ಧೋನಿ ಎಂಟ್ರಿಯಿಂದ ಡ್ರೆಸ್ಸಿಂಗ್ ರೂಮ್ ನಲ್ಲಿ ಏನಾಗುತ್ತಿದೆ ಗೊತ್ತೇ?? ಒಳಗಡೆ ನಡೆಯುತ್ತಿರುವ ಎಲ್ಲ ಕತೆಯನ್ನು ಎಳೆಯೆಳೆಯಾಗಿ ಬಿಚ್ಚಿಟ್ಟ ಕನ್ನಡಿಗ ರಾಹುಲ್,

ನಮಸ್ಕಾರ ಸ್ನೇಹಿತರೇ ಮಹೇಂದ್ರ ಸಿಂಗ್ ಧೋನಿ ಕ್ರಿಕೇಟಿಗರಿಗೆ ಸ್ಪೂರ್ತಿಯ ಚಿಲುಮೆ. ಸದಾ ಕಾಲ ಆಟಗಾರರಿಗೆ ಹುರಿದುಂಬಿಸುತ್ತಾ ಡ್ರೆಸ್ಸಿಂಗ್ ರೂಮ್ ನಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುತ್ತಿದ್ದರು. ಕಳೆದ ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೊನೆಯದಾಗಿ ಆಟವಾಡಿದ್ದ ಧೋನಿ, ನಂತರದ ದಿನಗಳಲ್ಲಿ ಕ್ರಿಕೇಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಆ ನಂತರ ಕೇವಲ ಐಪಿಎಲ್ ನಲ್ಲಿ ಮಾತ್ರ ಮುಂದುವರೆದ ಧೋನಿ, ಈಗ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಭಾರತ ತಂಡದ ಜೊತೆಗೆ ಡ್ರೆಸ್ಸಿಂಗ್ ರೂಮ್ ನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.

ಧೋನಿಗೆ ಕೇವಲ ಆಟ ನೋಡುವ ಅಭಿಮಾನಿಗಳು ಮಾತ್ರವಲ್ಲದೇ, ಹಲವಾರು ಜೂನಿಯರ್ ಕ್ರಿಕೇಟಿಗರು ಸಹ ಧೋನಿಯವರ ಅಭಿಮಾನಿಗಳು. ಈಗ ಧೋನಿ ಮತ್ತೊಮ್ಮೆ ಡ್ರೆಸ್ಸಿಂಗ್ ರೂಮ್ ಗೆ ಮರಳಿರುವುದು, ತಂಢದಲ್ಲಿ ಹೊಸ ಹುರುಪು ತಂದಿದೆ ಎಂದು ಕೆ.ಎಲ್.ರಾಹುಲ್ ಹೇಳಿದ್ದಾರೆ‌.

ಧೋನಿ ತಂಡ ಕೂಡಿಕೊಂಡಿದ್ದು, ತಂಡದಲ್ಲಿ ಹೊಸ ಶಕ್ತಿ ಉಗಮವಾಗಿದೆ ಎಂದು ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ಹೇಳಿದ್ದರು. ಈಗ ಅದೇ ಮಾತನ್ನ ಪುನರುಚ್ಚಿಸಿರುವ ರಾಹುಲ್ ಸಹ ಧೋನಿಯ ಹಾಜರಾತಿ ಡ್ರೆಸ್ಸಿಂಗ್ ರೂಮಿನಲ್ಲಿ ಆಟಗಾರರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ. ಇದು ಕ್ರೀಡಾಂಗಣದಲ್ಲಿಯೂ ಪುನರಾವರ್ತಿಸಿದರೇ, ಖಂಡಿತ ನಮಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದ್ದಾರೆ.

ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಳ್ಳುವ ಧೋನಿ ಈ ಭಾರಿ ಟಿ 20 ಕಪ್ ತಂಡದ ಮೆಂಟರ್ ಆಗಿ , ಡಗ್ ಔಟ್ ನಲ್ಲಿ ಕುರುತ್ತಿದ್ದಾರೆ. ತಂಡದ ಸಂಯೋಜನೆ, ಬ್ಯಾಟಿಂಗ್ ಕ್ರಮಾಂಕ, ಬೌಲಿಂಗ್ ಬದಲಾವಣೆ ಇವೆಲ್ಲವುದರ ಬಗ್ಗೆ ನಾಯಕ ವಿರಾಟ್ ಕೊಹ್ಲಿಗೆ ಸೂಕ್ತ ಸಲಹೆಗಳನ್ನ ನೀಡುವ ಮೂಲಕ ಈ ಭಾರಿ ಭಾರತ ಟಿ 20 ವಿಶ್ವಕಪ್ ನ್ನು ಎತ್ತಿಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.