ಧೋನಿ ಎಷ್ಟೇ ಹೇಳಿದರೂ ಕೇಳದ ವಿರಾಟ್ ಹಾಗೂ ರವಿಶಾಸ್ತ್ರಿ, ಅದೇ ಸೋಲಿಗೆ ಕಾರಣವಾಯಿತೆ. ತಂಡದಲ್ಲಿ ಬಿಸಿ ಬಿಸಿ ಫೈಟ್. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟೀಮ್ ಇಂಡಿಯಾ ಭಾರಿ ಖಂಡಿತ ಟಿ 20 ವಿಶ್ವಕಪ್ ಗೆಲ್ಲಲಿದೆ ಎಂದು ಹಲವಾರು ಜನ ಭವಿಷ್ಯ ನುಡಿದಿದ್ದರು. ಅದಕ್ಕೆ ಮುಖ್ಯ ಕಾರಣ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಭಾರತ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಒಪ್ಪಿದ್ದು. ಆದರೇ ಅನೀರಿಕ್ಷಿತ ಎಂಬಂತೆ, ಭಾರತ ಮೊದಲ ಭಾರಿಗೆ ವಿಶ್ವಕಪ್ ನ ಎರಡು ಟಿ 20 ಪಂದ್ಯಗಳಲ್ಲಿ ಹೀನಾಯವಾಗಿ ಸೋತಿತು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹಾಗೂ ತಂಡದ ಆಡುವ ಹನ್ನೊಂದು ಸದಸ್ಯರ ಆಯ್ಕೆ ಹೀಗೆ ಎಲ್ಲದರಲ್ಲಿಯೂ ಎಡವಿದ ಟೀಮ್ ಇಂಡಿಯಾ, ಈಗ ಸೆಮೀ ಫೈನಲ್ ಗೆ ಏರುವುದೇ ಕಷ್ಟ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಇದರ ಬಗ್ಗೆ ಈಗ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದ್ದು, ಮೆಂಟರ್ ಧೋನಿಯವರ ಸಲಹೆಯನ್ನ ಕೇಳದೇ ಇದ್ದದ್ದೇ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತಾ ಎಂಬ ಸುದ್ದಿ ಹರಡುತ್ತಿದೆ.

ಪಾಕಿಸ್ತಾನ ವಿರುದ್ದ ಮಹತ್ವದ ಪಂದ್ಯಕ್ಕೆ, ಮಹೇಂದ್ರ ಸಿಂಗ್ ಧೋನಿ ಅನನುಭವಿ ವರುಣ್ ಚಕ್ರವರ್ತಿ ಬದಲು , ಅನುಭವಿ ಆರ್.ಅಶ್ವಿನ್ ರವರನ್ನ ಆಡಿಸಿ ಎಂದು ಸಲಹೆ ನೀಡಿದ್ದರಂತೆ. ಆದರೇ ಧೋನಿ ಸಲಹೆಯನ್ನ ಧಿಕ್ಕರಿಸಿದ ವಿರಾಟ್, ಒತ್ತಾಸೆಯಿಂದ ವರುಣ್ ರನ್ನ ಆಡಿಸಿದ್ದರಂತೆ. ಅದಲ್ಲದೇ ಕೋಚ್ ರವಿಶಾಸ್ತ್ರಿ ಸಹ ಧೋನಿ ಸಲಹೆಯನ್ನ ನಿರಾಕರಿಸಿದ್ದರಂತೆ.

ಇನ್ನು ಬ್ಯಾಟಿಂಗ್ ವೇಳೆಯಲ್ಲಿ ಉತ್ತಮವಾಗಿ ಆಡುತ್ತಿದ್ದ ರಿಷಭ್ ಪಂತ್ ಔಟ್ ಆದ ನಂತರ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಡುವುದು ಪಿಚ್ ಸ್ಥಿತಿಯಲ್ಲಿ ಉತ್ತಮ ಎಂದು, ವಾಟರ್ ಬಾಯ್ ನಿಂದ ಪಂದ್ಯ ನಡೆಯುತ್ತಿದ್ದ ವೇಳೆಯಲ್ಲಿ ಕೊಹ್ಲಿಗೆ ಸಂದೇಶ ಕಳುಹಿಸಿದ್ದರಂತೆ. ಆದರೇ ಧೋನಿಯ ಈ ಸಲಹೆಯನ್ನು ಧಿಕ್ಕರಿಸಿದ್ದ ವಿರಾಟ್, ನಾನು ಮೊದಲು ಔಟಾದರೇ ಹಾರ್ದಿಕ್ ಬರಲಿ, ರಿಷಭ್ ಮೊದಲು ಔಟಾದರೆ, ರವೀಂದ್ರ ಜಡೇಜಾ ಬರಲಿ ಎಂದು ಹೇಳಿದ್ದರಂತೆ. ಅದೇ ರೀತಿ ಮೊದಲು ಬಂದ ಜಡೇಜಾ ರನ್ ಗಳಿಸಲು ಪರದಾಡಿದ್ದರು.

ಇನ್ನು ಬೌಲಿಂಗ್ ನಲ್ಲಿಯೂ ಸಹ ವರುಣ್ ಎಕಾನಮಿಯತ್ತ ಗಮನಹರಿಸಿದರೇ ಹೊರತು ವಿಕೇಟ್ ಕೀಳಲಿಲ್ಲ. ಇದು ಭಾರತ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ವರುಣ್ ಸ್ಥಾನದಲ್ಲಿ ಅಶ್ವಿನ್ ಆಡಿದ್ದರೇ, ಖಂಡಿತವಾಗಿಯೂ ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ವಿಕೇಟ್ ತೆಗೆದು ಪಾಕಿಸ್ತಾನದ ಮೇಲೆ ಟೆನ್ಶನ್ ಹೇರುತ್ತಿದ್ದರು. ಆಗ ಫಲಿತಾಂಶ ಬದಲಾದರೂ ಆಗುತ್ತಿತ್ತು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಧೋನಿ ಮಾತನ್ನ ಕೇಳದೇ ಟೀಮ್ ಇಂಡಿಯಾ ಕೆಟ್ಟಿತೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹೀಗಾಗಿ ಭಾರತ ತಂಡ ಸೆಮಿಫೈನಲ್ ಹಾದಿ, ಬೇರೆ ತಂಡಗಳ ಗೆಲುವು, ಸೋಲಿನ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.