ಟ್ರೊಲ್ ಆಗುತ್ತಿರುವ ಜೋಡಿಯ ಕುರಿತು ಬಯಲಾಯಿತು ಮತ್ತೊಂದು ಸತ್ಯ, ಅಸಲಿಗೆ 45 ರ ವ್ಯಕ್ತಿಯನ್ನು 25 ವರ್ಷದ ಹುಡುಗಿ ಮದುವೆಯಾದ ಅಸಲಿ ಕಹಾನಿ.

ನಮಸ್ಕಾರ ಸ್ನೇಹಿತರೇ, ಒಂದು ಮಾತಿದೆ. ಮದುವೆ ಅನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಅಂತ. ಹೌದು. ಇಂಥ ಗಂಡಿಗೆ ಇಂಥದ್ದೇ ಹೆಣ್ಣು ಎಂದು ಹೇಳುವುದು ತುಂಬಾನೇ ಕಷ್ಟ. ಯಾರು ಯಾರಿಗೆ ಯಾವಾಗ ಜೊತೆಯಾಗುತ್ತಾರೆ ಎಂದು ಯಾರಿಗೂ ಮುಂಚಿತವಾಗಿಯೇ ಗೊತ್ತಿರುವುದಿಲ್ಲ. ಕೆಲವೊಮ್ಮೆ ಇವನನ್ನೇ ಮದುವೆಯಾಗುತ್ತೇನೆ ಅಂದು ಕೊಂಡಿರುವ ಎಷ್ಟೋ ಮಂದಿ ಬೇರೆಯವರನ್ನ ಮದುವೆಯಾಗುವ ಘಟನೆ ನಡೆಯುತ್ತೆ. ಪ್ರೀತಿ ಮಾಡಿದ ಜೋಡಿ ಕೂಡ ಬೇರೆ ಬೇರೆಯವರನ್ನು ಮದುವೆಯಾದ ಅದೆಷ್ಟು ಉದಾಹರಣೆಗಳಿಲ್ಲ!

ಮದುವೆಗೆ ಯಾವುದೇ ಬೇಧ ಭಾವವಿಲ್ಲ. ಇಬ್ಬರು ಪರಸ್ಪರ ಒಪ್ಪಿಕೊಂಡರೆ ಮುಗಿತು. ಮದುವೆಯಾಗಬಹುದು. ಆದರೂ ಸಾಕಷ್ಟು ಕಟ್ಟುನಿಟ್ಟುಗಳು ಮದುವೆಯ ವಿಷಯದಲ್ಲಿ ಇದ್ದೇ ಇರುತ್ತೆ ಬಿಡಿ. ಆದರೆ ಯಾವುದೇ ಕಟ್ಟುಪಾಡುಗಳಿಲ್ಲದೇ ಆತನಿಗೆ ೪೫ ಆದರೂ ಆಕೆಗೆ ೨೫ ವಯಸ್ಸೇ ಆಗಿದ್ದರೂ ಪರಸ್ಪರ ಒಪ್ಪಿ ದೇವಸ್ಥಾನವೊಂದರಲ್ಲಿ ಮದುವೆಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.

ಮೇಘನಾ ಎಂಬಾಕೆ ಸಂತೆಮಾವತ್ತೂರು ಗ್ರಾಮದ ನಿವಾಸಿ. ಈಕೆಗೆ ಈ ಮೊದಲೆ ಒಂದು ಮದುವೆಯಾಗಿ ಕಳೆದ ಎರಡು ವರ್ಷಗಳಿಂದ ಆಕೆಯ ಪತಿ ಕಾಣೆಯಾಗಿದ್ದಾರೆ. ಹೀಗಾಗಿ ಒಂಟಿಯಾಗಿದ್ದ ಮೇಘನಾ, 45 ವರ್ಷದ ವ್ಯಕ್ತಿಯನ್ನ ಬಯಸಿ ಮದುವೆಯಾಗಿದ್ದಾಳೆ! ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ೪೫ ವರ್ಷ ವಯಸ್ಸಿನ ಶಂಕರಣ್ಣ ಇನ್ನೂ ಮದುವೆಯಾಗದೇ ಒಂಟಿಯಾಗಿಯೇ ಇದ್ದರು. ಮೇಘನಾ ಸ್ವತಃ ಶಂಕರಣ್ಣ ಬಳಿ ಹೋಗಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಮೊದಲೇ ಒಂಟಿಯಾಗಿದ್ದ ಶಂಕರಣ್ಣ ಮೇಘನಾ ಮಾತಿಗೆ ಸಮ್ಮತಿಸಿ, ಸಮೀಪದ ದೇವಾಲಯವೊಂದರಲ್ಲಿ ವಿವಾಹವಾಗಿದ್ದಾರೆ. ಮೇಘನಾ ಹಾಗೂ ಶಂಕರಣ್ಣ ಮದುವೆಯಾಗಿರುವ ಫೋಟೋ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜ್ಕ ಜಾಲತಾಣದಲ್ಲಿ ಸಕ್ಕತ್ ಸುದ್ದಿ ಮಾಡಿವೆ.