ಒಂದು ಕಾಲದಲ್ಲಿ ಬಹುಬೇಡಿಕೆ ನಟಿಯಾಗಿದ್ದ ಮುಮೈತ್ ಖಾನ್ ಈಗ ಅವಕಾಶಗಳಿಲ್ಲದೆ ಏನು ಮಾಡುತ್ತಿದ್ದಾರೆ ಗೊತ್ತೇ? ಅಯ್ಯೋ ಅನಿಸುತ್ತದೆ.

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿತ್ರರಂಗ ಎನ್ನುವುದೇ ಹಾಗೆ ಒಂದು ಕಾಲದಲ್ಲಿ ಸ್ಟಾರ್ ನಟ ಹಾಗೂ ನಟಿಯರಾಗಿ ಮೆರೆದವರು ಇನ್ನೊಂದು ಕಾಲದಲ್ಲಿ ಯಾವ ಅವಕಾಶಗಳು ಇಲ್ಲದೆ ಕೂಡ ಬಡತನದ ಜೀವನವನ್ನು ಜೀವಿಸುತ್ತಿರುತ್ತಾರೆ. ಇನ್ನು ನಾವು ಇಂದು ಹೇಳಹೊರಟಿರುವ ವಿಷಯ ಕೂಡ ಒಂದು ಲೆಕ್ಕದಲ್ಲಿ ಇದೇ ರೀತಿಯಾಗಿದೆ. ಒಂದುಕಾಲದಲ್ಲಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಬಹುಭಾಷಾ ತಾರೆಯಾಗಿ ಎಲ್ಲರ ನೆಚ್ಚಿನ ಐಟಂ ಡ್ಯಾನ್ಸರ್ ನಟಿಯಾಗಿ ಮಿಂಚಿದ್ದ ಮುಮೈತ್ ಖಾನ್ ಈಗ ಏನಾಗಿದ್ದಾರೆ ಎಂಬ ಕುರಿತಂತೆ ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಒಂದು ಕಾಲದಲ್ಲಿ ಇವರ ಕಾಲ್ ಶೀಟ್ ಗಾಗಿ ಬಹುಭಾಷೆಯ ನಿರ್ಮಾಪಕರು ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಮುಮೈತ್ ಖಾನ್ ರವರು ಎಷ್ಟು ಬ್ಯುಸಿಯಾಗಿದ್ದಾರೆ ಅಂದರೆ ಅವರು ಪ್ರತಿದಿನವೂ ಕೂಡ ಒಂದಲ್ಲ ಒಂದು ಚಿತ್ರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಈ ಮುಂಬೈ ಹುಡುಗಿಯನ್ನು ತಮ್ಮ ಚಿತ್ರಗಳಲ್ಲಿ ಕುಣಿತ ಬೇಕು ಎಂಬುದಾಗಿ ಹಲವಾರು ನಿರ್ದೇಶಕರು ಹಾಗೂ ನಿರ್ಮಾಪಕರು ತುದಿಗಾಲಿನಲ್ಲಿ ತಿಂಗಳಾನುಗಟ್ಟಲೆ ಕಾಯುತ್ತಿದ್ದರು.

ಇಂತಹ ನಟಿ ಮುಂದಿನ ದಿನಗಳಲ್ಲಿ ತಮ್ಮ ಪ್ರಿಯತಮನಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲು ಪ್ರಾರಂಭಿಸಿದರು. ಎಲ್ಲರಿಗಿಂತ ಹೆಚ್ಚಾಗಿ ತಮ್ಮ ಪ್ರಿಯತಮ ಇಷ್ಟಪಟ್ಟಂತೆ ತಮ್ಮ ಮುಖವನ್ನು 40 ಲಕ್ಷ ನೀಡಿ ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿಕೊಂಡರು. ಆದರೆ ಇದಾದ ನಂತರ ಬಂದ ಹೊಸ ಮುಖಗಳು ಮುಮೈತ್ ಖಾನ್ ರವರ ಅವಕಾಶಗಳನ್ನು ಕಸಿಯಲಾರಂಭಿಸಿದರು. ಇದರಿಂದಾಗಿ ಅವಕಾಶಗಳು ಪೂರ್ಣವಾಗಿ ನಿಂತು ಹೋದ ಮೇಲೆ ಆಂಧ್ರಪ್ರದೇಶದ ಜಾತ್ರೆಯಲ್ಲಿ ರೆಕಾರ್ಡ್ ಡ್ಯಾನ್ಸ್ ಮಾಡಲು ಒಪ್ಪಿಕೊಂಡಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ಒಂದು ಕಾಲದಲ್ಲಿ ಬಹುಬೇಡಿಕೆಯ ಕಲಾವಿದೆಯಾಗಿದ್ದ ಮುಮೈತ್ ಖಾನ್ ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದು. ಈ ಕಥೆಯಿಂದ ನಮಗೆ ತಿಳಿದುಬರುವುದೇನೆಂದರೆ ಯಾವುದು ಕೂಡ ಶಾಶ್ವತವಲ್ಲ ಎಂಬುದು.

Get real time updates directly on you device, subscribe now.