ನಮ್ಮ ನೆಚ್ಚಿನ ಎಬಿ ಡಿವಿಲಿಯರ್ಸ್ ರವರ ವಿರುದ್ಧ ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಲಾರಾ, ಆರ್ಸಿಬಿ ಅಭಿಮಾನಿಗಳು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬ್ರಿಯಾನ್ ಲಾರಾ ವೆಸ್ಟ್ ಇಂಡೀಸ್ ನ ದಂತಕಥೆ. ಕ್ರಿಕೇಟ್ ಜಗತ್ತಿನಲ್ಲಿ ಅತಿ ಹೆಚ್ಚು ಹಾಗೂ ಯಾರು ಮುರಿಯಲಾಗದ ದಾಖಲೆಗಳನ್ನ ನಿರ್ಮಿಸಿದವರು ಎಂದರೇ ಅದು ಲಾರಾ. ಈಗಲೂ ಅವರು ಟೆಸ್ಟ್ ಕ್ರಿಕೇಟ್ ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅಜೇಯ 400 ರನ್ ಗಳಿಸಿದ್ದು ಇಂದಿಗೂ ವಿಶ್ವದಾಖಲೆಯಾಗಿದೆ. ಈ ನಡುವೆ ಇತ್ತಿಚೆಗೆ ಆರ್ಸಿಬಿ ತಂಡದ ಸೋಲಿನ ಬಳಿಕ ಬ್ರಿಯಾನ್ ಲಾರಾ ನೀಡಿದ ಒಂದು ಹೇಳಿಕೆ , ಈಗ ಆರ್ಸಿಬಿ ಅಭಿಮಾನಿಗಳಿಗೂ ಮತ್ತು ಬ್ರಿಯಾನ್ ಲಾರಾ ನಡುವೆ ದೊಡ್ಡ ಚರ್ಚೆ ಶುರುವಾಗಿದೆ.

ಮುಂದಿನ ಸೀಸನ್ ನ ಸಾರ್ವತ್ರಿಕ ಹರಾಜು ಈ ಡಿಸೆಂಬರ್ ನಲ್ಲಿ ನಡೆಯಲಿದ್ದು, ಫ್ರಾಂಚೈಸಿಗಳು ಉಳಿಸಿಕೊಳ್ಳುವ ಪಟ್ಟಿಯಲ್ಲಿ ಆರ್ಸಿಬಿ ತಂಡ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ಗ್ಲೆನ್ ಮ್ಯಾಕ್ಸವೆಲ್ ರನ್ನ ಉಳಿಸಿಕೊಂಡು ಎಬಿ ಡಿ ವಿಲಿಯರ್ಸ್ ರವರನ್ನ ಹರಾಜಿಗೆ ಬಿಡುಗಡೆ ಮಾಡಬೇಕು ಎಂದು ಸಲಹೆ ನೀಡಿದ್ದರು. ಸದ್ಯ 38 ವರ್ಷದ ಎಬಿ ಡಿ ವಿಲಿಯರ್ಸ್ ಸದ್ಯ ಫಾರ್ಮ್ ಕಳೆದು ಕೊಂಡಿದ್ದಾರೆ‌. ಈ ಸರಣಿಯಲ್ಲಿ ಎಬಿಡಿ ಬ್ಯಾಟ್ ನಿಂದ ಉತ್ತಮ ರನ್ನುಗಳು ಬರಲೇ ಇಲ್ಲ. ಹಾಗಾಗಿ ಆರ್ಸಿಬಿ ತಂಡ ಸೋಲಬೇಕಾಯಿತು ಎಂದು ಲಾರಾ ಹೇಳಿದ್ದರು. ಅದಲ್ಲದೇ ಎಬಿಡಿಗೆ ಮುಂದಿನ ವರ್ಷ ಅಂದರೇ 39 ವರ್ಷ ವಯಸ್ಸಾಗಿರುತ್ತದೆ. ಹಾಗಾಗಿ ಅವರನ್ನ ತಂಡದಲ್ಲಿ ಉಳಿಸಿಕೊಳ್ಳುವ ಬದಲು ಹರಾಜಿಗೆ ಬಿಡುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೇ ಇದು ಆರ್ಸಿಬಿ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಲಿಲ್ಲ. ಆರ್ಸಿಬಿ ಅಭಿಮಾನಿಗಳಿಗೆ ಎಬಿಡಿ ಎಂದರೇ ವಿಶೇಷವಾದ ಗೌರವ. ಎಬಿಡಿಯನ್ನ ಅವರು ಕರೆಯುವುದೇ ಆಪತ್ಭಾಂದವ ಎಂದು. ಅವರ ಮೇಲೆಯೇ ಲಾರಾ ಈ ರೀತಿಯ ಗುರುತರ ಆರೋಪಗಳನ್ನ ಹೊರಿಸಿರುವುದು ಆರ್ಸಿಬಿ ಅಭಿಮಾನಿಗಳಿಗೆ ಕೋಪ ತರಿಸಿದೆ. ಅಷ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು, ಬ್ರಿಯಾನ್ ಲಾರಾರವರಿಂದ ನಮಗೆ ಸರ್ಟಿಫಿಕೇಟ್ ನ ಅವಶ್ಯಕತೆ ಇಲ್ಲ. ಆರ್ಸಿಬಿ ತಂಡ ಎಲ್ಲಿಯ ತನಕ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯ ತನಕ ನಮ್ಮ ಎಬಿ ಡಿ ವಿಲಿಯರ್ಸ್ ಆರ್ಸಿಬಿ ತಂಡದ ಅವಿಭಾಜ್ಯ ಅಂಗ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಆರ್ಸಿಬಿ ಅಭಿಮಾನಿಗಳು ಎಬಿಡಿಯವರನ್ನ ಬಿಟ್ಟುಕೊಡಲು ತಯಾರಿಲ್ಲ. ಆದರೇ ಆರ್ಸಿಬಿ ಫ್ರಾಂಚೈಸಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.