ಪಿನ್ ಬೌಲರ್ ಆಗಿರುವ ಜಡೇಜಾ, ಶುರುವಾತಿನಿಂದ ಚೆನ್ನೈ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ಮೇಲೆ ಒಲವು ಹೆಚ್ಚಿದೆ. ಆದರೇ ಭವಿಷ್ಯದ ದೃಷ್ಠಿಯಿಂದ ಯುವ ಬ್ಯಾಟ್ಸಮನ್ ಋತುರಾಜ್ ಗಾಯಕ್ವಾಡ್ ಮೇಲೆ ಈಗಲೇ ದೊಡ್ಡ ಮಟ್ಟದ ಒತ್ತಡವನ್ನು ಹೇರುವುದು ಸರಿಯಲ್ಲ ಎಂಬ ವಿಶ್ಲೇಷಣೆ ಸಹ ಇದೆ. ಹಾಗಾಗಿ ಧೋನಿ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಆಡುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.